ರೀಲ್ಸ್ ನಿಂದ ವೈರಲ್ ಆಗಿ ಸೀರಿಯಲ್ ಗೆ ಆಯ್ಕೆಯಾದ ನಟ-ನಟಿಯರಿವರು
ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟ-ನಟಿಯರು ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದೇ ರೀಲ್ಸ್ ಮೂಲಕ. ಅವರಲ್ಲಿ ಹೆಚ್ಚು ಜನಪ್ರಿಯತೆ ಪಡೆದ ನಟರು ಇವರೇ ನೋಡಿ.
ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟ-ನಟಿಯರು ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದೇ ರೀಲ್ಸ್ ಮೂಲಕ. ಅವರಲ್ಲಿ ಹೆಚ್ಚು ಜನಪ್ರಿಯತೆ ಪಡೆದ ನಟರು ಇವರೇ ನೋಡಿ.
ಸೀರಿಯಲ್ ಗೆ (serial actors) ಎಂಟ್ರಿ ಕೊಡುವಾ ಎಲ್ಲಾ ನಟ -ನಟಿಯರು ನಟನೆಯನ್ನು ಕಲಿತು ಬಂದಿರೋರು ಆಗಿರೋದಿಲ್ಲ. ಕೆಲವರಿಗೆ ಅದೃಷ್ಟ ಸಾತ್ ನೀಡಿದ್ರೆ, ಇನ್ನೂ ಕೆಲವರಿಗೆ ತಾವು ಮಾಡುವ ರೀಲ್ಸ್ ಸಾಲ್ಸ್ ನೀಡುತ್ತೆ. ಕನ್ನಡದ ಈ ನಟ-ನಟಿಯರು ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದೇ ತಮ್ಮ ರೀಲ್ಸ್ ಮೂಲಕ.
ಪ್ರತಿಮಾ :
ಅಂತರಪಟ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ತಂಗಿಯಾಗಿ ಹಾಗೂ ಹೊಸದಾಗಿ ಶುರುವಾಗಲಿರುವ ಮುದ್ದು ಸೊಸೆ ಧಾರಾವಾಹಿಯಲ್ಲಿ ತ್ರಿವಿಕ್ರಮ್ ಗೆ ನಾಯಕಿಯಾಗಿ ನಟಿಸುತ್ತಿರುವ ನಟಿ ಪ್ರತಿಮಾ (Prathima Thakur) ರೀಲ್ಸ್ ಮೂಲಕವೇ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದು.
ಭವ್ಯಾ ಗೌಡ :
ಗೀತಾ ಸೀರಿಯಲ್ ಮೂಲಕ ಮನೆ ಮಾತಾದ ಭವ್ಯಾ ಗೌಡ (Bhavya Gowda) ಕೂಡ ರೀಲ್ಸ್ ಮೂಲಕವೇ ಜನಪ್ರಿಯತೆ ಪಡೆದಿದ್ದರು, ಗೀತಾ ಸೀರಿಯಲ್ ಆರಂಭದಲ್ಲಿ ಇವರಿಗೆ ನಟನೆ ಬರೋದೆ ಇಲ್ಲ ಎಂದು ಟೀಕೆಗಳು ಸಹ ವ್ಯಕ್ತವಾಗಿದ್ದವು. ಬಳಿಕ ಜನ ಇವರನ್ನ ಇಷ್ಟ ಪಟ್ಟಿದ್ದರು. ಶೀಘ್ರದಲ್ಲಿ ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ ನಟಿಸಲಿದ್ದಾರೆ.
ಧನುಷ್ ಗೌಡ :
ಗೀತಾ ಧಾರಾವಾಹಿಯಲ್ಲಿ ಭವ್ಯಾ ಗೌಡ ಜೊತೆ ನಟಿಸಿದ್ದ ಮತ್ತೊಬ್ಬ ನಟ ಧನುಷ್ ಗೌಡ (Dhanush Gowda), ಈ ಸೀರಿಯಲ್ ಮೂಲಕ ಧನುಷ್ ಕೂಡ ಜನಪ್ರಿಯತೆ ಪಡೆದರು. ಇವರು ಕೂಡ ರೀಲ್ಸ್ ಮೂಲಕ ಖ್ಯಾತಿ ಪಡೆದರು. ಸದ್ಯ ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಮಧು ಭೈರಪ್ಪ :
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಯಜಮಾನ ಧಾರಾವಾಹಿಯಲ್ಲಿ ಗಂಡಸರನ್ನು ಕಂಡರೆ ಉರಿದು ಬೀಳುವ ಝಾನ್ಸಿ ಪಾತ್ರದ ಮೂಲಕ ಸದ್ದು ಮಾಡುತ್ತಿರುವ ಸ್ಟೈಲಿಶ್ ಬೆಡಗಿ ಮಧು ಭೈರಪ್ಪ (Madhushree Byrappa) ಅವರು ಕೂಡ ಇನ್’ಸ್ಟಾಗ್ರಾಂ ರೀಲ್ಸ್ ಮೂಲಕವೇ ಜನಪ್ರಿಯತೆ ಪಡೆದಿರೋದು.
ಪ್ರಿಯಾಂಕಾ ಡಿ ಎಸ್ :
ಪುಣ್ಯವತಿ (Punyavathi), ಆಸೆ ಸೀರಿಯಲ್ ಗಳಲ್ಲಿ ಅದ್ಭುತವಾಗಿ ನಟಿಸಿ, ತಮ್ಮ ಪಾತ್ರಕ್ಕೆ ಜೀವ ತುಂಬಿರುವ ಬೆಡಗಿ ಪ್ರಿಯಾಂಕಾ ಡಿ ಎಸ್. ಎರಡೂ ಧಾರಾವಾಹಿಯಲ್ಲು ಮಿಡಲ್ ಕ್ಲಾಸ್ ಹುಡುಗಿಯ ಪಾತ್ರಕ್ಕೆ ಪ್ರಿಯಾಂಕಾ ಜೀವ ತುಂಬಿದ್ದರು. ಇವರು ಕೂಡ ಪುಣ್ಯವತಿ ಸೀರಿಯಲ್ ಗೆ ಆಯ್ಕೆಯಾಗಿದ್ದು, ರೀಲ್ಸ್ ಮೂಲಕ.
ವರುಣ್ ಆರಾಧ್ಯಾ :
ಇನ್’ಸ್ಟಾಗ್ರಾಂ ರೀಲ್ಸ್ ಗಳ ಮೂಲಕವೇ ಸದ್ದು ಮಾಡಿ, ತಮ್ಮ ಲವ್ ಸ್ಟೋರಿ ಮೂಲಕ ವೈರಲ್ ಆಗಿದ್ದವರು ವರುಣ್ ಆರಾಧ್ಯಾ (Varun Aradhya). ಲಿಪ್ ಸಿಂಕಿಂಗ್ ವಿಡಿಯೋ ಮೂಲಕವೇ ವರುಣ್ ಆರಾಧ್ಯಾ ಬೃಂದಾವನ ಸೀರಿಯಲ್ ನಲ್ಲಿ ಅವಕಾಶ ಪಡೆದರು.