Bigg Boss: ಪಕ್ಕದಲ್ಲಿ ನೋಡಿದ್ರೂ ಕಾವ್ಯಾ ಇದ್ರು, ಎದುರಲ್ಲೂ ಅವ್ರೇ, ಏನ್ಮಾಡ್ಲಿ? ಸುದೀಪ್​ ಮುಂದೆ ಗಿಲ್ಲಿ ಫುಲ್​ ಕನ್​ಫ್ಯೂಷನ್​

Published : Oct 26, 2025, 05:11 PM IST

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಬಾಂಧವ್ಯ ಗಮನ ಸೆಳೆಯುತ್ತಿದೆ. ಕಾವ್ಯಾ ಮಾತಿಗೆ ಕ್ಲೀನ್ ಶೇವ್ ಮಾಡಿಸಿಕೊಂಡ ಗಿಲ್ಲಿಯನ್ನು, ದೀಪಾವಳಿ ದಿನ ಕಾವ್ಯಾಳನ್ನೇ ನೋಡುತ್ತಿದ್ದ ವಿಚಾರವಾಗಿ ಸುದೀಪ್ ತಮಾಷೆ ಮಾಡಿ ಕಾಲೆಳೆದಿದ್ದಾರೆ.  

PREV
16
ಗಿಲ್ಲಿ-ಕಾವ್ಯಾ ಬಾಂಡಿಂಗ್​

ಬಿಗ್ ಬಾಸ್ (Bigg Boss 12) ನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಬಾಂಡಿಂಗ್​ ಸಕತ್​ ಫೇಮಸ್​ ಆಗಿದೆ. ಇವರಿಬ್ಬರ ಜೋಡಿಯನ್ನು ಫ್ಯಾನ್ಸ್​ ಮೆಚ್ಚಿಕೊಂಡಿದ್ದಾರೆ ಕೂಡ. ಟಾಸ್ಕ್‌ನ ಹೊರತಾಗಿ ಇಬ್ಬರೂ ಕಾಮಿಡಿ ಮಾಡುವುದು, ಮಾತನಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಯಾರಾದರೂ ಕಾವ್ಯ ಅಥವಾ ಗಿಲ್ಲಿಯ ಬಗ್ಗೆ ಮಾತನಾಡಿದರೆ, ಅವರೊಂದಿಗೆ ಜಗಳ ಮಾಡಿದಾಗಲೂ ಒಬ್ಬರಿಗೊಬ್ಬರು ವಹಿಸಿಕೊಂಡು ಮಾತನಾಡುವುದಕ್ಕೆ ಬರುತ್ತಾರೆ.

26
ಕ್ಲೀನ್​ ಶೇವ್​

ಇದಾಗಲೇ, ಬಿಗ್ ಬಾಸ್​ನಲ್ಲಿ ಕಾವ್ಯಾ, ಗಿಲ್ಲಿ ನಟನಿಗೆ ನೀನು ಕ್ಲೀನ್ ಶೇವ್ ಮಾಡಿಸಿಕೋ ಚೆನ್ನಾಗಿ ಕಾಣಿಸ್ತೀಯ ಎಂದು ಹೇಳುತ್ತಾರೆ. ಇದಕ್ಕೆ ಹೋಗೇ ಮೂದೇವಿ ಎಂದಿದ್ದ ಗಿಲ್ಲಿ ಇದೀಗ ಕಾವ್ಯಾಳ ಮಾತನ್ನು ನಿಜ ಮಾಡಿದ್ದಾರೆ, ಕ್ಲೀನ್​ ಆಗಿ ಶೇವಿಂಗ್​ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ, ಏನಪ್ಪಾ ಕ್ಲೀನ್​ ಕೃಷ್ಣಪ್ಪನವರೇ ಎಂದು ಸುದೀಪ್​ ಗಿಲ್ಲಿ ಸಂಬೋಧಿಸಿದರು.

36
ಜಾತ್ರೆಯ ಬಗ್ಗೆ ಗಿಲ್ಲಿ

ಆಗ ಗಿಲ್ಲಿ ಅವರು ಊರಿನಲ್ಲಿ ಆಗಿರೋ ಜಾತ್ರೆಯ ಕುರಿತು ಗಿಲ್ಲಿ ನಟ ಹೇಳಿದ್ದಾರೆ. ಜಾತ್ರೆಯಲ್ಲಿ ಏನೇನು ಮಾಡುತ್ತೀರಿ ತಾವು ಎಂದು ಸುದೀಪ್​ ಕೇಳಿದ್ದಾರೆ. ಅದಕ್ಕೆ ಗಿಲ್ಲಿ ದೇವಸ್ಥಾನಕ್ಕೆ ಕೈ ಮುಗೀತೀವಿ ಎಂದಾಗ ಸುದೀಪ್​ ಏ... ಯಾವ ದೇವಸ್ಥಾನ ಎಂದು ಗಿಲ್ಲಿಗೆ ತಮಾಷೆ ಮಾಡಿದಾಗ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

46
ಯಾರನ್ನು ನೋಡಿದ್ರಿ?

ಕೊನೆಗೆ ಸುದೀಪ್​ ಅವರು ಬಿಗ್​ಬಾಸ್​ನಲ್ಲಿ ದೀಪಾವಳಿ ಮಾಡಿದಾಗ ಎಲ್ಲಾ ಹೊಸ ಬಟ್ಟೆ ಹಾಕಿದ್ರಲ್ಲ ಯಾರನ್ನು ನೋಡಿದ್ರಿ ಎಂದಾಗ ಗಿಲ್ಲಿ, ಕಾವ್ಯಾ ಪಕ್ಕದಲ್ಲಿ ಬಂದು ನಿಂತಿದ್ರು. ಯಾರಪ್ಪಾ ಪಕ್ಕದಲ್ಲಿ ಬಂದಿದ್ದು ಅಂತ ನೋಡಿದೆ ಅಷ್ಟೇ, ನೋಡಿದ್ರೆ ಕಾವ್ಯಾ ಆಗಿದ್ರು ಎಂದಾಗ, ಸುದೀಪ್​ ಓಹೊಹೊ... ನಿಮ್ಮಷ್ಟು ಇನ್ನೋಸೆಂಟ್​ ಬಿಗ್​ಬಾಸ್​​ನಲ್ಲಿ ಯಾರೂ ಇಲ್ಲ ನೋಡಿ ಎಂದು ತಮಾಷೆ ಮಾಡಿದ್ರು.

56
ಅಲ್ಲೂ- ಇಲ್ಲೂ ಎಲ್ಲೆಲ್ಲೂ

ಆಗ ಕಾವ್ಯಾ ಸರ್​ ನಾನು ಪಕ್ಕದಲ್ಲಿ ಇರ್ಲೇ ಇಲ್ಲ ಸರ್​, ಮುಂದೆ ಪೂಜೆ ಮಾಡ್ತಾ ಇದ್ದೆ ಎಂದಿದ್ದಾರೆ. ಅವನು ಎಲ್ಲೋ ಇದ್ದ ಎಂದಿದ್ದಾರೆ. ಕೂಡಲೇ ಗಿಲ್ಲಿ, ಒಹ್​ ಅವ್ರು ಆಮೇಲೆ ಮುಂದೆ ಬಂದು ನಿಂತುಕೊಂಡರು. ನಾನು ದೇವರಿಗೆ ಕೈಮುಗೀತಾ ಇದ್ದೆ. ಒಹ್​ ಯಾರೋ ಬಂದು ನಿಂತರಲ್ಲ ಅಂತ ನೋಡಿದಾಗ ಕಾವ್ಯಾ ಆಗಿದ್ರು ಎಂದರು.

66
ಬಿದ್ದೂ ಬಿದ್ದೂ ನಕ್ಕರು

ಆಗ ಸುದೀಪ್​​ ಹೇಗೆ ಕಾಣಿಸಿದ್ರು ಎಂದಾಗ ಗಿಲ್ಲಿ ಚೆನ್ನಾಗಿ ಕಾಣಿಸಿದ್ರು ಎಂದ್ರು. ಅದಕ್ಕೆ ಸುದೀಪ್​ ಅಲ್ಲಪ್ಪಾ ನಾನು ದೇವರಿಗೆ ಕೇಳಿದ್ದು ಅಂದಾಗ ಎಲ್ಲರೂ ಬಿದ್ದೂ ಬಿದ್ದೂ ನಕ್ಕರು.

ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories