ಗೌರಿ ಹಬ್ಬದ ದಿನ ಮಗಳನ್ನು ಗೊಂಬೆಯಂತೆ ರೆಡಿ ಮಾಡಿದ ಕಿರುತೆರೆ ನಟಿ ಕಾವ್ಯಾ ಗೌಡ!

First Published | Sep 6, 2024, 1:10 PM IST

ವೈರಲ್ ಆಯ್ತು ಕಿರುತೆರೆ ನಟಿ ಕಾವ್ಯಾ ಗೌಡ ಮಗಳ ಫೋಟೋ....ಮಗಳ ಮೊದಲ ಗೌರಿ ಹಬ್ಬ ಜೋರು..... 

ಗಾಂಧಾರಿ, ರಾಧಾ ರಾಮಣ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿರುವ ಕಾವ್ಯಾ ಗೌಡ ಈ ವರ್ಷ ಗೌರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 
 

ಪುತ್ರಿ ಸಿಯಾ ಸೋಮಶೇಖರ್ ಹುಟ್ಟಿದ ನಂತರ ಆಚರಿಸುತ್ತಿರುವ ಮೊದಲ ಗೌರಿ ಹಬ್ಬ ಇದಾಗಿದ್ದು ಮಗಳನ್ನು ಮುದ್ದು ಗೊಂಬೆಯಂತೆ ರೆಡಿ ಮಾಡಿ ವಿಡಿಯೋ ಮಾಡಿದ್ದಾರೆ.

Tap to resize

 'ನಮ್ಮ ಪುಟ್ಟ ಗೌರಿ ಸಿಯಾ ಸೋಮಶೇಖರ್ ಖುಷಿಯನ್ನು ನಮ್ಮ ಮನೆಯಲ್ಲಿ ಹಂಚುತ್ತಿದ್ದಾಳೆ. ಪ್ರತಿಯೊಬ್ಬರಿಗೂ ಗೌರಿ ಹಬ್ಬದ ಶುಭಾಶಯಗಳು' ಎಂದು ಕಾವ್ಯಾ ಬರೆದುಕೊಂಡಿದ್ದಾರೆ.

ಕೇವಲ 6 ತಿಂಗಳು ಕಂದಮ್ಮ ಆಗಿರುವ ಸಿಯಾ ಈಗಲೇ ಡಿಸೈನರ್ ಡ್ರೆಸ್ ಧರಿಸಿದ್ದಾರೆ. ಸುಮಾಯಾ ಡಿಸೈನರ್ ಸ್ಟುಡಿಯೋ ಈ ಲಂಗಾ ಬ್ಲೌಸ್ ಡಿಸೈನ್ ಮಾಡಿದ್ದಾರೆ.

ಕಾವ್ಯಾ ಗೌಡ ಸಹೋದರಿ ಭವ್ಯಾ ಗೌಡ ಪುತ್ರಿ ಕೂಡ ಇದೇ ರೀತಿಯ ಡ್ರೆಸ್ ಧರಿಸಿದ್ದಾರೆ. ಹಳದಿ ಬಣ್ಣ ಲಂಗಕ್ಕೆ ಮರೂನ್ ಬಣ್ಣದ ಜಾಕೆಟ್‌ ಹಾಕಿದ್ದಾರೆ.

ಅಯೋಧ್ಯ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ದಿನ ಕಾವ್ಯಾ ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಿಂಗಳು ತುಂಬುತ್ತಿದ್ದಂತೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ.

Latest Videos

click me!