ಚುಕ್ಕಿ ತಾರೆ ಸೀರಿಯಲ್‌ಗೆ ರೀ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಸಿರಿಜಾ

Published : May 22, 2024, 12:47 PM ISTUpdated : May 22, 2024, 12:52 PM IST

ಕಲರ್ಸ್ ಕನ್ನಡದಲ್ಲಿ ವಿಭಿನ್ನವಾಗಿ ಮೂಡಿ ಬರುತ್ತಿರುವ ಚುಕ್ಕಿ ತಾರೆ ಸೀರಿಯಲ್ ನಲ್ಲಿ ಇದೀಗ ಬಿಗ್ ಬಾಸ್ ಖ್ಯಾತಿಯ ಸಿರಿಜಾ ಅವರು ಎಂಟ್ರಿ ಕೊಟ್ಟಿದ್ದಾರೆ.   

PREV
16
ಚುಕ್ಕಿ ತಾರೆ ಸೀರಿಯಲ್‌ಗೆ ರೀ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಸಿರಿಜಾ

ಕಲರ್ಸ್ ಕನ್ನಡ ವಾಹಿನಿ ವಿಭಿನ್ನ ಕಥೆಗಳಿಗೆ ಹೆಸರುವಾಸಿ. ಅದರಲ್ಲೂ ಚುಕ್ಕಿ ತಾರೆ (Chukki Taare) ಸೀರಿಯಲ್ ಎಲ್ಲದಕ್ಕಿಂತಲೂ ವಿಭಿನ್ನವಾಗಿ ಮೂಡಿ ಬರುತ್ತಿದೆ. ಬಡವರ ಮನೆಯಲ್ಲಿ ಬೆಳೆದ ಹುಡುಗಿ ಮತ್ತು ಶ್ರೀಮಂತರ ಮನೆಯ ಹುಡುಗಿಯ ನಡುವೆ ಬೆಳೆಯುವ ಸ್ನೇಹವೇ ಈ ಕಥೆಯ ಪ್ರಮುಖ ಭಾಗ. 
 

26

ಸೀರಿಯಲ್ ನಲ್ಲಿ ಸದ್ಯ ಅಪ್ಪನನ್ನು ಹುಡುಕಿ ದೇವರೂರಿಗೆ ಹೊರಟ ಚುಕ್ಕಿ ಮತ್ತು ಅತ್ತೆಯ ಅತಿಯಾದ ಶಿಸ್ತಿನಿಂದ ಕಂಗೆಟ್ಟು ಮನೆ ಬಿಟ್ಟು ಓಡಿ ಬಂದಿರುವ ಇಬ್ಬನಿ ಇಬ್ಬರು ಜೊತೆಯಾಗಿದ್ದಾರೆ. ದಿಕ್ಕು ದೆಸೆ ಇಲ್ಲದೇ ಸಾಗುವ ಈ ಮಕ್ಕಳಿಗೆ ಇದೀಗ ಸಿರಿಜಾ (Sirija) ಜೊತೆಯಾಗಿದ್ದಾರೆ. 
 

36

ಹೌದು, ಬಿಗ್ ಬಾಸ್ ಖ್ಯಾತಿಯ ಸಿರಿಜಾ ಮತ್ತೆ ಸೀರಿಯಲ್ ಗೆ (Serial) ಕಂ ಬ್ಯಾಕ್ ಮಾಡಿದ್ದು, ಚುಕ್ಕಿ ತಾರೆಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅತಿಥಿ ಪಾತ್ರವೋ ಅಥವಾ ಈ ಪಾತ್ರ ಸೀರಿಯಲ್ ನಲ್ಲಿ ಇರಲಿದೆಯೇ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. 
 

46

ದಶಕಗಳ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಂಗೋಲಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಸಿರಿಜಾ, ಹಲವು ವರ್ಷಗಳ ಕಾಲ ಸೀರಿಯಲ್ ಪ್ರಿಯರ ಫೇವರಿಟ್ ನಟಿಯಾಗಿದ್ದರು. ನಂತರ ಕೆಲವು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡಿದ್ದರು. ಕೊನೆಯದಾಗಿ ರಾಮಾಚಾರಿ ಸೀರಿಯಲ್‌ನಲ್ಲಿ ನಟಿಸಿದ್ದು, ಆ ಸೀರಿಯಲ್ ಕೂಡ ಅರ್ಧದಲ್ಲೇ ಬಿಟ್ಟಿದ್ದರು. 
 

56

ಇದಾದ ಬಳಿಕ ಬಿಗ್ ಬಾಸ್ ಸೀಸನ್ 10 (Bigg Boss Season 10) ರಲ್ಲಿ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದರು. ಯಾವುದೇ ಕಾಂಟ್ರೋವರ್ಸಿ ಇಲ್ಲದೇ, ಜಗಳ ಇಲ್ಲದೇ, ತಮ್ಮ ಸೌಮ್ಯ ಗುಣಗಳಿಂದಲೇ ಸಿರಿ ಬಿಗ್ ಬಾಸ್ ಪ್ರಿಯರ ಮನ ಗೆದ್ದಿದ್ದರು. ಬಿಗ್ ಬಾಸ್ ಕ್ವೀನ್ ಎಂದು ಜನರು ಕರೆಯುವಷ್ಟು ಜನಮನ ಗೆದ್ದಿದ್ದರು. 
 

66

ಇದೀಗ ಚುಕ್ಕಿತಾರೆ ಸೀರಿಯಲ್ ಮೂಲಕ ಸಿರಿಜಾ ಕಂಬ್ಯಾಕ್ ಮಾಡಿದ್ದಾರೆ. ಚುಕ್ಕಿ ಮತ್ತು ಇಬ್ಬನಿ ಇಬ್ಬರನ್ನು ರಕ್ಷಿಸುವ ಪಾತ್ರದಲ್ಲಿ ಸಿರಿಜಾ ಕಾಣಿಸಿಕೊಂಡಿದ್ದಾರೆ. ಈ ವಿಶೇಷ ಅತಿಥಿ ಪಾತ್ರದ ಮೂಲಕ ಸೀರಿಯಲ್‌ನಲ್ಲಿ ಟ್ವಿಸ್ಟ್ ಸಿಗಲಿದೆ. ಸಿರಿಜಾರನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 
 

Read more Photos on
click me!

Recommended Stories