Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ!

Published : Oct 27, 2025, 07:49 AM IST

'ಅಣ್ಣಯ್ಯ' ಸೀರಿಯಲ್‌ನಿಂದ ಲೀಲಾ ಪಾತ್ರಧಾರಿ ಶ್ರುತಿ ತಾತ್ಕಾಲಿಕವಾಗಿ ದೂರವಾಗಿದ್ದಾರೆ. ಇದೀಗ ಸಹನಟರಾದ ಮಾದಪ್ಪ, ಸೀನ ಮತ್ತು ಭಾನು ತಮಾಷೆಯ ರೀಲ್ಸ್ ಮಾಡಿ, ಲೀಲಾಳನ್ನು ವಾಪಸ್ ಬರುವಂತೆ ಕರೆದಿದ್ದು, ಈ ವಿಡಿಯೋ ವೈರಲ್ ಆಗಿದೆ. 

PREV
15
ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ

ಮಾವ ಅಂದ್ರೆ ಹೇಗಿರಬೇಕೆಂದು ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ ತೋರಿಸುತ್ತಿದೆ. ಮಗನಿಗೆ ತೆಳ್ಳಗೆ ಬೆಳ್ಳಗಿರುವ ಮತ್ತು ಅವನಿಷ್ಟದ ಹುಡುಗಿ ಜೊತೆ ಮದುವೆ ಮಾಡಿಸಬೇಕು ಅನ್ನೋದು ಲೀಲಾಳ ಗುರಿಯಾಗಿದೆ. ಮಾದಪ್ಪ ಸೊಸೆ ಪರವಾಗಿ ನಿಂತಿದ್ರೆ, ಪಿಂಕಿ ಜೊತೆಯಲ್ಲಿ ಸೀನನಿಗೆ ಮದುವೆ ಮಾಡಿಸಬೇಕೆಂದು ಲೀಲಾ ಪಣ ತೊಟ್ಟಿದ್ದಾಳೆ.

25
ಮಾದಪ್ಪನ ತುಂಬು ಕುಟುಂಬ

ಸದ್ಯ ಲೀಲಾ ಪಾತ್ರ ಸೀರಿಯಲ್‌ನಿಂದ ದೂರವಾಗಿದೆ. ತಂದೆಗೆ ಅನಾರೋಗ್ಯ ವಿಷಯ ತಿಳಿದ ಲೀಲಾ ತವರಿಗೆ ಹೋಗಿದ್ದಾಳೆ. ಇತ್ತ ಶಾರದಮ್ಮಳ ಎಂಟ್ರಿಯಾಗಿದೆ. ಶಾರದಮ್ಮ ಎಂಟ್ರಿಗಾಗಿಯೇ ಲೀಲಾ ಪಾತ್ರಕ್ಕೆ ಸಣ್ಣದಾದ ಬ್ರೇಕ್ ನೀಡಿದಂತೆ ಕಾಣಿಸುತ್ತಿದೆ. ಆದ್ರೆ ವೀಕ್ಷಕರು ಸಹ ಮಾದಪ್ಪನ ತುಂಬು ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

35
ನಟಿ ಶ್ರುತಿ

ಲೀಲಾ ಪಾತ್ರದಲ್ಲಿ ನಟಿ ಶ್ರುತಿ ಅವರು ನಟಿಸಿದ್ದು, ಉತ್ತಮ ನೃತ್ಯಗಾರ್ತಿಯೂ ಆಗಿದ್ದಾರೆ. ವಯಸ್ಸಿಗೆ ಮೀರಿದ ಪಾತ್ರವಾದ್ರೂ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸೀರಿಯಲ್‌ನಿಂದ ಬಿಡುವು ಮಾಡಿಕೊಂಡಿರುವ ಶ್ರುತಿ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಮಾಡುತ್ತಿರುವ ರೀಲ್ಸ್‌ಗಳನ್ನು ಶ್ರುತಿ ಅವರು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

45
ಲೀಲಾ ಬಂದು ಬಿಡು

ಇದೀಗ ಇದೇ ವಿಡಿಯೋ ನೋಡಿಕೊಂಡು ಸೀರಿಯಲ್‌ನ ಮಾದಪ್ಪ, ಜಿಮ್ ಸೀನ ಮತ್ತು ಭಾನು ತಮಾಷೆಯಾಗಿ ರೀಲ್ಸ್ ಮಾಡಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿ ಭಾನು ಮತ್ತು ಸೀನ ಅಳುವಂತೆ ನಟಿಸುತ್ತಾ ಅಮ್ಮಾ.. ಬೇಗ ಬಾ ಅಂತಾ ಕರೆದಿದ್ದಾರೆ. ಇನ್ನು ಮಾದಪ್ಪಣ್ಣ ಸಹ ಜೋರಾಗಿ ಕಣ್ಣೀರು ಹಾಕುತ್ತಾ, ಲೀಲಾ ಬಂದು ಬಿಡು. ಎಲ್ಲಾ ಮರೆತು ಹೊಸದಾಗಿ ಜೀವನ ಶುರು ಮಾಡೋಣ ಎಂದು ಕರೆದಿದ್ದಾರೆ.

ಇದನ್ನೂ ಓದಿ: Annayya serial: ಪಾರು ಮುಂದೆ ನಡೆಯಲ್ಲ ವೀರಭದ್ರನ‌ ಕುತಂತ್ರ... ಶಾಕ್ ಟ್ರೀಟ್ಮೆಂಟ್ ಕೊಡಲು ಡಾಕ್ಟ್ರಮ್ಮ ರೆಡಿ

55
ತಮಾಷೆಯ ರೀಲ್ಸ್

ಸದ್ಯ ಈ ನಾಲ್ಕು ಜನರ ತಮಾಷೆಯ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲೀಲಾ ಅವರನ್ನು ಮತ್ತೆ ಸೀರಿಯಲ್‌ಗೆ ಕರೆದುಕೊಂಡು ಬನ್ನಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಸದ್ಯ ಶಾರದಮ್ಮಾ ಮನೆಯಲ್ಲಿರುವ ವಿಷಯ ಲೀಲಾಗೆ ತಿಳಿದಿಲ್ಲ. ಲೀಲಾ ಬಂದ್ಮೇಲೆ ಏನಾಗಬಹುದು ಎಂದು ವೀಕ್ಷಕರು ಲೆಕ್ಕ ಹಾಕ್ತಿದ್ದಾರೆ.

ಇದನ್ನೂ ಓದಿ: ಗೊಂದಲದಲ್ಲಿ Annayya Serial ವೀಕ್ಷಕರು… ಶಿವುಗೆ ಮೊದಲೇ ಮದ್ವೆಯಾಗಿ ಮಗುವಾಗಿತ್ತಾ? 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories