Latest Videos

ಸಿದ್ದೇಗೌಡರಿಗೆ ಜೋಡಿಯಾದ ಪೂರ್ವಿ...‌ನಾವಿನ್ನು ಸೀರಿಯಲ್‌ ನೋಡಲ್ಲ‌ವೆಂದ ಸೀರಿಯಲ್ ಫ್ಯಾನ್ಸ್!

First Published May 22, 2024, 12:29 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೊಸ ಪಾತ್ರ ಎಂಟ್ರಿ ಕೊಟ್ಟಿದ್ದು, ಸಿದ್ಧೇಗೌಡರಿಗೆ ಜೋಡಿಯಾಗಲಿರುವ ಪಾತ್ರ ಇದಾಗಿದೆ. ವೀಕ್ಷಕರು ಇದನ್ನು ನೋಡಿ ಈ ಲವ್ ಸ್ಟೋರಿನೂ ಮುಗಿಸಿಬಿಡ್ತೀರಾ? ಇನ್ನು ನಾವು ಸೀರಿಯಲ್ ನೋಡಲ್ಲ ಅಂತಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸಿದ್ಧೇ ಗೌಡರು ಮತ್ತು ಭಾವನಾ ಜೋಡಿಯನ್ನು ಜನರು ತುಂಬಾ ಮೆಚ್ಚಿಕೊಂಡಿದ್ದಾರೆ. ಇತ್ತೀಚಿಗೆ ಹೆಚ್ಚಾಗಿ ಇವರಿಬ್ಬರ ಸೀನ್ ಗಳೇ ಹೆಚ್ಚಾಗಿರುತ್ತಿದ್ದವು, ಕಾರಣ ಜನ ತುಂಬಾ ಇಷ್ಟಪಟ್ಟ ಜೋಡಿ ಇವು. ಆದರೆ ಇದೀಗ ಸೀರಿಯಲ್ ನಲ್ಲಿ ಹೊಸದೊಂದು ಟ್ವಿಸ್ಟ್ ಕೊಟ್ಟಿದ್ದಾರೆ. 
 

ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡೋದ್ರಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ (Serial) ಯಾವಾಗಲೂ ಮುಂದು, ಸೀರಿಯಲ್ ಆರಂಭದಿಂದ ಇಲ್ಲಿವರೆಗೂ ಹಲವಾರು ಟ್ವಿಸ್ಟ್ ನೀಡುತ್ತಲೇ ಬಂದಿದೆ. ಜಾಹ್ನವಿ ವಿಶ್ವನ ಪ್ರೀತಿ, ಅವರಿಬ್ಬರ ಜೋಡಿ ಎಷ್ಟು ಚೆಂದ ಎನ್ನುವಾಗಲೇ ಜಯಂತ್ ಎಂಟ್ರಿ, ಬರಬರುತ್ತ ಜಾನು -ಜಯಂತ್ ಜೋಡಿಯನ್ನು ಜನ ಮೆಚ್ಚಿಕೊಂಡರು. ಜಯಂತ್ ನಂತಹ ಹುಡುಗ ಎಲ್ಲೂ ಇರಲಾರರು ಎಂದು ಹೇಳುವಾಗಲೇ ಜಯಂತ್ ಒಬ್ಬ ಸೈಕೋ ಅನ್ನೋದು ಗೊತ್ತಾಗಿದೆ. 
 

ಇನ್ನು ಭಾವನಾ ವಿಷಯದಲ್ಲಿ ಯಾವಾಗಲೂ ಟ್ವಿಸ್ಟ್ ಗಳೇ ಇರುತ್ತಿತ್ತು. ಭಾವನಾಳ ಜಾತಕ ಧೋಷದಿಂದ ವರ್ಷ 30 ದಾಟಿದರೂ ಮದುವೆಯಾಗದೇ ಉಳಿದಿದ್ದು, ಬಾಸ್ ಇಷ್ಟಪಟ್ಟು ಮದುವೆಯಾಗಲು ಒಪ್ಪಿಗೆ ಸೂಚಿಸಿ, ಮದುವೆ ದಿನ ಭೀಕರ ಅಪಘಾತದಲ್ಲಿ ಕೊನೆಯುಸೆರೆಲೆಯುತ್ತಾರೆ. ಬಾಸ್ ಮಗು ಖುಷಿಯನ್ನು ಭಾವನಾ ಸಾಕುತ್ತಾಳೆ. ಅಷ್ಟರಲ್ಲೇ ಭಾವನಾ ಜೀವನಕ್ಕೆ ಸಿದ್ಧೇಗೌಡ್ರ ಎಂಟ್ರಿಯಾಗುತ್ತೆ. 
 

ಸಿದ್ಧೇಗೌಡ್ರಿಗೆ ಭಾವನಾ ಯಾರು ಅನ್ನೋದೆ ಗೊತ್ತಿಲ್ಲದೇ, ಆಕೆ ಮೇಲೆ ಲವ್ ಆಗುತ್ತೆ. ಆಕೆ ಹೋದಲ್ಲೆಲ್ಲಾ ಹೋಗಿ, ಫಾಲೋ ಮಾಡಿ, ಆಕೆಯ ಕೈಯಿಂದ ಬೈಯಿಸಿಕೊಂಡು, ಆಕೆಗೆ ಗೊತ್ತಿಲ್ಲದೇ ಹಲವು ಬಾರಿ ಸಹಾಯ ಮಾಡುತ್ತಲೇ ಇರುತ್ತಾನೆ. ಇವರಿಬ್ಬರ ಟಾಮ್ ಆಂಡ್ ಜೆರ್ರಿ ಜೋಡಿ ಜನರಿಗೆ ತುಂಬಾ ಹಿಡಿಸಿತ್ತು. ಭಾವನಾಳ ಮೆಚೂರಿಟಿ, ಸಿದ್ಧೇಗೌಡ್ರ ಹುಡುಗಾಟ ಎಲ್ಲವನ್ನೂ ನೋಡಿ ಭಾವನಾ ಸಿದ್ದೇಗೌಡ್ರನ್ನು ಒಪ್ಪಿಕೊಳ್ಳಲಿ, ಇಬ್ಬರೂ ಆದಷ್ಟು ಬೇಗ ಜೋಡಿಯಾಗಿ ಎನ್ನುತ್ತಿರುವಾಗಲೇ ಮತ್ತೊಂದು ಟ್ವಿಸ್ಟ್ ಬಂದಿದೆ. 
 

ಸಿದ್ಧೇಗೌಡ್ರಿಗೆ ಮದುವೆ ಮಾಡೋದಕ್ಕೆ ಹುಡುಗಿ ಹುಡುಕುತ್ತಿರುವ ಆತನ ತಾಯಿ, ಅವನಿಗೆ ದೇವಸ್ಥಾನಕ್ಕೆ ಬರೋದಕ್ಕೆ ಹೇಳ್ತಾಳೆ. ದೇವಸ್ಥಾನಕ್ಕೆ ಬಂದ ಸಿದ್ಧುವಿಗೆ, ಪೂರ್ವಿ ಅನ್ನೊ ಹುಡುಗಿಯನ್ನು ಜೋಡಿ ಮಾಡ್ತಿದ್ದಾರೆ. ಪೂರ್ವಿಯಾಗಿ ಪ್ರಕೃತಿ ಪ್ರಸಾದ್ (Prakruthi Prasad) ಎಂಟ್ರಿ ಕೊಟ್ಟಿದ್ದಾರೆ. ದೇವಸ್ಥಾನದ ಅರ್ಚಕರು ಸಿದ್ಧು ಮತ್ತು ಪೂರ್ವಿಗೆ ಹಾರವನ್ನು ಹಾಕಿ ಎಲ್ಲವೂ ಒಳ್ಳೆಯದಾಗಲಿ ಎಂದಿದ್ದಾರೆ. ಇವರಿಬ್ಬರನ್ನು ನೋಡಿ ಸಿದ್ದೇಗೌಡರ ಅಮ್ಮನಿಗೂ, ಅಕ್ಕನಿಗೂ ತುಂಬಾ ಖುಷಿಯಾಗಿದೆ. ಆದರೆ ವೀಕ್ಷಕರಿಗೆ ಮಾತ್ರ ಇದು ಇಷ್ಟವಾದಂತೆ ಕಾಣಿಸ್ತಿಲ್ಲ. 

ಭಾವನಾಳನ್ನ ಪ್ರೀತಿಸ್ತಿರೋ ಸಿದ್ದೇಗೌಡ್ರನ್ನ, ಪೂರ್ವಿ ಜೊತೆ ಮದುವೆ ಮಾಡ್ತಾರಾ ಮನೆಯವರು? ಎಂದು ಕ್ಯಾಪ್ಶನ್ ಹಾಕಿ ಝೀ ವಾಹಿನಿ ಪ್ರೊಮೊ ರಿಲೀಸ್ ಮಾಡಿದೆ. ಇದನ್ನ ನೋಡಿದ ಜನರು ಮಾತ್ರ ಸರಿ ಅನ್ನಿಸಿಲ್ಲ ನಮಗೆ ಜೋಡಿ ಗೌಡ್ರು ಭಾವನಾ ನೀ ಬೆಸ್ಟ್, ಗೌಡ್ರೆ ಮೊದ್ಲು ಓಡ್ಹೋಗಿ ನಿಮ್ ಲವ್ ನಿಮಗೆ ಸಿಗಲ್ಲ ಇಲ್ಲ ಅಂದ್ರೆ ಎಂದು ಕೆಲವರು ಹೇಳಿದ್ದಾರೆ. 
 

ಮತ್ತೆ ಕೆಲವರು ವಿಶ್ವ ನಿಂದ ದೂರ ಮಾಡಿ ಜಾನೂನ ಆ ಸೈಕೋ ನಾ ಮದ್ವೆ ಮಾಡ್ಸುದ್ರು. ಈಗ ನಮ್ಮ ಸಿದ್ದೇಶ್ ಗೌಡ್ರು ಏನು ಪಾಪ ಮಾಡುದ್ರು ಅಂತ ಈ ಹಿಂಸೆ ಯಪ್ಪಾ. ನಿಜ ಭಾವನಾ ಜೊತೆಗೆ ಮದ್ವೆ ಮಾಡ್ಸಿ ಪ್ಲೀಸ್, ಇಲ್ಲಾಂದ್ರೆ ಈ ಸೀರಿಯಲ್ ನೋಡೋದೇ ಬಿಡ್ತಿವಿ ಎಂದಿದ್ದಾರೆ. ಮತ್ತೊಬ್ಬರು ನಾವು ಸೀರಿಯಲ್ ನೋಡ್ತಿರೋದೆ ಸಿದ್ದು-ಭಾವನಾ ಜೋಡಿಗಾಗಿ, ದಯವಿಟ್ಟು ಅವರನ್ನು ಬೇರೆ ಮಾಡಬೇಡಿ ಎಂದಿದ್ದಾರೆ. 
 

click me!