ಹೊಸ ವರ್ಷ ಅತ್ಯದ್ಭುತವಾಗಿ ಶುರುವಾಗಿದೆ; ರೂಪೇಶ್ ಶೆಟ್ಟಿ ಗೆಲುವನ್ನ ಸಂಭ್ರಮಿಸಿದ ಸಾನ್ಯಾ ಅಯ್ಯರ್

First Published | Jan 1, 2023, 3:53 PM IST

ಬಿಗ್ ಬಾಸ್ ಸೀಸನ್ 9ಅನ್ನು ರೂಪೇಶ್ ಶೆಟ್ಟಿ ಗೆದ್ದು ಬೀಗಿದ್ದಾರೆ. ರೂಪೇಶ್ ಗೆಲುವನ್ನು ಸಾನ್ಯಾ ಅಯ್ಯರ್ ಸಂಭ್ರಮಿಸಿದ್ದಾರೆ. 

'ಬಿಗ್ ಬಾಸ್ ಕನ್ನಡ ಸೀಸನ್ 9'ಗೆ ಅದ್ದೂರಿ ತೆರೆ ಬಿದ್ದಿದೆ. ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ.  ಈ ಮೂಲಕ ಬಿಗ್ ಬಾಸ್ 9 ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 9 ಯಶಸ್ವಿಯಾಗಿ ಮುಕ್ತಾಯವಾಗಿದೆ. 
 

ಪ್ರಾರಂಭದಿಂದನೂ ಕುತೂಹಲ, ನಿರೀಕ್ಷೆ ಹೆಚ್ಚಿಸಿದ್ದ ಬಿಗ್ ಬಾಸ್‌ಗೆ ಅಂತ್ಯ ಹಾಡಲಾಗಿದೆ. ಡಿಸೆಂಬರ್ 30 ಮತ್ತು 31ರಂದು ನಡೆದ ಬಿಗ್ ಬಾಸ್ ಸೀಸನ್ 9 ಅದ್ದೂರಿ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ ಟ್ರೋಫಿ ಎತ್ತಿಹಿಡಿದರು. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ.  ಬಿಗ್ ಬಾಸ್ ಗೆದ್ದು ಬೀಗುತ್ತಿರುವ ರೂಪೇಶ್ ಶೆಟ್ಟಿ ಅವರಿಗೆ ಅಭಿನಂದನೆಗಳ ಮಹಾಪೂರ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ವಿಶ್ ಮಾಡುತ್ತಿದ್ದಾರೆ. 

Tap to resize

ಅಂದಹಾಗೆ ರೂಪೇಶ್ ಶೆಟ್ಟಿ ಗೆಲುವನ್ನು ಸಂಭ್ರಮಿಸಿದವರಲ್ಲಿ ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಕೂಡ ಒಬ್ಬರು. ರೂಪೇಶ್ ಗೆಲುವನ್ನು ವಿಶೇಷವಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ಶೆಟ್ಟಿ ಜೊತೆ ಫೋಟೋ ಶೇರ್ ಮಾಡಿ ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ. ಈ ವರ್ಷ ಅದ್ಭುತವಾಗಿ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. 
 

ರೂಪೇಶ್ ಶೆಟ್ಟಿ ಕೈ ಹಿಡಿದು ನಿಂತಿರುವ ಒಂದಿಷ್ಟು ಫೋಟೋ ಶೇರ್ ಮಾಡಿ, 'ಫೋಟೋ ಬ್ಲರ್ ಆಗಿದೆ. ಖುಷಿ ನೂರಾಗಿದೆ. ಹೊಸ ವರ್ಷ ಅದ್ಬುತವಾಗಿ ಶುರುವಾಗಿದೆ' ಎಂದು ಹೇಳಿದ್ದಾರೆ. ಬಳಿಕ ನನ್ನ ಬೆಸ್ಟ್ ಫ್ರೆಂಡ್ ವಿನ್ ಆಗಿದ್ದಾನೆ ಎಂದು ಹೇಳಿದ್ದಾರೆ. 

ಸಾನ್ಯಾ ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಬೆಸ್ಟ್ ಎಂದು ಹೇಳುತ್ತಿದ್ದಾರೆ. ಕೆಲವರು ರೂಪಿ ವೈಫ್ ಆಗಿ ಮಂಗಳೂರಿಗೆ ಬನ್ನಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ನಿಮ್ಮ ಬಾಂಡಿಂಗ್ ಹೀಗೆ ಇರಲಿ ಎಂದು ಹೇಳುತ್ತಿದ್ದಾರೆ.   
 

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಸಾನ್ಯಾ ಮನೆಯಿಂದ ಹೊರ ಬಂದ ಮೇಲೆ ರೂಪೇಶ್ ಶೆಟ್ಟಿ ಸಾನ್ಯಾ ನೆನೆದು ಕಣ್ಣೀರಿಟ್ಟದ್ದರು. ಸಾನ್ಯಾ ಕೂಡ ರೂಪೇಶ್ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದರು. ಇಬ್ಬರ ನಡುವೆ ಉತ್ತಮ ಬಾಂಡಿಂಗ್ ಬೆಳೆದಿದೆ. ಬಿಗ್ ಬಾಸ್ ಬಳಿಕವೂ ಹೀಗೆ ಇರಲಿ ಎನ್ನುವುದು ಅವರ ಅಭಿಮಾನಿಗಳ ಆಸೆ. 

Latest Videos

click me!