Amruthadhaare: ಜೈದೇವ್ ಕೊ*ಲೆ ಪ್ರಕರಣದಲ್ಲಿ ತಾನೇ ಶರಣಾಗಲು ನಿರ್ಧರಿಸಿದ್ದ ಭೂಮಿಕಾಗೆ ಆಘಾತ ಎದುರಾಗಿದೆ. ಜೈದೇವ್‌ನನ್ನು ಹೂತಿಟ್ಟ ಜಾಗದಲ್ಲಿ ಹೆಣವೇ ಮಾಯವಾಗಿದ್ದು, ಈ ಅನಿರೀಕ್ಷಿತ ತಿರುವು ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ.
ಜೈದೇವ್ ಪ್ರಕರಣದಲ್ಲಿ ಮಹಾತ್ಯಾಗಕ್ಕೆ ಮುಂದಾಗಿದ್ದ ಭೂಮಿಕಾಗೆ ಬಿಗ್‌ಶಾಕ್ ಎದುರಾಗಿದೆ. ವೀಕ್ಷಕರ ಊಹೆಗೂ ನಿಲುಕದ ಹಾಗದೇ ನಿರ್ದೇಶಕರು ಕಥೆಗೆ ರೋಚಕ ತಿರುವು ನೀಡಿದ್ದಾರೆ. ಭೂಮಿಕಾ ಶಾಕ್‌ಗೆ ಕಾರಣವಾಗಿರುವ ವಿಷಯ ಕೇಳಿ ಐಪಿಎಸ್ ಮಲ್ಲಿಗೂ ದಿಗ್ಭ್ರಮೆಯುಂಟಾಗಿದೆ. ಹಾಗಾದ್ರೆ ಸೀರಿಯಲ್‌ನಲ್ಲಾದ ಟ್ವಿಸ್ಟ್ ಏನು ಎಂದು ನೋಡೋಣ ಬನ್ನಿ.
25
ಇಲ್ಲಿವರೆಗೆ ಆಗಿದ್ದೇನು?
ಹೌದು, ಕಳೆದ ಎರಡು ವಾರಗಳಿಂದ ಅಮೃತಧಾರೆ ಸೀರಿಯಲ್ ಜೈದೇವ್ ಸಾವಿನ ಸುತ್ತ ಸಾಗುತ್ತಿದೆ. ಇಲ್ಲಿವರೆಗಿನ ಕಥೆ ಪ್ರಕಾರ, ಜೀವ ಹೊಡೆದ ಏಟಿನಿಂದ ಜೈದೇವ್ ಪ್ರಾಣ ಹೋಗಿತ್ತು. ಈ ವಿಷಯವನ್ನು ಎಲ್ಲರಿಂದಲೂ ಮುಚ್ಚಿಡಲಾಗಿತ್ತು. ಪೊಲೀಸ್ ವಿಚಾರಣೆ ಶುರುವಾಗುತ್ತಿದ್ದಂತೆ ಕೊ-ಲೆ ಬಗ್ಗೆ ಮಲ್ಲಿ ಮುಂದೆ ಹೇಳಲಾಗಿತ್ತು. ಸದ್ಯ ಜೀವಾ ಮತ್ತು ಭೂಮಿಕಾ ಪೊಲೀಸ್ ವಿಚಾರಣೆಯನ್ನು ಎದುರಿಸಿದ್ದಾರೆ.
35
ಹೆಣವೇ ಇಲ್ಲ
ಮತ್ತೊಂದೆಡೆ ಜೀವಾ ತಂದೆಯಾಗುತ್ತಿರುವ ವಿಷಯ ತಿಳಿದು ಭೂಮಿಕಾ ತಾನೇ ಪೊಲೀಸರ ಮುಂದೆ ಶರಣಾಗುವ ಬಗ್ಗೆ ಚಿಂತನೆ ನಡೆಸಿದ್ದಳು. ಇದಕ್ಕಾಗಿ ಜೈದೇವ್ ಹೆಣವನ್ನು ಬೇರೊಂದೆಡೆಗೆ ಸ್ಥಳಾಂತರಿಸಲು ಹೋದ ಭೂಮಿಕಾಗೆ ಬಿಗ್‌ಶಾಕ್ ಎದುರಾಗಿದೆ. ಜೀವಾ, ಮಧುರಾ ಹೂತಿಟ್ಟಿದ್ದ ಜಾಗದಿಂದ ಜೈದೇವ್ ಹೆಣವೇ ಮಾಯವಾಗಿದೆ. ಇದರಿಂದ ಭೂಮಿಕಾಳಲ್ಲಿ ಆತಂಕದ ಜೊತೆ ಭಯ ಹೆಚ್ಚಾಗಿದೆ.
ಜೈದೇವ್ ಹೆಣ ಮಾಯವಾಗಿರೋದರಿಂದ ಮಲ್ಲಿಯ ಲೆಕ್ಕಾಚಾರ ತೆಲಕೆಳಗಾಗಿದೆ. ಇಂದಿನ ಪ್ರೋಮೋ ನೋಡಿದ ವೀಕ್ಷಕರಿಗೆ ದೃಶ್ಯ ಸಿನಿಮಾದ ರಾಜೇಂದ್ರ ಪೊನ್ನಪ್ಪ ಕಣ್ಣೆದುರು ಬರುತ್ತಿದ್ದಾನೆ. ಈ ಸಿನಿಮಾದಲ್ಲಿ ಹೆಂಡತಿ ಮತ್ತು ಮಗಳಿಂದಾದ ಕೊ*ಲೆಯನ್ನು ಮುಚ್ಚಲು ರಾಜೇಂದ್ರ ಪೊನ್ನಪ್ಪ ಹೂತಿಟ್ಟಿದ್ದ ಜಾಗದಿಂದ ಹೆಣವನ್ನು ಬೇರೊಂದು ಕಡೆ ಶಿಫ್ಟ್ ಮಾಡುತ್ತಾನೆ.
55
ವೀಕ್ಷಕರಲ್ಲಿ ಸಾಲು ಸಾಲು ಪ್ರಶ್ನೆಗಳು
ಇದೀಗ ದೃಶ್ಯ ಸಿನಿಮಾದ ರೀತಿಯಲ್ಲಿಯೇ ಜೈದೇವ್ ಹೆಣ ಶಿಫ್ಟ್ ಆಯ್ತಾ ಎಂಬ ಪ್ರಶ್ನೆ ಮೂಡಿದೆ. ಆದ್ರೆ ಇಲ್ಲಿ ರಾಜೇಂದ್ರ ಪೊನ್ನಪ್ಪನಾಗ ಬೇಕಿದ್ದ ಗೌತಮ್ ದಿವಾನ್ ವಿದೇಶ ಪ್ರವಾಸದಲ್ಲಿದ್ದಾನೆ. ಹಾಗಾದ್ರೆ ಇಲ್ಲಿ ಆ ರಾಜೇಂದ್ರ ಪೊನ್ನಪ್ಪ ಯಾರು? ಹೆಣ ಶಿಫ್ಟ್ ಆಗಿದ್ದು ಹೇಗೆ? ಜೈದೇವ್ ಸತ್ತಿಲ್ಲವಾ? ಬದುಕಿದ್ರೆ ಜೈದೇವ್ ಎಲ್ಲಿ? ಇದೇನಾ ಹೊಸ ಅಧ್ಯಾಯ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.