ಅಮ್ಮನ ಕೆಂಪು ಮೈಸೂರ್ ಸಿಲ್ಕ್ ಸೀರೆಯಲ್ಲಿ ರಂಜನಿ ರಾಘವನ್: ದೃಷ್ಟಿ ತೆಗೆದುಕೊಳ್ಳಿ ಅಂತಿದ್ದಾರೆ ಫ್ಯಾನ್ಸ್!

Published : Oct 20, 2023, 11:46 AM IST

ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ನವರಾತ್ರಿ ಹಬ್ಬದ ವಿಶೇಷವಾಗಿ ಅಮ್ಮನ ಕೆಂಪು ಮೈಸೂರು ಸೀರೆಯುಟ್ಟು ಸಂಭ್ರಮಿಸಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.   

PREV
17
ಅಮ್ಮನ ಕೆಂಪು ಮೈಸೂರ್ ಸಿಲ್ಕ್ ಸೀರೆಯಲ್ಲಿ ರಂಜನಿ ರಾಘವನ್: ದೃಷ್ಟಿ ತೆಗೆದುಕೊಳ್ಳಿ ಅಂತಿದ್ದಾರೆ ಫ್ಯಾನ್ಸ್!

ಕನ್ನಡತಿಯ ಭುವಿಯಾಗಿ ಜನಮನ ಗೆದ್ದಿದ್ದ ನಟಿ ರಂಜನಿ ರಾಘವನ್ (Ranjani Raghavan), ಸದ್ಯ ನಟನೆಯಿದ್ದ ಕೊಂಚ ದೂರವೇ ಉಳಿದಿದ್ದು, ಟ್ರಾವೆಲ್ ಮಾಡುತ್ತಾ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಅಲ್ಲೆ ಬ್ಯುಸಿಯಾಗಿಬಿಟ್ಟಿದ್ದಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ರಂಜನಿ ಇದೀಗ ನವರಾತ್ರಿ ಹಬ್ಬದ ಪ್ರಯುಕ್ತ ಹೊಸ ಫೊಟೋಸ್ ಶೇರ್ ಮಾಡಿದ್ದು, ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟಿಯನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. 
 

37

ರಂಜನಿ ನವರಾತ್ರಿ ಹಬ್ಬದ ವಿಶೇಷವಾಗಿ ಅಮ್ಮನ ಕೆಂಪು ಬಣ್ಣದ ಮೈಸೂರ್ ಸಿಲ್ಕ್ ಸೀರೆಯುಟ್ಟು (Mysore silk saree) ಸಂಭ್ರಮಿಸಿದ್ದಾರೆ. ಅಮ್ಮನ ಸೀರೆ ಎಷ್ಟು ಸ್ಪೆಷಲ್ ಅನ್ನೋದನ್ನು ರಂಜನಿ ಈ ಮೂಲಕ ತೋರಿಸಿದ್ದಾರೆ. 
 

47

ರಂಜನಿಯನ್ನು ಕೆಂಪು ಸೀರೆಯಲ್ಲಿ ನೋಡಿದ ಅಭಿಮಾನಿಗಳು, ದೇವತೆ, ಅಂದ ಅಂದ್ರೆ ನೀವೆ ಮೇಡಂ, ಬೇಗ ಮನೆಗೆ ಹೋಗಿ ದೃಷ್ಟಿ ತೆಗೆಯಿರಿ, ನಿಮ್ಮಿಂದಲೇ ನೀವು ತೊಟ್ಟ ಸೀರೆಗೆ ಅಂದ ಬಂದಿರೋದು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

57

ಇನ್ನೂ ಕೆಲವರು ನಿಮ್ಮನ್ನು ಸೀರೆಯಲ್ಲಿ ನೋಡಿದರೆ ತಲೆಯಲ್ಲಿ ಹುಳಾ ಬಿಟ್ಟ ಹಾಗೆ ಆಗುತ್ತೆ, ಯಾಕೆ ಅಂತ ಗೊತ್ತಿಲ್ಲ ಎಂದರೆ, ಮತ್ತೆ ಕೆಲವರು ಸರಳ ಸುಂದರಿ ನಮ್ಮ ಕನ್ನಡತಿ, ಅಮ್ಮನ ಹತ್ರ ದೃಷ್ಟಿ ತೆಗಿಸಿಕೊಳ್ಳೋಕೆ ಮರಿಬೇಡಿ ಎಂದು ಹೇಳಿದ್ದಾರೆ. 
 

67

ಕನ್ನಡತಿ ನಂತರ ಟಕ್ಕರ್, ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೇ ಸತ್ಯಂ, ನೈಟ್ ಕರ್ಫ್ಯೂ, ಜೊತೆಗೆ ನಟ ಆದಿತ್ಯನ ಜೊತೆ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. 
 

77

ರಂಜನಿ ಕನ್ನಡತಿ ಸೀರಿಯಲ್ ಬಿಟ್ಟ ಮೇಲೆ ಮತ್ತೆ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹರ್ಷ ಮತ್ತು ಭುವಿಯನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಇವತ್ತು ಕೂಡ ಕಾಯ್ತಿದ್ದಾರೆ. 
 

click me!

Recommended Stories