ಮುಸ್ಲಿಂ ಹುಡುಗಿಯಾದ್ರೂ ಮಹಾಲಕ್ಷ್ಮಿಯಾಗಿ ಮಿಂಚಿದ ಹನುಮಂತನ ಜೋಡಿ ಆಸಿಯಾ ಬೇಗಂ! ಜೋಡಿ ಫಿಕ್ಸಾ ಎಂದ ಫ್ಯಾನ್ಸ್‌

First Published Sep 26, 2023, 6:46 PM IST

ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮಕ್ಕೆ ಕುರಿಗಾಹಿ ಹನುಮಂತ ಓರ್ವ ಸ್ಪರ್ಧಿ, ಎಂದಿನಂತೆ ಮುಗ್ಧತೆಯಿಂದ ಎಂಟ್ರಿ ಕೊಟ್ಟ ಕುರಿಗಾಹಿ ಹನುಮಂತನಿಗೆ ಆಸಿಯಾ ಬೇಗಂ ಜೋಡಿಯಾಗಿದ್ದಾಳೆ. ಮೂಲತಃ ಮುಸ್ಲಿಂ ಯುವತಿಯಾದ್ರೂ, ಹಿಂದೂ ಸಂಪ್ರದಾಯದ ಯುವತಿಯಂತೆ ಮಹಾಲಕ್ಷ್ಮೀಯಾಗಿ ಮಿಂಚಿದ್ದಾಳೆ. ಹೀಗಾಗಿ, ಹನುಮಂತ ಹಾಗೂ ಆಸಿಯಾ ಬೇಗಂ ಜೋಡಿ ಫಿಕ್ಸಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ನಿಜ ಜೀವನದಲ್ಲಿರುವಂತೆ ಕೆಳಗೆ ಲುಂಗಿ ಮೇಲೊಂದು ಅಂಗಿ ಧರಿಸಿ ಸರಳತೆಯಿಂದಲೇ ಇರುತ್ತಿದ್ದ ಹನುಮಂತನನ್ನು ತನ್ನಂತೆಯೇ ಮಾಡ್ರನ್‌ ಲುಕ್‌ಗೆ ಬದಲಾಯಿಸಿದ್ದಾಳೆ.

ಆಸಿಯಾ ಬೇಗಂ ಅವರು ಮಾಡೆಲಿಂಗ್‌ ಕ್ಷೇತ್ರದಲ್ಲಿರುವುದರಿಂದ ಹಾಟ್‌ ಡ್ರೆಸ್‌ನಲ್ಲಿಯೂ ಮಿಂಚುತ್ತಿದ್ದಾರೆ. ಇದರಿಂದ ಪಡ್ಡೆಗಳ ನಿದ್ದೆಯನ್ನೂ ಕದಿಯುವುದರಲ್ಲಿ ಮುಂಚೂಣಿಯಲ್ಲಿದ್ದಾಳೆ.

Latest Videos


ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮಕ್ಕೆ ಕುರಿಗಾಹಿ ಹನುಮಂತ ಓರ್ವ ಸ್ಪರ್ಧಿ, ಎಂದಿನಂತೆ ಮುಗ್ಧತೆಯಿಂದ ಎಂಟ್ರಿ ಕೊಟ್ಟ ಕುರಿಗಾಹಿ ಹನುಮಂತನಿಗೆ ಆಸಿಯಾ ಬೇಗಂ ಜೋಡಿಯಾಗಿದ್ದಾಳೆ. 

ಆಸಿಯಾ ಬೇಗಂ ಕಳೆದ ವರ್ಷದ ನಡೆದ ವರಮಹಾಲಕ್ಷ್ಮೀ ಹಬ್ಬದ ವೇಳೆ ಮಹಾಲಕ್ಷ್ಮಿ ಉಡುಗೆಯನ್ನು ತೊಟ್ಟುಕೊಂಡು ಥೇಟ್‌ ಲಕ್ಷ್ಮೀಯಾಗಿ ಕಂಗೊಳಿಸಿದ್ದಾಳೆ.

ಮಾಡೆಲಿಂಗ್‌ ಕ್ಷೇತ್ರದಲ್ಲಿ ಭರ್ಜರಿಯಾಗಿಯೇ ಮಿಂಚುತ್ತಿರುವ ಆಸಿಯಾ ಬೇಗಂ ಹಿಂದೂ ಸಂಪ್ರದಾಯದ ಶೈಲಿಯ ಉಡುಪುಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾಳೆ.

ಜೀ ಕನ್ನಡದ ಭರ್ಜರಿ ಬ್ಯಾಚುಲರ್‌ ಹನುಮಂತನ ಜೋಡಿ ಆಸಿಯಾ ಬೇಗಂ ಹೆಸರಿಗೆ ತಕ್ಕಂತೆ ಮುಸ್ಲಿಂ ಯುವತಿ ಆಗಿದ್ದಾಳೆ. ಆದರೆ, ಈಕೆ ಮೊಡೆಲ್‌ ಆಗಿದ್ದರಿಂದ ಸಂಪ್ರದಾಯ ಬದಿಗಿಟ್ಟು ಬೆಳೆಯುತ್ತಿದ್ದಾರೆ.

ಮುಸ್ಲಿಂ ಸಮುದಾಯದ ಹುಡುಗಿಯಾದ್ರೂ ಹಿಂದೂ ಸಂಪ್ರದಾಯದ ಬಗ್ಗೆ ಆಸಿಯಾ ಬೇಗಂ ಎಲ್ಲವನ್ನೂ ತಿಳಿದುಕೊಂಡಿದ್ದಾಳೆ. ಇದಕ್ಕೆ ಮುಖ್ಯ ಕಾರಣವೂ ತಮ್ಮ ಕುಟುಂಬದಲ್ಲಿಯೇ ಇದೆ.

ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದ ಫ್ಯಾಮಿಲಿ ರೌಂಡ್‌ನಲ್ಲಿ ಆಸಿಯಾ ಬೇಗಂ ತಂದೆ ಹಾಗೂ ತಾಯಿ ಇಬ್ಬರೂ ಬಂದಿದ್ದರು. ಆಗಲೇ ಆಸಿಯಾ ಬೇಗಂಳಿಗೆ ಹಿಂದೂ ಸಂಪ್ರದಾಯದ ಪಾಲನೆ ಅರಿವು ಎಲ್ಲಿಂದ ಬಂದಿದೆ ಎಂಬುದು ತಿಳಿದಿದೆ.

ಭರ್ಜರಿ ಬ್ಯಾಚುಲರ್ಸ್‌ ಸೆಟ್‌ನಲ್ಲಿಯೂ ಆಸಿಯಾ ಬೇಗಂ ಹಿಂದೂ ಯುವತಿಯಂತೆ ಹಣೆಗೆ ಕುಂಕುಮ ಧರಿಸಿದ್ದು, ಬಹುಯೇಕ ಪ್ರೇಕ್ಷಕರು ಈಕೆ ಹಿಂದೂ ಹುಡಿಗಿ ಎಂದೇ ಭಾವಿಸುತ್ತಿದ್ದಾರೆ.

ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋನಲ್ಲಿ ಆಸಿಯಾ ಬೇಗಂ ಬೇರೊಬ್ಬರೊಂದಿಗೆ ಸಲುಗೆಯಿಂದ ಇದ್ದಾಗ ಹನುಮಂತ ಸಿಟ್ಟಾಗಿದ್ದೂ ಕಂಡುಬಂದಿದೆ. ಹೀಗಾಗಿ, ನಿಮ್ಮ ಮೇಲೆ ಹನುಮಂತಣ್ಣ ಫುಲ್‌ ಲವ್‌ ಸರ್ವ ನಾಶ ಎಂದು ಟ್ರೋಲ್‌ ಮಾಡಿದ್ದಾರೆ.

ಮಾಡೆಲಿಂಗ್‌ನಲ್ಲಿ ಹಿಂದೂ ಸಂಪ್ರದಾಯದ ಯುವತಿಯರಂತೆ ಸೀರೆಯನ್ನು ಧರಿಸಿರುವ ಹಾಗೂ ಬಂಗಾರದ ಆಭರಣಗಳನ್ನು ಧರಿಸಿರುವ ಮಾದರಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಹಣೆಗೆ ಬಿಂದಿ, ಸೀರೆ, ಬಳೆ, ಮೂಗುತಿ, ತಲೆಗೆ ಹೂವು ಮುಡಿದು ಮಧುವಣಗಿತ್ತಿಯಂತೆ ಕಾಣಿಸಿಕೊಂಡಿದ್ದಾರೆ.

click me!