ರೋಮಾಂಚನ ಸೃಷ್ಟಿಸಿದ ಅಣ್ಣಯ್ಯ: ವೀರಭದ್ರನ ಬಂಧನದಿಂದ ಶಾರದಮ್ಮಳನ್ನು ಶಿವು, ಪಾರ್ವತಿ ಮತ್ತು ಮಾದಪ್ಪ ರಕ್ಷಿಸಿದ್ದಾರೆ. ತನ್ನ ಪಾಪದ ಕೃತ್ಯಕ್ಕೆ ಹೆದರಿ ವೀರಭದ್ರ ಪಾರ್ಶ್ವವಾಯುವಿಗೆ ತುತ್ತಾಗಿದ್ದಾನೆ. ಇತ್ತ, ತನ್ನ ಗುರುತು ಮಗ ಶಿವುಗೆ ತಿಳಿಯಬಾರದೆಂದು ಶಾರದಮ್ಮ ಮಾದಪ್ಪನ ಬಳಿ ಮನವಿ ಮಾಡಿಕೊಂಡಿದ್ದಾಳೆ.
ವೀರಭದ್ರನ ಬಂಧನದಲ್ಲಿದ್ದ ಶಾರದಮ್ಮಳನ್ನು ಶಿವು, ಪಾರ್ವತಿ ಮತ್ತು ಮಾದಪ್ಪ ರಕ್ಷಣೆ ಮಾಡಿದ್ದಾರೆ. ಅಲ್ಲಿದ್ದ ಎಲ್ಲಾ ರೌಡಿಗಳು ಎಸ್ಕೇಪ್ ಆಗಿದ್ದು, ಶಿವುಗೆ ತಾಯಿಯ ದರ್ಶನವೇ ಆಗಲಿಲ್ಲ. ಶಾರದಮ್ಮಳನ್ನು ನೋಡಿದ ಮಾದಪ್ಪ, ಯಾವ ವಿಷಯವನ್ನು ಹೇಳದೇ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.
25
ವೀರಭದ್ರಗೆ ಪಾರ್ಶ್ವವಾಯು
ಶಿವು-ಪಾರು ತನ್ನ ತೋಟಕ್ಕೆ ಬಂದಿರೋ ವಿಷಯ ತಿಳಿಯುತ್ತಿದ್ದಂತೆ ವೀರಭದ್ರ ಭಯದಿಂದ ಗಢಗಢ ನಡುಗುತ್ತಿದ್ದಾನೆ. ಶಾರದಮ್ಮಾ ಎಲ್ಲಿ ತನ್ನೆಲ್ಲಾ ವಿಷಯವನ್ನು ಶಿವುಗೆ ಹೇಳುತ್ತಾಳೆ ಎಂಬ ಭಯದಲ್ಲಿದ್ದ ವೀರಭದ್ರ ಪಾರ್ಶ್ವವಾಯುಗೆ ತುತ್ತಾಗಿದ್ದಾನೆ. ಈ ದೃಶ್ಯ ನೋಡಿದರೆ ಮಾಡಬಾರದನ್ನು ಮಾಡಿದ್ರೆ ಆಗಬಾರದ್ದೆ ಆಗುತ್ತೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
35
ಶಾರದಮ್ಮಾ ಮನವಿ
ಇತ್ತ ತನ್ನ ಮಾವನ ತೋಟದ ಮನೆಯಲ್ಲಿ ಮಹಿಳೆಯನ್ನು ಬಂಧಿಸಿಟ್ಟಿದ್ದು ಯಾರು? ಆ ಮಹಿಳೆ ಯಾರು ಎಂದು ತಿಳಿಯದೇ ಶಿವು ಗೊಂದಲಕ್ಕೆ ಒಳಗಾಗಿದ್ದಾನೆ. ಇತ್ತ ಮಾದಪ್ಪನ ಮನೆ ಸೇರಿರುವ ಶಾರದಮ್ಮಾ, ಮಗಳು ರಶ್ಮಿ ಮದುವೆಯನ್ನು ನಿನ್ನ ಮಗ ಸೀನನೊಂದಿಗೆ ಮಾಡಿಸಿದ್ದು ನಾನು ಎಂಬ ಸತ್ಯವನ್ನು ಹೇಳಿದ್ದಾಳೆ. ಹಾಗೆ ನಾನು ಶಿವು ತಾಯಿ ಅನ್ನೋ ಸತ್ಯ ಪಾರುಗೆ ಗೊತ್ತಾಗೋದು ಬೇಡ ಎಂದು ಮಾದಪ್ಪನ ಬಳಿ ಶಾರದಮ್ಮಾ ಮನವಿ ಮಾಡಿಕೊಂಡಿದ್ದಾಳೆ.
ಫೋನ್ ಮಾಡಿ ಶಾರದಮ್ಮಳ ಆರೈಕೆಯನ್ನು ಪಾರು ವಿಚಾರಿಸಿದ್ದಾಳೆ. ಇದರಿಂದ ಶಾರದಮ್ಮಾ ಖುಷಿಯಾಗಿದ್ದಾಳೆ. ಮತ್ತೊಂದೆಡೆ ಮನೆಯ ಹಿತ್ತಲ ಕೋಣೆಯಲ್ಲಿದ್ದ ಶಾರದಮ್ಮಳನ್ನು ಗುಂಡಮ್ಮ (ರಶ್ಮಿ) ನೋಡಿದ್ದಾಳೆ. ಮಗಳು ನೋಡಿ ಶಾರದಮ್ಮಾ ಫುಲ್ ಖುಷಿಯಾಗಿದ್ದಾಳೆ.
ಒಟ್ಟಿನಲ್ಲಿ ಇಂದಿನ ಸಂಚಿಕ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಮುಂದೆ ಅಣ್ಣಯ್ಯ ಸೀರಿಯಲ್ ಯಾವ ಆಯಾಮ ಪಡೆದುಕೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಹುಟ್ಟಿದೆ. ಇತ್ತ ರಾಣಿ ಜೀವನ ಏನಾಗ್ತಿದೆ ಅಂತಾನೂ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ.