ಎಲ್ಲಾ ಸೀರಿಯಲ್ ಬಿಟ್ಟು ಜನ ಆಸೆ ಸೀರಿಯಲ್ ಇಷ್ಟಪಡ್ತಿರೋದು ಯಾಕೆ?
ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಧಾರಾವಾಹಿ ಜನರಿಂದ ಮೆಚ್ಚುಗೆ ಪಡೆದು, ಅದ್ಭುತವಾಗಿ ಪ್ರಸಾರವಾಗುತ್ತಿದೆ. ಯಾಕೆ ಜನ ಈ ಸೀರಿಯಲ್ ಇಷ್ಟೊಂದು ಇಷ್ಟಪಡ್ತಿದ್ದಾರೆ.
ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಧಾರಾವಾಹಿ ಜನರಿಂದ ಮೆಚ್ಚುಗೆ ಪಡೆದು, ಅದ್ಭುತವಾಗಿ ಪ್ರಸಾರವಾಗುತ್ತಿದೆ. ಯಾಕೆ ಜನ ಈ ಸೀರಿಯಲ್ ಇಷ್ಟೊಂದು ಇಷ್ಟಪಡ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಚಾನೆಲ್ ಗಳಲ್ಲಿ, ಅದೆಷ್ಟೋ ಸೀರಿಯಲ್ ಗಳು (Kannada serial) ಪ್ರಸಾರವಾಗುತ್ತಿವೆ. ಆದರೆ ಎಲ್ಲಾ ಸೀರಿಯಲ್ ಗಳು ಜನರಿಗೆ ಇಷ್ಟವಾಗೋದಿಲ್ಲ. ಕೆಲವೊಂದು ಸೀರಿಯಲ್ ಗಳನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟು ನೋಡ್ತಾರೆ.
ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ನ್ನು ಜನರು ಇಷ್ಟ ಪಟ್ಟು ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಂತೂ ಈ ಸೀರಿಯಲ್ ಹವಾ ಜೋರಾಗಿಯೇ ಇದೆ.
ಹೂಮಾರುವ ಹುಡುಗಿ ಮೀನಾ ಹಾಗೂ ಕ್ಯಾಬ್ ಡ್ರೈವರ್ ಸೂರ್ಯನ ಕಥೆ ‘ಆಸೆ’. ಈ ಧಾರಾವಾಹಿಯನ್ನು ರಮೇಶ್ ಅರವಿಂದ್ (Ramesh Aravind) ನಿರ್ಮಾಣ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಫ್ಯಾಮಿಲಿ ಕಥೆಯನ್ನು ಹೊಂದಿರುವ ಈ ಸೀರಿಯಲ್ ಜನರಿಗೆ ಸುಲಭವಾಗಿ ರೀಚ್ ಆಗುತ್ತಿದೆ.
ಆರಂಭದಿಂದಲೇ ಒಬ್ಬರನ್ನೊಬ್ಬರು ತಪ್ಪಾಗಿ ಅರ್ಥ ಮಾಡಿಕೊಂಡು, ಕಿತ್ತಾಡಿಕೊಳ್ಳುವ ಜೋಡಿ ಸೂರ್ಯ ಮತ್ತು ಮೀನಾ. ಅತ್ತಿಗೆಯಾಗಬೇಕಾಗಿದ್ದ ಮೀನಾ, ಅಣ್ಣ ಮದುವೆ ಮನೆಯಿಂದ ಓಡಿಹೋದ ತಪ್ಪಿನಿಂದ ತಮ್ಮ ಸೂರ್ಯನ ಹೆಂಡತಿಯಾಗ್ತಾಳೆ. ಅಲ್ಲಿಂದ ಇವರಿಬ್ಬರ ಕಿತ್ತಾಟ, ನಂತರ ಪ್ರೀತಿ ಎಲ್ಲವೂ ಶುರುವಾಗುತ್ತೆ.
ತುಂಬಾನೆ ಕಷ್ಟಪಟ್ಟು ಜೀವನದಲ್ಲಿ ಹೇಗೆ ಮುಂದೆ ಬರೋದಕ್ಕೆ ಸಾಧ್ಯ? ಮನೆಯವರು ಎಷ್ಟೆ ಕಾಟ ಕೊಟ್ಟರೂ ಅದನ್ನೆಲ್ಲಾ ಮೆಟ್ಟಿ ನಿಂತು ಮುಂದೆ ಬರೋದು ಹೇಗೆ? ಗಂಡ ಹೆಂಡತಿ ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ಹೇಗೆ ಅನ್ನೋದೆ ಈ ಸೀರಿಯಲ್ ಕಥೆ
ಹೆಚ್ಚು ಆಡಂಬರವಿಲ್ಲದೇ, ಒಬ್ಬರನ್ನೊಬ್ಬರು ಕೊಲೆ ಮಾಡುವಂತಹ ದುರ್ಬುದ್ಧಿ ಇಲ್ಲದೇ, ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ನಡೆಯುವಂತಹ ಕಿತ್ತಾಟವೇ ಈ ಧಾರಾವಾಹಿಯ ಕಥೆ. ಅದಕ್ಕೇನೆ, ಈ ಸಿಂಪಲ್ ಮಧ್ಯಮವರ್ಗದ ಕಥೆಯನ್ನು ಜನರು ಸಿಕ್ಕಾಪಟ್ಟೆ ಇಷ್ಟಪಡ್ತಿದ್ದಾರೆ.
ಈ ಸೀರಿಯಲ್ ನಲ್ಲಿ ಯಾವುದೇ ದೃಶ್ಯವನ್ನು ಅಬ್ಬರವಾಗಿ ತೋರಿಸಲ್ಲ, ಯಾವುದೇ ಪಾತ್ರವನ್ನು ಬಿಲ್ಡ್ ಅಪ್ ಕೊಟ್ಟು ತೋರಿಸೋದು ಇಲ್ಲ. ಸಮಾಜಕ್ಕೆ ಘಾತುಕವಾದಂತಹ ಯಾವ ವಿಲನ್ ಗಳು ಕೂಡ ಇಲ್ಲ. ಇಂತಹ ಕಥೆಯನ್ನೇ ಅಲ್ವಾ? ಜನರು ಆಸೆ ಧಾರಾವಾಹಿಯನ್ನು ಅಷ್ಟೊಂದು ಇಷ್ಟ ಪಟ್ಟು ನೋಡೋದು.
ಆಸೆ ಧಾರಾವಾಹಿಯಲ್ಲಿ ಮಂಡ್ಯ ರಮೇಶ್ (Mandya Ramesh), ನಿನಾದ್ ಹರಿಸ್ತಾ, ಪ್ರಿಯಾಂಕಾ, ಸ್ನೇಹಾ, ಇಂಚರಾ ಜೋಶಿ ಸೇರಿ ಹಲವಾರು ನಟ -ನಟಿಯರು ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿದೆ ಈ ಸೀರಿಯಲ್.