ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಸೀಸನ್ 2 ರಿಯಾಲಿಟಿ ಶೋ ನಲ್ಲಿ ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ, ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡುತ್ತಿದ್ದಾರೆ.
28
ಜೋಡಿ ನಂ 1 ಸೀಸನ್ 2 ನಿರೂಪಣೆಗಾಗಿ ಶ್ವೇತಾ ಚಂಗಪ್ಪ ಲಂಗ-ದಾವಣಿ ಧರಿಸಿದ್ದು, ಶ್ವೇತಾರ ಲುಕ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದು, ತರೇಹವಾರಿ ಕಾಮೆಂಟ್ ಮಾಡಿದ್ದಾರೆ.
38
ಶ್ವೇತಾ ಚಂಗಪ್ಪ ನೀಲಿ ಹಾಗೂ ಕುಂಕುಮ ಬಣ್ಣದ ಲಂಗ-ದಾವಣಿ ಧರಿಸಿದ್ದು, ಯಾವ ಹೀರೋಯಿನ್‌ಗೂ ಕಡಿಮೆ ಇಲ್ಲ, ರಿಯಲ್ ಬ್ಯೂಟಿ, ದೇವತೆ ತರಹ ಇದ್ದೀರಾ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.
48
ಇನ್ನೂ ಕೆಲವರು ಶ್ವೇತಾ ಲುಕ್‌ಗೆ, ಕರ್ನಾಟಕ ಕಂಡ ದೇವಲೋಕದ ಅಪ್ಸರೆ, ಸುಂದರ ನಿರೂಪಕಿ, ಸ್ಮೈಲಿಂಗ್ ಕ್ವೀನ್, ಬೇಬಿ ಡಾಲ್, ಚೆಂದದ ಚೆಲುವೆ ನಿಮ್ಮ ಆ ನಗುವೆ ನಮಗೆ ರಸದೌತಣ ಅಂತೆಲ್ಲ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
58
ಧಾರಾವಾಹಿಗಳಲ್ಲಿ ಮಿಂಚಿ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಸೈ ಎನಿಸಿಕೊಂಡಿದ್ದಾರೆ. ಮಗುವಾದ ಮೇಲೆ ಕಿರುತೆರೆಯಿಂದ ಬ್ರೇಕ್ ಪಡೆದಿದ್ದ ಶ್ವೇತಾ ಚೆಂಗಪ್ಪ ತಾಯ್ತನದ ಅನುಭವವನ್ನು ಅನುಭವಿಸಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿ ಈಗ ನಿರೂಪಣೆಯಲ್ಲಿ ಮುಂದುವರೆದಿದ್ದಾರೆ.
68
'ಜೋಡಿ ನಂ.1' ಹಾಗೂ 'ಸೂಪರ್ ಕ್ವೀನ್' ಶೋಗಳನ್ನು ಶ್ವೇತಾ ನಡೆಸಿಕೊಟ್ಟರು. ಜೊತೆಗೆ ಹ್ಯಾಟ್ರಿಕ್ ಹೀರೋ 125ನೇ ಸಿನಿಮಾ 'ವೇದ'ದಲ್ಲಿ ಶ್ವೇತಾ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಶ್ವೇತಾ ಚೆಂಗಪ್ಪ ಅವರು ಬೋಲ್ಡ್ ಆಗಿ ನಟಿಸಿ, ಬೆಳ್ಳಿತೆರೆಯಲ್ಲಿ ಧೂಳ್ ಎಬ್ಬಿಸಿದ್ದರು.
78
ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರೀಯರಾಗಿರುವ ಶ್ವೇತಾ ಚಂಗಪ್ಪಗೆ ವಯಸ್ಸೇ ಆಗದಂತೆ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
88
ಮಜಾ ಟಾಕೀಸ್' ಸುಂದರ ಚೆಲುವೆ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಸೆಪ್ಟೆಂಬರ್ 9, 2019ರಂದು ಮುದ್ದು ಕೃಷ್ಣನಿಗೆ ಜನ್ಮ ನೀಡಿದ್ದರು. ಇದೀಗ ಹಳ್ಳಿ ಹುಡುಗಿಯಂತೆ ಲಂಗ ದಾವಣಿ ಹಾಕಿಕೊಂಡು ಜೋಡಿ ನಂ 1 ಸೀಸನ್ 2ಗಾಗಿ ನಿರೂಪಣೆ ಮಾಡುತ್ತಿದ್ದಾರೆ.