ವಿವಾಹೇತರ ಸಂಬಂಧದಿಂದಾಗಿಯೇ ಸುದ್ದಿಯಾದ ಕಿರುತೆರೆ ಬೆಡಗಿಯರು

First Published | Aug 12, 2023, 10:54 AM IST

ತಮ್ಮ ಎಕ್ಸ್ ಟ್ರಾ ಮ್ಯಾರಿಟಲ್ ಅಫೇರ್ ನಿಂದಾಗಿಯೇ ಸುದ್ದಿಯಾದ ಎಷ್ಟೋ ನಟಿಯರಿದ್ದಾರೆ. ಹಿಂದಿ ಕಿರುತೆರೆ ನಟಿಯರ ಲಿಸ್ಟ್ ಅದರಲ್ಲಿ ತುಂಬಾ ದೊಡ್ಡದಿದೆ. ವಿವಾಹೇತರ ಸಂಬಂಧದಿಂದಾಗಿಯೇ ಸುದ್ದಿಯಾದ ಕಿರುತೆರೆಯ ಬೆಡಗಿಯರು ಯಾರು ನೋಡೋಣ. 
 

ವಿವಾಹೇತರ ಸಂಬಂಧಗಳು (extra marital affair) ಇತ್ತೀಚಿಗೆ ಹೆಚ್ಚುತ್ತಲೇ ಇವೆ. ಅದರಲ್ಲೂ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲೂ ಇಂಥ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತವೆ. ಅದರಲ್ಲೂ ಹಿಂದಿ ಕಿರುತೆರೆಯಲ್ಲಿ ಎಕ್ಸ್ ಟ್ರಾ ಮ್ಯಾರಿಟಲ್ ಅಫೇರ್‌ನಿಂದ ಸುದ್ದಿಯಾದ ನಟಿಯರೇ ಹೆಚ್ಚು. ಆ ನಟಿಯರು ಯಾರ್ಯಾರು ನೋಡೋಣ. 

ದೀಪಿಕಾ ಕಕ್ಕಡ್ (Dipika Kakar)
ಸಸುರಾಲ್ ಸಿಮರ್ ಕಾ ನಟಿ ದೀಪಿಕಾ ಕಕ್ಕಡ್ ಸದ್ಯ ಶೋಯೆಬ್ ಇಬ್ರಾಹಿಂ ಜೊತೆ ಮದುವೆಯಾಗಿ ಒಂದು ಮಗುವಿನ ತಾಯಿ. ಆದರೆ ಅದಕ್ಕೂ ಮುನ್ನ ದೀಪಿಕಾ ರೋಶನ್ ಜೊತೆ ಮದುವೆಯಾಗಿದ್ದು, ಶೋಯೆಬ್‌ಗಾಗಿ ಹಿಂದಿನ ಮದುವೆ ಮುರಿದು ಬಿತ್ತು ಎನ್ನಲಾಗಿದೆ. 

Tap to resize

ಸಂಜಿದಾ ಶೇಖ್ (Sanjeeda Shaik)
ಹರ್ಷವರ್ಧನ್ ರಾಣೆ ಜೊತೆಗಿನ ಅಫೇರ್ ಕಾರಣದಿಂದ ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಜೀದಾ ಶೇಖ್ ಪತಿ ಅಮೀರ್ ಆಲಿಗೆ ಡಿವೋರ್ಸ್ ನೀಡಿರುವುದಾಗಿ ಆರೋಪಗಳು ಕೇಳಿಬರುತ್ತಿವೆ.

ಸಾರಾ ಖಾನ್ (Sara Khan)
ಸಾರಾ ಆಲಿ ಖಾನ್ ಮಾಜಿ ಪತಿ ಆಲಿ ಮರ್ಚೆಂಟ್ ತನ್ನ ಪತ್ನಿಗೆ ಅಸ್ಮಿತ್ ಪಟೇಲ್ ಜೊತೆ ಅಫೇರ್ ಇರುವ ಬಗ್ಗೆ ಪ್ರಶ್ನಿಸಿದ್ದರು. ಬಳಿಕ ಇಬ್ಬರ ಡೀವೋರ್ಸ್ ಆಗಿ ಆಲಿ ಮರ್ಚೆಂಟ್ ಸದ್ಯ ಅನಮ್ ಮರ್ಚಂಟ್ ಜೊತೆ ಸಂಸಾರ ನಡೆಸುತ್ತಿದ್ದಾನೆ. 

ಕಾಮ್ಯಾ ಪಂಜಾಬಿ (Kamya Punjabi)
ನಟಿ ಕಾಮ್ಯಾ ಪಂಜಾಬಿ ಮತ್ತು ನಿಮಾಯಿ ಬಾಲಿ ಮಧ್ಯೆ ಅಫೇರ್ ನಡೆಯುತ್ತಿದೆ ಎಂದು ಹಿಂದೆ ಕಾಮ್ಯಾ ಪತಿ ಬಂಟಿ ನೇಗಿ ಆರೋಪಿಸಿದ್ದರು. ಮದುವೆಯಾಗಿ 10 ವರ್ಷದ ಬಳಿಕ ಇಬ್ಬರ ಡೀವೋರ್ಸ್ ಆಗಿ, ಸದ್ಯ ಕಾಮ್ಯಾ 2020ರಲ್ಲಿ ಶಲಬ್ ದಂಗ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ನಿಶಾ ರಾವಲ್ (Nisha Rawal)
ನಿಶಾ ರಾವಲ್ ಮತ್ತು ರಿತೇಶ್ ಸೇತಿಯಾ ನಡುವೆ ಅಫೇರ್ ನಡೆಯುತ್ತಿದೆ ಎಂದು ನಿಶಾ ಮಾಜಿ ಪತಿ ಕರನ್ ಮೆಹ್ರಾ ಆರೋಪಿಸಿದ್ದರು. ಇಬ್ಬರ ವೈಯಕ್ತಿಕ  ವಿಷ್ಯ ಭಾರಿ ಸುದ್ದಿಯಾಗಿತ್ತು. 2021ರಲ್ಲಿ ಇಬ್ಬರು ಡಿವೋರ್ಸ್ ಪಡೆದರು.

Latest Videos

click me!