Latest Videos

ಏನ್ ಸಣ್ಣ ಆಗ್ಬೇಕು ಅಂತ ಜಿಮ್ ಮಾಡ್ತಿದ್ಯಾ ಅಕ್ಕಾ?; 'ಲಕ್ಷ್ಮಿ ನಿವಾಸ' ನೀಲು ಕಾಲೆಳೆದ ನೆಟ್ಟಿಗರು

First Published May 22, 2024, 2:02 PM IST

ಪ್ರತಿ ದಿನ ಜಿಮ್ ವರ್ಕೌಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವ ಮಾನಸ. ನೀಲುನೇ ಬೇರೆ ನೀವೇ ಬೇರೆನಾ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ನೀಲು ಪಾತ್ರದಲ್ಲಿ ಮಿಂಚುತ್ತಿರುವ ಮಾನಸ ಮನೋಹರ್‌ ಪ್ರತಿ ನಿತ್ಯ ವರ್ಕೌಟ್ ಮಾಡುತ್ತಿದ್ದಾರೆ. 

ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ನಟಿಸಿ ಸಖತ್ ಹೆಸರು ಮಾಡಿದ ಮಾನಸ ಸಣ್ಣ ಬ್ರೇಕ್ ತೆಗೆದುಕೊಂಡು ಈಗ ಲಕ್ಷ್ಮಿ ನಿವಾಸಕ್ಕೆ ಕಾಲಿಟ್ಟಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮಾನಸ ಪ್ರತಿ ನಿತ್ಯ ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇದು ಸಖತ್ ವೈರಲ್ ಆಗಿದೆ. 

'ಪ್ರತಿ ಒಳ್ಳೆ ಕೆಲಸ ತಡವಾಗಿ ನಡೆಯಬಹುದು ಆದರೆ ಖಂಡಿತಾ ಒಳ್ಳೆ ಫಲ ಕೊಡುತ್ತದೆ. ಎಂದೂ ಕ್ವಿಟ್ ಮಾಡಬಾರದು' ಎಂದ ಮಾನಸ ಬರೆದುಕೊಂಡಿದ್ದಾರೆ.

ಇರೋ ಸಣ್ಣ ಸಾಲದಾ? ಏನ್ ಸಣ್ಣ ಆಗ್ಬೇಕು ಅಂತ ವರ್ಕೌಟ್ ಮಾಡ್ತಿದ್ದೀರಾ? ತೀರಾ ಸಣ್ಣ ಆದ್ರೆ ನೋಡೋಕೆ ಆಗಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಸಿದ್ದೇಗೌಡ್ರು ಮತ್ತು ಭಾವನಾ ಪ್ರೀತಿಗೆ ನೀಲು ಸಪೋರ್ಟ್ ಮಾಡ್ತಿದ್ದಾರಾ ಅಥವಾ ಹಿಂದಿನಿಂದ ಕೆಲಸ ಮಾಡಿಕೊಂಡು ಕುತಂತ್ರ ಮಾಡ್ತಿದ್ದಾರಾ ಅನ್ನೋದು ಎಲ್ಲರಿಗೂ ಪ್ರಶ್ನೆ ಆಗಿದೆ.

click me!