'ಗಿಣಿರಾಮ' ಆಯಿಸಾಹೇಬ್​ ಖ್ಯಾತಿಯ ಚೈತ್ರಾ ದಿಢೀರ್​ ಕಣ್ಮರೆ! ವರ್ಷದ ಬಳಿಕ ಶಾಕಿಂಗ್​ ಘಟನೆ ತೆರೆದಿಟ್ಟ ನಟಿ

Published : Jun 09, 2026, 08:45 PM IST

'ಗಿಣಿರಾಮ' ಸೀರಿಯಲ್ ಖ್ಯಾತಿಯ ನಟಿ ಚೈತ್ರಾ ರಾವ್ ಅವರ ದಿಢೀರ್ ಕಣ್ಮರೆಗೆ ಕಾರಣ ಬಹಿರಂಗವಾಗಿದೆ. ಅವರು ಇತ್ತೀಚೆಗೆ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆರೋಗ್ಯದ ದೃಷ್ಟಿಯಿಂದ ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ನಟನೆಯಿಂದ ವಿರಾಮ ಪಡೆದಿದ್ದಾರೆ.

PREV
16
'ಗಿಣಿರಾಮ' ಆಯಿಸಾಹೇಬ್​

ನಾಗಕನ್ನಿಕೆ, ಸರಯೂ, ನೇತ್ರಾವತಿ, ಅವನು ಮತ್ತೆ ಶ್ರಾವಣಿ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ನಟಿಸಿ, ಗಿಣಿರಾಮದ ಆಯಿಸಾಹೇಬ್​ ಪಾತ್ರದ ಮೂಲಕ ಮನೆಮನೆ ಮಾತಾಗಿದ್ದ, ಉದ್ದನೆಯ ಕೂದಲಿನ ಮೂಲಕ ಜನಪ್ರಿಯಗೊಂಡಿದ್ದ ನಟಿ ಚೈತ್ರಾ ರಾವ್​ ದಿಢೀರ್​ ಕಣ್ಮರೆಯಾಗಿಬಿಟ್ಟರು. ಕೆಲವು ದಿನಗಳು ಇವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಎಲ್ಲಿ ಹೋದರು ಎಂದು ತಲೆ ಕೆಡಿಸಿಕೊಂಡರು.

26
ದಿಢೀರ್​ ನಾಪತ್ತೆ

ಹಾಸನ ಮೂಲದ ಚೈತ್ರಾ ರಾವ್‌ ಅವರು ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನ ಸುಲಲಿತವಾಗಿ ಮಾತನಾಡಿ ಎಲ್ಲರ ಮನಸ್ಸನ್ನು ಕದ್ದಿದ್ದರು. ಏನೂ ಹೇಳದೇ ನಟಿ ಎಲ್ಲಿಗೆ ಹೋಗಿದ್ದರು ಎನ್ನುವ ಬಗ್ಗೆ ಈಗ ಉತ್ತರ ಸಿಕ್ಕಿದೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಕಾಣಿಸಿಕೊಂಡಿದ್ದ ಉದ್ದನೆಯ ಕೂದಲ ಸುಂದರಿ ಇದೀಗ ದಿಢೀರ್​ ಎಂದು ಶಾರ್ಟ್‌ ಹೇರ್‌ ಕಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಶಾಕಿಂಗ್​ ವಿಷ್ಯವನ್ನೂ ತಿಳಿಸಿದ್ದಾರೆ.

36
ಕರುಳಿನ ಶಸ್ತ್ರಚಿಕಿತ್ಸೆ

ಅಷ್ಟಕ್ಕೂ ನಟಿ, ಕಳೆದ ಜನವರಿಯಲ್ಲಿ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಹೇಳಿದ್ದಾರೆ. ಇದೇ ಕಾರಣಕ್ಕೆ ಕೂದಲಿಗೂ ಕತ್ತರಿ ಹಾಕಬೇಕಾಯಿತು ಜೊತೆಗೆ ನಟನೆಯಿಂದ ದೂರ ಉಳಿಯಬೇಕಾಯಿತು ಎಂದಿದ್ದಾರೆ.

46
ಏನಂದ್ರು ನಟಿ

'ಬಾಹುಬಲಿ ಕಟ್ಟಪ್ಪನ ಏಕೆ ಹತ್ಯೆ ಮಾಡಿದ ಎಂಬುವುದು ಹೇಗೆ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿತ್ತೋ. ಹಾಗೇ ನಾನು ಉದ್ದ ಇದ್ದ ನನ್ನ ಹೇರ್‌ನ ಏಕೆ ಕಟ್‌ ಮಾಡಿಸಿದೆ ಎಂಬುವುದು ಎಲ್ಲರ ಪ್ರಶ್ನೆಯಾಗಿತ್ತು. ಕೊನೆಗೂ ಇದಕ್ಕೆ ಉತ್ತರ ಕೊಡುವ ಟೈಮ್‌ ಬಂದಿದೆ. ನನಗೆ ಜನವರಿಯಲ್ಲಿ ಮೇಜರ್‌ ಸರ್ಜರಿ ಆಯ್ತು, ಅದು ಕರುಳಿನ ಶಸ್ತ್ರಚಿಕಿತ್ಸೆ ಎಂದಿದ್ದಾರೆ.

56
ಕೂದಲಿಗೆ ಕತ್ತರಿ

ನನಗೆ ಕೇರ್‌ ಟೇಕರ್‌ ಅವಶ್ಯಕತೆ ಇತ್ತು. ಆದರೆ, ದುರದೃಷ್ಟವಶಾತ್ ನಮಗೆ ಕೇರ್‌ ಟೇಕರ್‌ ಸಿಗಲಿಲ್ಲ. ಒಂದೂವರೆ ತಿಂಗಳು ಕಷ್ಟಪಟ್ಟೆ. ಅದು ಎಷ್ಟರಮಟ್ಟಿಗೆ ಎಂದರೆ, ಸ್ನಾನ ಮಾಡೋಕು ಕಷ್ಟ ಆಗುತ್ತಿತ್ತು. ಅದಕ್ಕಾಗಿ ಉದ್ದನೆಯ ಕೂದಲು ಕಟ್​ ಮಾಡಿಸಬೇಕಾಯ್ತು ಎಂದಿದ್ದಾರೆ.

66
ಜನ ಇಷ್ಟಪಟ್ಟರು

ತಲೆ ಸ್ನಾನ ಮಾಡಲು ಆಗ್ತಿರಲಿಲ್ಲ. ಮೊದಲು ಭುಜದವರೆಗೆ ಕಟ್​ ಮಾಡಿಸಿದೆ. ಆದ್ರೂ ಕಷ್ಟ ಆಯ್ತು. ನನಗೆ ತಲೆಯ ಹಿಂಭಾಗ ಕೈ ಎಟಕುತ್ತಿರಲಿಲ್ಲ. ಹಾಗಾಗಿ, ಪೂರ್ತಿ ಬಾಯ್‌ಕಟ್ ಮಾಡಿಸಿದೆ. ನಾನು ಸುಂದರವಾಗಿ ಕಾಣುವುದಕ್ಕಿಂತ ಹೆಚ್ಚಾಗಿ, ನನ್ನ ಕಂಫರ್ಟ್‌ಗೆ ಆಯ್ಕೆ ಮಾಡಿಕೊಂಡೆ. ಇದಾದ ಬಳಿಕ ಬೇಸಿಗೆ ಶುರುವಾಯ್ತು. ನಂತರ ನನಗೆ ಈ ಹೇರ್‌ ಸ್ಟೈಲ್‌ ತುಂಬಾ ಇಷ್ಟ ಆಗೋಕೆ ಶುರುವಾಯ್ತು. ಬಹಳಷ್ಟು ಜನ ಈ ಲುಕ್‌ನ ಇಷ್ಟ ಪಟ್ಟರು. ಪ್ರಶಂಸೆ ವ್ಯಕ್ತಪಡೆಸಿದರು. ಅದಕ್ಕೆ ಇನ್ನೊಂದು ಐದಾರು ತಿಂಗಳು ಇದೇ ಹೇರ್‌ ಸ್ಟೈಲ್‌ ಮೆಂಟೈನ್‌ ಮಾಡೋಣ ಅನ್ಕೊಂಡಿದ್ದೀನಿ ಎಂದು ನಟಿ ಹೇಳಿದ್ದಾರೆ. ಇನ್ನು ಒಂದು ವರ್ಷ ರೆಸ್ಟ್​ ಬೇಕು. ನಾನು ಶೂಟಿಂಗ್‌ ಮಾಡೋಕೆ ಆಗಲ್ಲ. ನನ್ನ ದೇಹ ಇದಕ್ಕೆ ಅವಕಾಶ ಕೊಡಲ್ಲ. ರೆಸ್ಟ್ ಬೇಕಿದೆ. ಹಾಗಾಗಿ ಇದೇ ಹೇರ್‌ ಸ್ಟೈಲ್‌ನ ಕಂಟಿನ್ಯೂ ಮಾಡುತ್ತೇನೆ ಎಂದು ನಟಿ ಚೈತ್ರಾ ರಾವ್‌ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories