80ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ವನಿತಾ ವಾಸು ಸದ್ಯ ಕಿರುತೆರೆಯಲ್ಲಿ ಖಡಕ್ ವಿಲನ್ ಆಗಿ ಮಿಂಚುತ್ತಿದ್ದಾರೆ.
ಆಗಂತುಕ, ಕಾಡಿನ ಬೆಂಕಿ, ತಾರಕ್, ಉತ್ಕರ್ಷ, ನಾಗಮಂಡಲಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ವನಿತಾ ವಾಸು ಪಕ್ಕಾ ಫ್ಯಾಮಿಲಿ ವುಮೆನ್.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಸೀರಿಯಲ್‌ನಲ್ಲಿ ವನಿತಾ ವಾಸು ಖಡಕ್ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ವನಿತಾ ವಾಸು ತಮ್ಮ ಸಹೋದರಿಯ ಹುಟ್ಟುಹಬ್ಬವನ್ನು ಬೆಂಗಳೂರಿನ ದುಬಾರಿ ಪಬ್‌ನಲ್ಲಿ ಸರಳವಾಗಿ ಕೇಕ್ ಕಟ್ ಮಾಡಿ ಆಚರಿಸಿದ್ದಾರೆ.
ವನಿತಾ ವಾಸು ಅವರ ತಾಯಿ, ಅಕ್ಕ, ಮಗ ಮತ್ತು ಅಕ್ಕನ ಮಗ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಭರ್ಜರಿ ಯಮ್ಮಿ ಯಮ್ಮಿ ಊಟ ಬ್ಯಾಟಿಂಗ್ ಮಾಡಿದ್ದಾರೆ.
ಅಕ್ಕ ತಂಗಿ ನೋಡಲು ಒಂದೇ ರೀತಿ ಇದ್ದೀರಿ...ಯಾಕೆ ನೀವು ಇಬ್ರು ಅಮೃತಾಧಾರೆಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಬಾರದು...ಅವರನ್ನು ನೋಡಿದ್ರೂ ಭಯ ಆಗುತ್ತೆ ಎಂದಿದ್ದಾರೆ ನೆಟ್ಟಿಗರು.
Vaishnavi Chandrashekar