Karna Serial: ಒಡಲಾಳದ ಸತ್ಯವನ್ನು ಅಳಿಸಿ ಹಾಕಲು ಮುಂದಾದ ನಿತ್ಯಾ: ಪತ್ರ ನೋಡಿ ಕರ್ಣ ಶಾಕ್!

Published : Nov 06, 2025, 10:19 AM IST

Zee Kannada Karna Serial: ತೇಜಸ್‌ನಿಂದ ಗರ್ಭಿಣಿಯಾಗಿರುವ ನಿತ್ಯಾ, ಮಗುವನ್ನು ತೆಗೆಸುವ ನಿರ್ಧಾರ ಮಾಡಿ ಆಸ್ಪತ್ರೆಗೆ ಹೋಗಿದ್ದಾಳೆ. ಈ ವಿಷಯವನ್ನು ಪತ್ರದ ಮೂಲಕ ತಿಳಿದ ಕರ್ಣ ಆಘಾತಕ್ಕೊಳಗಾಗಿದ್ದು, ಅವಳನ್ನು ತಡೆಯಲು ಮುಂದಾಗಿದ್ದಾನೆ. 

PREV
14
ಪತ್ರ ನೋಡಿ ಕರ್ಣ ಶಾಕ್

ಪ್ರಿಯಕರ ತೇಜಸ್ ಹುಡುಕಾಟದಲ್ಲಿರುವ ನಿತ್ಯಾಗೆ ತಾನು ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಮದುವೆಯಲ್ಲಿ ಸಪ್ತಪದಿ ತುಳಿಯುವಾಗಲೇ ಕರ್ಣನಿಗೆ ನಿತ್ಯಾ ಗರ್ಭಿಣಿ ಎಂಬ ಸತ್ಯ ಗೊತ್ತಾಗಿತ್ತು. ಸತ್ಯ ತಿಳಿದಿರುವ ನಿತ್ಯಾ ಪತ್ರ ಬರೆದಿಟ್ಟು ಆಸ್ಪತ್ರೆಗೆ ಬಂದಿದ್ದಾಳೆ. ಪತ್ರ ನೋಡಿ ಕರ್ಣ ಶಾಕ್ ಆಗಿದ್ದಾನೆ.

24
ಮಗುವನ್ನು ತೆಗೆಸುವ ನಿರ್ಧಾರ

ತನ್ನ ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವ ನಿರ್ಧಾರಕ್ಕೆ ನಿತ್ಯಾ ಬಂದಿದ್ದಾಳೆ. ತೇಜಸ್ ಹುಡುಕಿಕೊಂಡು ಚಿಕ್ಕಮಗಳೂರಿಗೆ ಕರ್ಣನ ಜೊತೆಯಲ್ಲಿ ನಿತ್ಯಾ ಬಂದಿದ್ದಳು. ಇತ್ತ ಇಬ್ಬರ ಹಿಂದೆ ರಮೇಶ್ ಗೂಢಚಾರರನ್ನು ನೇಮಿಸಿದ್ದಾನೆ. ಇದೀಗ ಮಗು ತೆಗೆಸಲು ಆಸ್ಪತ್ರೆಗೆ ಹೋಗಿರುವ ನಿತ್ಯಾಳನ್ನು ತಡೆಯಲು ಕರ್ಣ ಮುಂದಾಗಿದ್ದಾನೆ.

34
ನಿಧಿ ಮತ್ತು ಶಾಂತಿ

ಕರ್ಣನ ಮನೆಯಲ್ಲಿ ಆಶ್ರಯ ಪಡೆದಕೊಂಡಿರುವ ನಿಧಿ ಮತ್ತು ಶಾಂತಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸುಮತಿಯ ಕೊಂಕು ಮಾತುಗಳಿಂದ ಇಬ್ಬರ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ. ಕರ್ಣನ ಅಜ್ಜಿ ಕಾರ್ಯಕ್ರಮ ನಿಮಿತ್ ಹೊರಗಡೆ ಇರೋದರಿಂದ ಸುಮತಿಯ ಆಟಕ್ಕೆ ಬ್ರೇಕ್ ಹಾಕೋರು ಯಾರು ಇಲ್ಲದಂತಾಗಿದೆ.

ಇದನ್ನೂ ಓದಿ: Bigg Boss 19: ಎಲಿಮಿನೇಷನ್ ಇಲ್ಲದೆ ಮನೆಯಿಂದ ಹೊರಹೋಗಿದ್ದ ಪ್ರಣೀತ್ ಮೋರೆ ವಾಪಸ್? ಏನಿದು ರಹಸ್ಯ?

44
ಸಂಜೀವ್

ನಿಧಿಗೆ ಬರಬೇಕಿದ್ದ ಸಂಬಳವನ್ನು ಸಂಜಯ್ ತಡೆ ಹಿಡಿದಿದ್ದಾನೆ. ಇದರಿಂದಾಗಿ ನಿಧಿ ಹಣವಿಲ್ಲದೇ ಸಂಜಯ್ ನೀಡುವ 500 ರೂಪಾಯಿಗೆ ಕೈ ಚಾಚಿದ್ದಾಳೆ. ಕರ್ಣನ ಮನೆಯಲ್ಲಿ ಪದೇ ಪದೇ ಅವಮಾನಕ್ಕೊಳಗಾಗುತ್ತಿರುವ ನಿಧಿ ಮತ್ತು ಶಾಂತಿ ಮುಂದೇನು ಮಾಡ್ತಾರೆ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ.

ಇದನ್ನೂ ಓದಿ: ವೈಯಕ್ತಿಕ ದ್ವೇಷಕ್ಕಾಗಿ ರಕ್ಷಿತಾ ವಿರುದ್ಧ ಇಡೀ ಮನೆಯನ್ನ ಎತ್ತಿ ಕಟ್ಟಿದ್ರಾ ಅಶ್ವಿನಿ ಗೌಡ?

Read more Photos on
click me!

Recommended Stories