ಮೂರು ಸಲವೂ ಬಿಗ್ ಬಾಸ್ ಟ್ರೋಫಿ-ಹಣ ಹಿಡಿದ ಶೆಟ್ರು: ಕಿರುತೆರೆಯಲ್ಲಿ ಏನಿದು ಶೆಟ್ರು ಪ್ರಭಾವ?

Published : Jan 02, 2023, 04:07 PM IST

ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 9 ಸೀಸನ್‌ಗಳನ್ನು ಮುಗಿಸಿದೆ. ಯಾವ ವರ್ಷ ಟ್ರೋಫಿ ಯಾರ ಕೈಯಲ್ಲಿತ್ತು?

PREV
19
ಮೂರು ಸಲವೂ ಬಿಗ್ ಬಾಸ್ ಟ್ರೋಫಿ-ಹಣ ಹಿಡಿದ ಶೆಟ್ರು: ಕಿರುತೆರೆಯಲ್ಲಿ ಏನಿದು ಶೆಟ್ರು ಪ್ರಭಾವ?

ಬಿಗ್ ಬಾಸ್ ಸೀಸನ್ 1 ರಿಯಾಲಿಟಿ ಶೋನ ಗೆದ್ದವರು ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಎರಡನೇ ಸ್ಥಾನ ಪಡೆದುಕೊಂಡವರು ಅರುಣ್ ಸಾಗರ್. 

29

ಬಿಗ್ ಬಾಸ್ ಸೀಸನ್ 2 ರಿಯಾಲಿಟಿ ಶೋನ ವಿನ್ನರ್ ಅಕುಲ್ ಬಾಲಾಜಿ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡವರು ಸೃಜನ್ ಲೋಕೇಶ್.

39

ಬಿಗ್ ಬಾಸ್ ಸೀಸನ್ 3 ರಿಯಾಲಿಟಿ ಶೋನ ವಿನ್ನರ್ ಶ್ರುತಿ ಕೃಷ್ಣ ಹಾಗೂ ಎರಡನೇ ಸ್ಥಾನವನ್ನು ಪಡೆದವರು ಚಂದನ್ ಕುಮಾರ್. ಇದೇ ಮೊದಲ ಮಹಿಳೆ ವಿನ್ನರ್ ಟ್ರೋಫಿ ಪಡೆದಿರುವುದು.

49

ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋನ ವಿನ್ನರ್‌ ಒಳ್ಳೆ ಹುಡುಗ ಪ್ರಥಮ್ ಪಡೆದರೆ ಎರಡನೇ ಸ್ಥಾನವನ್ನು ಕಿರಿಕ್ ಕೀರ್ತಿ ಗೆದ್ದರು.

59

ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಶೋನ ಗೆದ್ದವರು ಚಂದನ್ ಶೆಟ್ಟಿ ಮತ್ತು ಎರಡನೇ ಸ್ಥಾನವನ್ನು ಪಡೆದವರು ದಿವಾಕರ್. ಈ ಸೀಸನ್‌ನಿಂದ ಚಂದನ್ ಮತ್ತು ನಿವೇದಿತಾ ಸ್ನೇಹಿತರಾಗಿ  ಪ್ರೀತಿಸಿ ಆನಂತರ ಮದುವೆಯಾದರು.

69

ಬಿಗ್ ಬಾಸ್ ಸೀಸನ್ 6 ರಿಯಾಲಿಟಿ ಶೋನ ವಿನ್ನರ್ ಟ್ರೋಫಿ ಪಡೆದವರು ರೈತ ಶಶಿ ಕುಮಾರ್ ಹಾಗೂ ಎರಡನೇ ಸ್ಥಾನವನ್ನು ಪಡೆದುಕೊಂಡವರು ಗಾಯಕ ನವೀನ ಸಜ್ಜು.

79

ಬಿಗ್ ಬಾಸ್ ಸೀಸನ್ 7 ರಿಯಾಲಿಟಿ ಶೋನ ವಿನ್ನರ್ ಶೈನ್ ಶೆಟ್ಟಿ (Shine Shetty) ಹಾಗೂ ಎರಡನೇ ಸ್ಥಾನವನ್ನು ಪಡೆದುಕೊಂಡವರು ಹಾಸ್ಯ ನಟ ಕುರಿ ಪ್ರತಾಪ್.

89

ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋನ ವಿನ್ನರ್ ಕಿರುತೆರೆ ಹಾಸ್ಯ ನಟ ಮಂಜು ಪಾವಗಡ ಹಾಗೂ ಎರಡನೇ ಸ್ಥಾನ ಪಡೆದದ್ದು ಬೈಕರ್ ಅರವಿಂದ ಕೆಪಿ.

99

ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋನ ವಿಜೇತ ತುಳು ನಟ ರೂಪೇಶ್ ಶೆಟ್ಟಿ ಹಾಗೂ ಎರಡನೇ ಸ್ಥಾನವನ್ನು ಪಡೆದವರು ರ್ಯಾಪರ್ ರಾಕೇಶ್ ಅಡಿಗ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories