ವ್ಲಾಗಿಂಗ್‌ನಿಂದಲೇ ಕೋಟ್ಯಧಿಪತಿ! ₹5 ಕೋಟಿ ಕಾರು ಕಲೆಕ್ಷನ್, ತಿಂಗಳಿಗೆ ₹3 ಕೋಟಿ ಆದಾಯ? ಯಾರು ಈ Gen-Z ಯೂಟ್ಯೂಬರ್?

Published : Oct 20, 2026, 09:28 PM IST

ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸೌರವ್ ಜೋಶಿ ಇಂದು ಭಾರತದ ಜನಪ್ರಿಯ ವ್ಲಾಗರ್‌ಗಳಲ್ಲಿ ಒಬ್ಬರು. 365 ದಿನಗಳ ವ್ಲಾಗಿಂಗ್ ಚಾಲೆಂಜ್ ಅವರ ಜೀವನಕ್ಕೆ ದೊಡ್ಡ ತಿರುವು ನೀಡಿತು. ಈಗ ತಿಂಗಳಿಗೆ ₹2–3 ಕೋಟಿ ಗಳಿಸುತ್ತಿರುವ ಆ ಜನಪ್ರಿಯ ವ್ಲಾಗರ್ ಯಾರು?

PREV
16
ಭಾರತದ ನಂಬರ್ 1 ವ್ಲಾಗರ್‌

ಇಂದಿನ Gen Z ಯುವಕರು ಕಾರ್ಪೊರೇಟ್ ಉದ್ಯೋಗ, ವೈದ್ಯಕೀಯ, ಎಂಜಿನಿಯರಿಂಗ್ ಅಥವಾ ಅಂಗಡಿಯಲ್ಲಿ ಕುಳಿತು ಕೆಲಸ ಮಾಡುವ ಮೂಲಕ ಮಾತ್ರ ಹಣ ಗಳಿಸಲು ಬಯಸುವುದಿಲ್ಲ. ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ಹೊಂದಲು ಬಯಸುವ ಯುವಕರು ತಮಗೆ ಇಷ್ಟವಾದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವುದರಿಂದ ಹಿಡಿದು ಯೂಟ್ಯೂಬ್‌ನಲ್ಲಿ ವ್ಲಾಗಿಂಗ್ ಮಾಡುವವರೆಗೆ ಹಣ ಗಳಿಸಲು ಹಲವು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ವ್ಲಾಗರ್‌ಗಳಲ್ಲಿ ಒಬ್ಬರು ಸೌರವ್ ಜೋಶಿ. ಅವರು ಭಾರತದ ನಂಬರ್ 1 ವ್ಲಾಗರ್‌ಗಳಲ್ಲಿ ಒಬ್ಬರಾಗಿದ್ದಾರೆ.

26
ಮಿಡಲ್ ಕ್ಲಾಸ್ ಕುಟುಂಬದಿಂದ ಕೋಟ್ಯಧಿಪತಿ ಯೂಟ್ಯೂಬರ್‌ವರೆಗೆ!

ಸೌರವ್ ಜೋಶಿ ಭಾರತದ ಪ್ರಸಿದ್ಧ ಕೋಟ್ಯಧಿಪತಿ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಅವರು ಉತ್ತರಾಖಂಡದ ಬಾಗೇಶ್ವರದವರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸೌರವ್ ಅವರ ಬಾಲ್ಯ ಕಷ್ಟವಾಗಿತ್ತು. ಕುಟುಂಬವನ್ನು ನಿರ್ವಹಿಸಲು ಅವರ ತಂದೆ ಹರೀಂದರ್ ಜೋಶಿ ದೆಹಲಿಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು. ಇದರಿಂದ ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿತ್ತು. ಚಿಕ್ಕ ವಯಸ್ಸಿನಿಂದಲೇ ಸೌರವ್ ತಮ್ಮ ತಂದೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಬಳಿಕ ಸೌರವ್ ಮತ್ತು ಕುಟುಂಬ ಹರಿಯಾಣದ ಹಿಸಾರ್‌ಗೆ ಶಿಫ್ಟ್ ಆಗಿದ್ದರು. ಅಲ್ಲಿಯೇ ಅವರ ಬಾಲ್ಯ ಕಳೆಯಿತು.

36
12ನೇ ತರಗತಿಯಲ್ಲೇ ಯೂಟ್ಯೂಬ್ ಚಾನೆಲ್ ಶುರು!

ಸೌರವ್ ಜೋಶಿ 12ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ‘ಸೌರವ್ ಜೋಶಿ ಆರ್ಟ್ಸ್’ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಅದರಲ್ಲಿ ಕೋಚಿಂಗ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು. ಸತತ 365 ದಿನಗಳ ಕಾಲ ಪ್ರತಿದಿನ ವ್ಲಾಗ್ ಮಾಡುವ ಚಾಲೆಂಜ್ ಅವರು ಸ್ವೀಕರಿಸಿದರು. ಈ ಒಂದು ನಿರ್ಧಾರ ಅವರ ಜೀವನವನ್ನಷ್ಟೇ ಅಲ್ಲದೆ, ಅವರ ಕುಟುಂಬದ ಜೀವನವನ್ನೂ ಬದಲಿಸಿತು. ಸೌರವ್ ಜನಪ್ರಿಯ ಸ್ಟಾರ್ ಆಗಿ ಹೊರಹೊಮ್ಮಿದರು. ಅವರ ವ್ಲಾಗ್‌ಗಳಿಗೆ ಪ್ರೇಕ್ಷಕರಿಂದ ಅಪಾರ ಪ್ರೀತಿ ಸಿಕ್ಕಿತು. ಅವರ ಚಿಕ್ಕಪ್ಪನ ಮಗ ಕುನಾಲಿ ಅವರ ಮುಗ್ಧತೆ ಮತ್ತು ತಾಯಿಯ ಮುದ್ದಾದ ಗದರಿಕೆಗಳು ವ್ಲಾಗ್‌ಗಳ ಪ್ರಮುಖ ಆಕರ್ಷಣೆಯಾದವು.

