9 ವರ್ಷಗಳ ಬಳಿಕ ಶಿಲ್ಪಾ ಅಯ್ಯರ್ ಕನಸು ಈಡೇರಿದ್ದೇಗೆ? ನಂದಗೋಕುಲಕ್ಕೆ ಬರ್ತಿದ್ದಂತೆ ನನಸು!

Published : Oct 21, 2026, 07:42 AM IST

ಕಿರುತೆರೆ ನಟಿ ಶಿಲ್ಪಾ ಅಯ್ಯರ್ ಅವರು 'ನಂದಗೋಕುಲ' ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದು, 9 ವರ್ಷಗಳ ಬಳಿಕ ಅವರ ಕನಸು ನನಸಾಗಿದೆ. ನವರಾತ್ರಿ ಸಮಯದಲ್ಲಿ ರಾಯರ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

PREV
15
ಶಿಲ್ಪಾ ಅಯ್ಯರ್ ಪೋಸ್ಟ್

ಕಿರುತೆರೆ ನಟಿ ಶಿಲ್ಪಾ ಅಯ್ಯರ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುತ್ತವೆ. ಒಂದು ಸಣ್ಣ ಬ್ರೇಕ್‌ ಬಳಿಕ ನಂದಗೋಕುಲ ಸೀರಿಯಲ್‌ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಇದೀಗ 9 ವರ್ಷಗಳ ಬಳಿಕ ನಂದಗೋಕುಲ ಸೀರಿಯಲ್‌ನಿಂದ ತಮ್ಮ ಆಸೆಯೊಂದು ನೆರವೇರಿದೆ ಎಂಬ ವಿಷಯವನ್ನು ಶಿಲ್ಪಾ ಅಯ್ಯರ್ ಶೇರ್ ಮಾಡಿಕೊಂಡಿದ್ದಾರೆ.

25
ಶಿಲ್ಪಾ ಅಯ್ಯರ್ ಕನಸು ಏನಾಗಿತ್ತು?

ಒಂಬತ್ತು ವರ್ಷಗಳ ನನ್ನ ಪಯಣದಲ್ಲಿ, ಎಷ್ಟೋ ಪಾತ್ರಗಳನ್ನು ಮಾಡಿದ್ದರೂ ನನ್ನ ಹೆಸರು ಟೈಟಲ್ ಕಾರ್ಡ್‌ನಲ್ಲಿ ನೋಡುವ ಕನಸು ಮಾತ್ರ ನನಸಾಗಿರಲಿಲ್ಲ. ಎಲ್ಲವೂ ಮುಗಿಯಿತು ಅಂದುಕೊಂಡ ಕ್ಷಣದಲ್ಲಿ, ಮತ್ತೆ ಒಂದು ಪುಟ್ಟ ಭರವಸೆ ಮೂಡಿತು ಅದರ ಜೊತೆಗೆ ನಾನು ಕನಸು ಕಂಡಿದ್ದ ಟೈಟಲ್ ಕಾರ್ಡ್ ಕೂಡ ಸಿಕ್ಕಿತು ಎಂದು ಹೇಳಿದ್ದಾರೆ.

35
ಹಲವು ವರ್ಷಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ

ಈ ನವರಾತ್ರಿಯಲ್ಲಿ ನನ್ನ ರಾಯರು ಇಂಥದ್ದೊಂದು ಉಡುಗೊರೆ ಕೊಡುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಇದು ಹಲವರಿಗೆ ಸಣ್ಣ ಗೆಲುವಾಗಿರಬಹುದು. ಆದರೆ ನನಗೆ ಇದು ವರ್ಷಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ, ನನ್ನ ನಂಬಿಕೆಗೆ ಸಿಕ್ಕ ಆಶೀರ್ವಾದ. ಈ ಕ್ಷಣವನ್ನು ನನ್ನ ರಾಯರ ಪಾದಗಳಿಗೆ ಅರ್ಪಿಸುತ್ತೇನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

45
ಟೈಟಲ್ ಕಾರ್ಡ್

ಸಾಮಾನ್ಯವಾಗಿ ಧಾರಾವಾಹಿಯ ಟೈಟಲ್‌ ಕಾರ್ಡ್‌ಗಳಲ್ಲಿ ನಾಯಕ ಮತ್ತು ನಾಯಕಿಯ ಚಿತ್ರವನ್ನು ತೋರಿಸಲಾಗುತ್ತದೆ. ಇತ್ತೀಚಿಗೆ ಟೈಟಲ್ ಕಾರ್ಡ್‌ಗಾಗಿ ವಿವಿಧ ಕಲ್ಪನೆಗಳಲ್ಲಿ ಶೂಟಿಂಗ್ ನಡೆಯುತ್ತದೆ. ಆದ್ರೆ ನಂದಗೋಕುಲ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಹೊಸ ಪಾತ್ರಕ್ಕಾಗಿ ಟೈಟಲ್ ಕಾರ್ಡ್ ಪದೇ ಪದೇ ಚೇಂಜ್ ಆಗುತ್ತಿರುತ್ತವೆ.

55
ಹಲವು ಬಾರಿ ಬದಲಾದ ಟೈಟಲ್ ಕಾರ್ಡ್

ಈ ಹಿಂದೆ ಸೀರಿಯಲ್‌ನಲ್ಲಿ ಅಮೂಲ್ಯಾ ಮತ್ತು ಪ್ರಿಯಾ ನಂದಗೋಕುಲಕ್ಕೆ ಸೊಸೆಯಾಗಿ ಬಂದ ಸಂದರ್ಭದಲ್ಲಿ ಟೈಟಲ್ ಕಾರ್ಡ್‌ನಲ್ಲಿ ಇಬ್ಬರು ಕಲಾವಿದರನ್ನು ಸೇರಿಸಿಕೊಳ್ಳಲಾಗಿತ್ತು. ಇದೀಗ ಸುಂದರನ ಮಡದಿಯಾಗಿ ರಜನಿ ಆಗಮಿಸಿದ್ದು, ಟೈಟಲ್ ಕಾರ್ಡ್ ಬದಲಾಗಿದೆ. ಇತ್ತೀಚೆಗಷ್ಟೇ ಕೇಶವ ಪಾತ್ರದ ಕಲಾವಿದ ಬದಲಾಗಿದ್ದ ಸಂದರ್ಭದಲ್ಲಿ ಟೈಟಲ್ ಕಾರ್ಡ್ ಬದಲಿಸಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories