Zee Kannada Karna Serial : ಜೀ ಕುಟುಂಬ ಅವಾರ್ಡ್ ಹತ್ತಿರ ಬರ್ತಿದೆ. ಅದಕ್ಕೂ ಮೊದಲು ನಾಮಿನೇಷನ್ ಇವೆಂಟ್ ನಡೆಯುತ್ತಿದೆ. ಕರ್ಣ ನಿಧಿ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ವಿಷ್ಯ ಹೊರಗೆ ಬರ್ತಿದೆ.
ಜೀ ಕನ್ನಡದ ಟ್ರೆಂಡಿಂಗ್ ಕಪಲ್ ಅಂದ್ರೆ ಕರ್ಣ-ನಿಧಿ. ಸೀರಿಯಲ್ ನಲ್ಲಿ ಕರ್ಣ ನಿಧಿ ರೋಮ್ಯಾನ್ಸ್, ಮಾತುಕತೆ ಕೇಳೋದು, ನೋಡೋದು ವೀಕ್ಷಕರಿಗೆ ಬಹಳ ಖುಷಿ. ಶೀಘ್ರವೇ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗಲಿದೆ. ಇದ್ರ ನಿಮಿತ್ತ ನಡೆದ ಸಂದರ್ಶನವೊಂದರಲ್ಲಿ ಕರ್ಣ ಹಾಗೂ ನಿಧಿ ತಮ್ಮಿಬ್ಬರ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.
24
ಮೇಕಪ್ ಮೇಲೆ ಮೋಹ ಯಾರಿಗೆ?
ಕರ್ಣ ಹಾಗೂ ನಿಧಿಯನ್ನು ನೀವು ತೆರೆ ಮೇಲೆ ನೋಡಿರ್ತೀರಿ. ತೆರೆ ಹಿಂದೆ ಅವರು ಏನೆಲ್ಲ ಮಾಡ್ತಾರೆ ಎನ್ನುವ ಪ್ರಶ್ನೆ ಕಾಡೋದು ಸಾಮಾನ್ಯ. ಶೂಟಿಂಗ್ ನಲ್ಲಿ ನಿರ್ದೇಶಕರು ಕಟ್ ಎನ್ನುತ್ತಿದ್ದಂತೆ ಯಾರೆಲ್ಲ ಮೇಕಪ್ ಮಾಡ್ಕೊಳ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಮಾನ್ಯವಾಗಿ ನಿಧಿ ಅಂತ ಎಲ್ಲರೂ ಗೆಸ್ ಮಾಡಿರ್ತಾರೆ. ಆದ್ರೆ ನಿಧಿಗಿಂತ ಕರ್ಣ ಇದ್ರಲ್ಲಿ ಮುಂದಿದ್ದಾರೆ. ಕರ್ಣ ಮೇಕಪ್ ಮಾಡುವ ಬದಲು ಪದೇ ಪದೇ ತಲೆ ಬಾಚಿಕೊಳ್ತಾರಂತೆ. ಒಂದೊಂದು ಸೀನ್ ಆದ್ಮೇಲು ತಲೆ ಬಾಚಿಕೊಳ್ಳೋದು ಕರ್ಣ ಅಂತ ನಿಧಿ ಹೇಳಿದ್ದಾರೆ. ಕರ್ಣನಿಗಿಂತ ವಿನಯ್ ಇದ್ರಲ್ಲಿ ಎಲ್ಲರಿಗಿಂತ ಮುಂದಿದ್ದಾರಂತೆ.
34
ತಿನ್ನೋದ್ರಲ್ಲೂ ಕರ್ಣ ಮುಂದು
ಬರೀ ತಲೆ ಬಾಚಿಕೊಳ್ಳೋದ್ರಲ್ಲಲ್ಲ ತಿನ್ನೋದ್ರಲ್ಲೂ ಕರ್ಣ ಮುಂದಿದ್ದಾರೆ. ಅವರು ಅದು ಇದು ಅಂತ ಡಯಟ್ ಆಹಾರ ತಿನ್ನುತ್ತಿರುತ್ತಾರೆ. ಬರೀ ತಾವು ತಿನ್ನೋದಲ್ಲ ಸೆಟ್ ನಲ್ಲಿರುವ ಎಲ್ಲರಿಗೂ ಆಹಾರ ನೀಡ್ತಾರಂತೆ ಕರ್ಣ. ಆನ್ಲೈನ್ ನಲ್ಲಿ ಫುಡ್ ಬುಕ್ ಮಾಡೋದ್ರಲ್ಲಿ ಫಾಸ್ಟ್ ಇರುವ ಕರ್ಣ, ಬೇರೆ ವಿಷ್ಯದ ಬಗ್ಗೆ ತಲೆ ಹಾಕೋದಿಲ್ಲ. ಶೂಟ್ ಮುಗಿಯುತ್ತಿದ್ದಂತೆ ಮೇಲೆ ರೂಮ್ ಸೇರುವ ಕರ್ಣ, ಮತ್ತೆ ತಮ್ಮ ಶೂಟ್ ಬಂದಾಗ್ಲೇ ಕೆಳಗೆ ಬರ್ತಾರಂತೆ.
ಜೀ ಕನ್ನಡಕ್ಕೆ ಈ ಬಾರಿ ಕುಟುಂಬ ಅವಾರ್ಡ್ ಹೆಚ್ಚು ಸ್ಪೇಷಲ್ ಆಗಿದೆ. ಅದಕ್ಕೆ ಕಾರಣ ಜೀ ಕನ್ನಡ 20 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ಅಕ್ಟೋಬರ್ 24 ಮತ್ತು 25 ರಂದು ಜೀ ಕುಟುಂಬ ನಾಮಿನೇಷನ್ ಇವೆಂಟ್ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.