ಮದುವೆ ದಿನವೇ ಹುಟ್ಟುಹಬ್ಬ, ವರ್ಷದೊಳಗೆ ಎಂಟ್ರಿ ಕೊಟ್ಟ ಕಂದಮ್ಮ; 'ಕಾಮಿಡಿ ಕಿಲಾಡಿಗಳು' ಸದಾ ಫೋಟೋ ವೈರಲ್!

Published : Aug 12, 2023, 11:24 AM IST

ಕೊನೆಗೂ ಮಗಳ ಫೋಟೋ ರಿವೀಲ್ ಮಾಡಿದ ಹಾಸ್ಯ ನಟ ಸದಾನಂದ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ನಟ....

PREV
18
ಮದುವೆ ದಿನವೇ ಹುಟ್ಟುಹಬ್ಬ, ವರ್ಷದೊಳಗೆ ಎಂಟ್ರಿ ಕೊಟ್ಟ ಕಂದಮ್ಮ; 'ಕಾಮಿಡಿ ಕಿಲಾಡಿಗಳು' ಸದಾ ಫೋಟೋ ವೈರಲ್!

ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಲಾಡಿಗಳು (Comedy Kiladigalu) ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸದಾನಂದ.

28

 ಮೇ 20, 2023ರಂದು ಸದಾನಂದ ಮತ್ತು ನೇತ್ರಾವತಿ ವೈವಾಹಿಕ ಜೀವನಕ್ಕೆ ಕಾಲಿಟ್ಟ. ವರ್ಷದೊಳಗೆ ಕಂದಮ್ಮ ಕೂಡ ಎಂಟ್ರಿ ಕೊಟ್ಟಿದ್ದಾಳೆ.

38

ಧಾರಾವಾಡದಲ್ಲಿ ಮಗಳ ನಾಮಕರಣ ಮಾಡಿದ್ದಾರೆ. 'ನನ್ನ ಮಗಳು ನಾಮಕರಣವಾಯಿತು ಅದ್ವಿಕಾ ಅಂತ ಹೆಸರಿಟ್ಟಿದ್ದೀವಿ ನಿಮ್ಮೆಲ್ಲರ ಆಶೀರ್ವಾದ ಈ ಕಂದನ ಮೇಲಿರಲಿ' ಎಂದು ಬರೆದುಕೊಂಡಿದ್ದಾರೆ.

48

ಕಾಮಿಡಿ ಕಿಲಾಡಿಗಳು ನಂತರ ಪುಟ್ಟಕ್ಕನ ಮಕ್ಕಳು ಹಾಗೂ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸದಾ ಅಭಿನಯಿಸುತ್ತಿದ್ದಾರೆ. 

58

ಕೆಲವು ದಿನಗಳ ಹಿಂದೆ ಮಗಳಿಗೆ ಕಿವಿ ಚುಚ್ಚಿಸುವ ಶಾಸ್ತ್ರ ಕೂಡ ಮಾಡಿದ್ದಾರೆ. ವಿಡಿಯೋದಲ್ಲಿ ಕಂದಮ್ಮ ಧೈರ್ಯ ನೋಡಿ ಮೆಚ್ಚಿಕೊಂಡಿದ್ದಾರೆ.

68

ನೀನು ಸಿಗದೇ ಇದ್ರೆ ಜೀವನದಲ್ಲಿ ಮದುವೆನೇ ಬೇಡ ಅಂತ ನಿರ್ಧರಿಸಿದ ನನಗೆ ಆ ದೇವರು ನಿನ್ನನ್ನೇ ಜೀವನ ಸಂಗಾತಿಯಾಗಿ ಕೊಟ್ಟ.ನನ್ನ ಜೀವನಕ್ಕೆ ಅರ್ಥ ಕೊಟ್ಟ ದೇವತೆ ನೀನು ಎಂದು ಹೆಂಡತಿ ಬಗ್ಗೆ ಹೊಗಳಿದ್ದಾರೆ.

78

'ನಿಜವಾದ ಪ್ರೀತಿಗೆ ಜಯ ಸಿಗುತ್ತೆ ಅನ್ನೋದಕ್ಕೆ ನಾವಿಬ್ರೇ ಕಾರಣ. ನಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮತ್ತಷ್ಟು ಸಂತೋಷ ಕೊಡಲು ಮಗಳು ಅದ್ವಿಕಾ ಬಂದಳು'

88

'ನಿನ್ನ ತಂದೆ ತಾಯಿ ನಿಮ್ಮ ಅಣ್ಣಂದಿರ ದೊಡ್ಡ ಗುಣದಿಂದ ಇವತ್ತು ನಮ್ಮನ್ನ ಒಪ್ಪಿಕೊಂಡರು.ನನ್ನ ಜೀವನ ನಿನ್ನಿಂದ ಪೂರ್ಣವಾಯಿತು.ನನ್ನನ್ನ ನಂಬಿ ಬಂದಿದ್ದೀಯಾ ಯಾವಾಗಲೂ ನಿನ್ನ ಖುಷಿಯಾಗಿ ಇಡ್ತೀನಿ' ಎಂದು ಹೇಳಿದ್ದಾರೆ.

Read more Photos on
click me!

Recommended Stories