ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮಾ ಧಾರಾವಾಹಿಯಲ್ಲಿ ಮಿಂಚುತ್ತಿರುವ ಬಿಗ್ ಬಾಸ್ ವೈಷ್ಣವಿ.
ವೈಷ್ಣವಿ ಅವರ ತಾಯಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಕೂಡ ಮಾಡಿದ್ದಾರೆ.
'ಹ್ಯಾಪಿ ಬರ್ತಡೇ ಅಮ್ಮ. ನೀನು ನನ್ನ ಪಾಲಿಕೆ ಸದಾ ಟಫ್ ಟಾಸ್ಕ್ ಮಾಸ್ಟರ್ ಆಗಿದ್ದೆ. ಆದಷ್ಟು ಕಷ್ಟ ಇರುವ ವಿಚಾರಗಳನ್ನು ಕೇಳಿಕೊಟ್ಟಿರುವೆ' ಎಂದು ಬರೆದುಕೊಂಡಿದ್ದಾರೆ.
'ನನಗೆ ನೆನಪಿದೆ ಅದೆಷ್ಟೋ ದಿನಗಳು, ವಾರಗಳ ಕಾಲ ನಿಮ್ಮ ಜೊತೆ ಮಾತನಾಡದೆ ಇದ್ದೆ ಆದರೆ ಹೇಗೋ ನಾವು ಮತ್ತೆ ಕನೆಕ್ಟ್ ಆಗಿದ್ದೀವಿ'
'ತಾಯಿ ಮಗಳು ಸಂಬಂಧ ಅಂದ್ರೆ ಹಾಗೆ ಅಲ್ವಾ? ಏನೇ ಆಗಲಿ ದೂರ ಮಾಡಲು ಆಗಲ್ಲ. ಇಂದು ನಾನು ಏನೇ ಆಗಿದ್ದರು ಅದು ನಿನ್ನಿಂದ' ಎಂದು ವೈಷ್ಣವಿ ಹೇಳಿದ್ದಾರೆ.
ವೈಷ್ಣವಿ ತಾಯಿ ಭಾನು ರವಿಕುಮಾರ ಕಾನೂನು ಪದವಿ ಪಡೆದಾಗ ವೈಷ್ಣವಿ ತುಂಬಾ ಹೆಮ್ಮೆ ಪಟ್ಟಿದ್ದರು. ತಾಯಿ ಸಾಧನೆ ಮೆಚ್ಚಿದ್ದರು.
Vaishnavi Chandrashekar