46
ವ್ಲಾಗರ್ ಮಾತ್ರವಲ್ಲ, ಸಾಹಸ ಪ್ರಿಯರೂ ಹೌದು!

ಸೌರವ್ ಜೋಶಿ ಅವರಿಗೆ ಆಫ್-ರೋಡಿಂಗ್ ಮತ್ತು ಅಡ್ವೆಂಚರಸ್ ಚಟುವಟಿಕೆಗಳೆಂದರೆ ಬಹಳ ಇಷ್ಟ. ಕಾಡಿನಲ್ಲಿ ಟೆಂಟ್ ಹಾಕಿಕೊಂಡು ವಾಸಿಸುವುದು, ನದಿಯಲ್ಲಿ ರಾಫ್ಟಿಂಗ್ ಮಾಡುವುದು, ಮೊದಲಾದ ಸಾಹಸಗಳನ್ನು ಅವರು ತಮ್ಮ ವ್ಲಾಗ್‌ಗಳಲ್ಲಿ ತೋರಿಸಿದ್ದಾರೆ. ಇದರ ಜೊತೆಗೆ, 2021ರಲ್ಲಿ ಬಿಡುಗಡೆಯಾದ ‘ಭಾಯ್ ಮೇರೆ ಭಾಯ್’ ಮತ್ತು ‘ಮೌಜಾ’ ಮ್ಯೂಸಿಕ್ ವಿಡಿಯೋಗಳಲ್ಲಿಯೂ ಕಾಣಿಸಿಕೊಂಡು ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ.

56
₹5 ಕೋಟಿ ಮೌಲ್ಯದ ಐಷಾರಾಮಿ ಕಾರುಗಳ ಒಡೆಯ!

ಸೌರವ್ ಜೋಶಿ ಅವರಿಗೆ ಐಷಾರಾಮಿ ಕಾರುಗಳೆಂದರೆ ವಿಶೇಷ ಆಸಕ್ತಿ. ಮಾಧ್ಯಮ ವರದಿಗಳ ಪ್ರಕಾರ, ಅವರ ಕಾರು ಸಂಗ್ರಹದ ಒಟ್ಟು ಮೌಲ್ಯ ಸುಮಾರು ₹5 ಕೋಟಿ. ಅವರ ಕಾರು ಸಂಗ್ರಹದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್, ಮರ್ಸಿಡಿಸ್-ಬೆನ್ಜ್ ಜಿ-ವ್ಯಾಗನ್, ಮರ್ಸಿಡಿಸ್-ಬೆನ್ಜ್ GLC 300, ಟೊಯೋಟಾ ಫಾರ್ಚ್ಯೂನರ್ ಲೆಜೆಂಡರ್ ಮತ್ತು ಮಹೀಂದ್ರಾ ಥಾರ್‌ನಂತಹ ಕಾರುಗಳು ಸೇರಿವೆ. ಅವರ ಬಳಿ ಇರುವ ಅತ್ಯಂತ ದುಬಾರಿ ಕಾರು ಎಲೆಕ್ಟ್ರಿಕ್ ಮರ್ಸಿಡಿಸ್-ಬೆನ್ಜ್ ಜಿ-ವ್ಯಾಗನ್ ಆಗಿದ್ದು, ಇದರ ಬೆಲೆ ಸುಮಾರು ₹3.2 ಕೋಟಿ ಎಂದು ಹೇಳಲಾಗಿದೆ.

66
ತಿಂಗಳಿಗೆ ₹2–3 ಕೋಟಿ ಆದಾಯ?

ಸೌರವ್ ಅವರ ಯೂಟ್ಯೂಬ್ ಚಾನೆಲ್‌ಗೆ 4 ಕೋಟಿ 22 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 1 ಕೋಟಿ 12 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಅವರ ಮಾಸಿಕ ಆದಾಯ ಕೋಟ್ಯಂತರ ರೂಪಾಯಿಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ತಜ್ಞರ ಪ್ರಕಾರ, ಸೌರವ್ ಅವರ ವಿಡಿಯೋಗಳಿಗೆ ಸುಮಾರು 400 ಮಿಲಿಯನ್ ವ್ಯೂವ್ಸ್ ಬರುತ್ತವೆ. ಶಾರ್ಟ್ ಫಾರ್ಮ್ ವಿಡಿಯೋಗಳಿಗೆ 51 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಇದೆ. ಈ ಲೆಕ್ಕಾಚಾರದ ಆಧಾರದ ಮೇಲೆ ಅವರ ಮಾಸಿಕ ಆದಾಯ ₹2 ಕೋಟಿಯಿಂದ ₹3 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories