ಈ ಬಾಲೆ ಕಿರುತೆರೆಯ ಫೆವರಿಟ್ ನಟಿ, ವಿಶೇಷ ಚೇತನ ತಮ್ಮನ ಫೋಟೋಸ್ ಶೇರ್ ಮಾಡ್ತಿರ್ತಾರೆ?

Published : Oct 19, 2023, 04:47 PM IST

ಝೀ ಕನ್ನಡ ತಮ್ಮ ಪೇಜ್ ನಲ್ಲಿ ನವರಾತ್ರಿಯ ಸ್ಪೆಷಲ್ ಪೋಸ್ಟ್ ನಲ್ಲಿ ಪುಟ್ಟ ಬಾಲಕಿಯ ಫೋಟೊ ಹಾಕಿ ಯಾರಿಕೆ ಎಂದು ಗೆಸ್ ಮಾಡಲು ಹೇಳಿದ್ದಾರೆ. ನೀವು ಗೆಸ್ ಮಾಡ್ತೀರಾ?   

PREV
17
ಈ ಬಾಲೆ ಕಿರುತೆರೆಯ ಫೆವರಿಟ್ ನಟಿ, ವಿಶೇಷ ಚೇತನ ತಮ್ಮನ ಫೋಟೋಸ್ ಶೇರ್ ಮಾಡ್ತಿರ್ತಾರೆ?

ಝೀ ಕನ್ನಡ (Zee Kannada) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನವರಾತ್ರಿ ಆರಂಭವಾದಗಿನಿಂದ ಒಬ್ಬೊಬ್ಬ ತಾರೆಯರ ಫೋಟೋ ಶೇರ್ ಮಾಡುತ್ತಾ, ನವತಾರೆಯರನ್ನು ಗೆಸ್ ಮಾಡಿ ಎಂದು ಬರೆದಿದ್ದಾರೆ. ಇವತ್ತಿನ ನವತಾರೆ ಇವರೇ ನೋಡಿ. 
 

27

ಆ ಮುದ್ದಾದ ಮುಖ, ಆ ಆಕರ್ಷಕ ಕಣ್ಣುಗಳನ್ನು ನೋಡಿದರೆ ಸೀರಿಯಲ್ ಅಭಿಮಾನಿಗಳಂತೂ ತಟ್ಟನೆ ಇದು ಯಾರೆಂದು ಗೆಸ್ ಮಾಡಬಹುದು. ಯಾಕೆಂದ್ರ ಇದು ಇಂದಿಗೂ ಅದೇ ಮುಗ್ಧತೆಯನ್ನು ಉಳಿಸಿಕೊಂಡಿರುವ ಜನಪ್ರಿಯ ನಟಿ ಪಾರು ಆಲಿಯಾಸ್ ಮೋಕ್ಷಿತಾ ಪೈ (Mokshitha Pai). 

37

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಆಗುತ್ತಿದ್ದಂತೆ ಅಭಿಮಾನಿಗಳು ನಮ್ಮ ಪಾರು, ಮೋಕ್ಷಿತಾ ಪೈ ಎಂದು ಈಗಾಗಲೇ ತಮ್ಮ ನೆಚ್ಚಿನ ನಟಿಯ ಬಾಲ್ಯದ ಫೋಟೋವನ್ನು ಗುರುತಿಸಿ ಕಾಮೆಂಟ್ ಮಾಡಿ ಆಗಿದೆ. 

47

ಮೋಕ್ಷಿತಾ ಪಾರು ಸೀರಿಯಲ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅಖಿಲಾಂಡೇಶ್ವರಿಯ ಹಿರಿಯ ಸೊಸೆ ಮತ್ತು ಆದಿತ್ಯ ನ ಮುದ್ದಿನ ಮಡದಿಯಾಗಿ ಮುಗ್ಧ ಹೆಣ್ಣು ಮಗಳ ಪಾತ್ರದಲ್ಲಿ ನಟಿಸಿದ್ದಾರೆ. 

57

ತನ್ನ ಕುಟುಂಬಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುವ ಪಾರು, ತನಗೆ ಇನ್ನು ತಾಯಿಯಾಗಲು ಸಾಧ್ಯವಿಲ್ಲದಿದ್ದರೂ, ತನ್ನ ಮಗುವನ್ನು, ಹುಟ್ಟುವಾಗಲೇ ಮಗುವನ್ನು ಕಳೆದುಕೊಂಡ ಜನನಿಗೆ ನೀಡಿ, ಪಾರು ಅಂದರೆ ತ್ಯಾಗ ಮೂರ್ತಿ ಅನ್ನೋದನ್ನು ತೋರಿಸಿದ್ದಾರೆ.

67

ಮಂಗಳೂರಿನ ಹುಡುಗಿ ಮೋಕ್ಷಿತಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ, ಅವರು ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ತಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಹೆಚ್ಚಾಗಿ ಟ್ರಾವೆಲ್ ಮಾಡುತ್ತಿರುತ್ತಾರೆ. 

77

ಅಮ್ಮ ಮತ್ತು ತಮ್ಮನ ಜೊತೆಗೆ ಹೆಚ್ಚಾಗಿ ಸಮಯ ಕಳೆಯುವ ಮೋಕ್ಷಿತಾ ತಮ್ಮ ವಿಶೇಷ ಚೇತನ. ಈಕೆ ಹೆಚ್ಚಾಗಿ ತನ್ನ ತಮ್ಮನ ಜೊತೆಗಿನ ಫೋಟೋಗಳನ್ನು, ಮುದ್ದು ಮಾಡುವ ವಿಡೀಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

Read more Photos on
click me!

Recommended Stories