ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ಯಾಕು ಪ್ಯಾಕು ಹಿತೇಶ್

Published : Jan 03, 2023, 10:43 AM IST

ಅದ್ಧೂರಿಯಾಗಿ ನಡೆಯಿತ್ತು ಹಾಸ್ಯ ನಟ ಹಿತೇಶ್ ಮದುವೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್..... 

PREV
16
ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ಯಾಕು ಪ್ಯಾಕು ಹಿತೇಶ್

ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಮನೋರಂಜನ ಕ್ಷೇತ್ರಕ್ಕೆ ಕಾಲಿಟ್ಟ ಪ್ಯಾಕು ಪ್ಯಾಕು ಅಲಿಯಾ ಹಿತೇಶ್ ಕಾಪಿನಡ್ಕ. 

26

ಜನವರಿ 1, 2023ರಂದು ಹಿತೇಶ್ ಕಾಪಿನಡ್ಕ ಮತ್ತು ಬಹುಕಾಲದ ಗೆಳತಿ ಸ್ವಾತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆದಿದೆ.

36

ಆಫ್‌ ವೈಟ್‌ ರೇಶ್ಮೆ ಪಂಚೆ- ಶೆಲ್ಯದಲ್ಲಿ ಹಿತೇಶ್ ಕಾಣಿಸಿಕೊಂಡರೆ ಕೆಂಪು ಬಣ್ಣದ ರೇಶ್ಮೆ ಸೀರೆಯಲ್ಲಿ ಸ್ವಾತಿ ಮಿಂಚಿದ್ದಾರೆ. ಫ್ಯಾನ್ಸ್‌ ಪೇಜ್‌ಗಳಲ್ಲಿ ಫೋಟೋ ವೈರಲ್ ಆಗುತ್ತಿದೆ. 

46

ಸುಮಾರು 10 ವರ್ಷಗಳ ಕಾಲ ಹಿತೇಶ್ ಮತ್ತು ಸ್ವಾತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ತಮ್ಮ ನಿವಾಸದ ಬಳಿ ಇರುವ ದೇಗುಲದಲ್ಲಿ ಸ್ವಾತಿ ಅವರನ್ನು ಮೊದಲು ಭೇಟಿ ಆಗಿದ್ದು ಎಂದು ಹಿತೇಶ್ ಹೇಳಿಕೊಂಡಿದ್ದರು.

56

ಮೊದಲ ಸ್ನೇಹಿತರಾಗಿ ಪರಿಚಯವಾಗಿ ಆನಂತರ ಪ್ರೀತಿಸಿದ್ದರಂತೆ. ನಿಶ್ಚಿತಾರ್ಥದ ಫೋಟೋ ಹಂಚಿಕೊಳ್ಳುವ ಮೂಲಕ ಪ್ರೀತಿ ವಿಚಾರ ಅನೌನ್ಸ್‌ ಮಾಡಿದ್ದರು.
 

66

ಶೋನಲ್ಲಿ ಮೊದಲ ದಿನವೇ ಸೈಕಲ್ (Cycle) ಹಾರನ್ ರೀತಿ ಸೌಂಡ್ ಮಾಡಿದ್ದಕ್ಕೆ ಇಡೀ ಸೀಸನ್‌ನಲ್ಲಿ ಅವರನ್ನು 'ಪ್ಯಾಕು ಪ್ಯಾಕು' (Pyaku Pyaku) ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು.  

Read more Photos on
click me!

Recommended Stories