ಕುಡಿದು ತೂರಾಡಿದ್ರೂ ಜೈದೇವ್‌ಗೆ ಬಹುಪರಾಕ್; ಮಲ್ಲಿ ಮುಂದೆ ಬಾಲ ಬಿಚ್ಚಿದ ಕೆಡಿಗೆ ಶಾಕ್

Published : Jul 28, 2026, 08:26 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಮಲ್ಲಿ ಆತನನ್ನು ಜೈಲಿಗೆ ಕಳುಹಿಸುತ್ತಾಳೆ ಮತ್ತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತಾಳೆ.

PREV
15
ಅಮೃತಧಾರೆ ಸೀರಿಯಲ್

ಐಪಿಎಸ್‌ ಅಧಿಕಾರಿಯಾಗಿರುವ ಮಲ್ಲಿ ಮುಂದೆಯೇ ಬಾಲ ಬಿಚ್ಚಿದ ಮಾಜಿ ಗಂಡ ಕೆಡಿ ಜೈದೇವ್‌ ಜೈಲುಪಾಲಾಗಿದ್ದಾನೆ. ಇಂದಿನ ಇಡೀ ಸಂಚಿಕೆಯ ಅರ್ಧ ಭಾಗದಲ್ಲಿ ಜೈದೇವ್‌ ಕುಡಿದು ರಂಪಾಟ ಮಾಡಿದ್ದನು. ಮಲ್ಲಿಯನ್ನು ಹೇಗೆಲ್ಲಾ ಅವಮಾನಿಸಲು ಸಾಧ್ಯವೋ ಎಲ್ಲವನ್ನು ಜೈದೇವ್ ಮಾಡಿದ್ದಾನೆ. ಇಷ್ಟೆಲ್ಲಾ ಮಾಡಿದ್ರೂ ಮಾತ್ರ ವೀಕ್ಷಕರು ಮಾತ್ರ ಜೈದೇವ್‌ಗೆ ಬಹುಪರಾಕ್ ಹೇಳಿದ್ದಾರೆ.

25
ಸೆಂಟರ್ ಆಫ್ ಅಟ್ರ್ಯಾಕ್ಷನ್

ಹೌದು, ಜೈದೇವ್‌ ನಟನೆಗೆ ಎಂದಿನಂತೆ ಮತ್ತೊಮ್ಮೆ ಜನರು ಫಿದಾ ಆಗಿದ್ದಾರೆ. ಇಡೀ ಎಪಿಸೋಡ್‌ನಲ್ಲಿ ಜೈದೇವ್‌ ಇಂದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಂತು ನಿಜ. ಜೈದೇವ್ ನಟನೆಗೆ ಮಲ್ಲಿ ತನ್ನ ಲುಕ್‌ನಲ್ಲಿಯೇ ಕೌಂಟರ್ ಕೊಟ್ಟಿದ್ದು ವಿಶೇಷ. ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ನೋಡೋಣ ಬನ್ನಿ.

35
ಡ್ಯೂಟಿಯಲ್ಲಿದ್ದ ಮಲ್ಲಿಗೆ ಅವಮಾನ

ರಾತ್ರಿ ಪೊಲೀಸರು ವಾಹನಗಳನ್ನು ಪರಿಶೀಲನೆ ಮಾಡುತ್ತಿರುತ್ತಾರೆ. ಈ ವೇಳೆ ಕುಡಿದು ಕಾರ್ ಚಲಾಯಿಸಿಕೊಂಡು ಬಂದ ಜೈದೇವ್‌ನನ್ನು ಪೊಲೀಸರು ನಿಲ್ಲಿಸುತ್ತಾರೆ. ಈ ವೇಳೆ ಡ್ಯೂಟಿಯಲ್ಲಿದ್ದ ಮಲ್ಲಿಯನ್ನು ನೋಡಿದ ಜೈದೇವ್, ಅಲ್ಲಿದ್ದ ಎಲ್ಲಾ ಪೊಲೀಸರ ಮುಂದೆ ಈಕೆ ನನ್ನ ಮಾಜಿ ಹೆಂಡ್ತಿ. ನನ್ನ ಹಣದಲ್ಲಿ ಐಪಿಎಸ್ ಓದಿ, ಬೇರೊಬ್ಬನ ಜೊತೆ ಹೋದವಳು ಎಂದು ಹೇಳುತ್ತಾನೆ.

45
ರೂರಲ್ ಖೋಟಾ ಮಲ್ಲಿ ಎಂದು ಟೀಕೆ, ಅವಮಾನ

ಇಷ್ಟಕ್ಕೆ ಸುಮ್ಮನಾಗದ ಜೈದೇವ್, ಮಾಜಿ ಪತ್ನಿಯ ಖಾಸಗಿ ವಿಷಯಗಳೆಲ್ಲವನ್ನು ಎಲ್ಲರ ಮುಂದೆ ರಿವೀಲ್ ಮಾಡಿದ್ದಾನೆ. ಪದೇ ಪದೇ ರೂರಲ್ ಖೋಟಾ, ರೂರಲ್ ಖೋಟಾ ಇದೀಗ ಟೀಶರ್ಟ್, ಬೆಲ್ಟ್ ಮತ್ತು ಬೂಟ್ ಹಾಕೊಂಡು ಬಂದು ನಿಂತಿದ್ದಾಳೆ. ನನ್ನ ಕಾರ್ ನಿಲ್ಲಿಸುವಂತೆ ಈಕೆಯೇ ಹೇಳಿದ್ದಾಳೆ ಎಂದು ಜೈದೇವ್ ಪ್ರಶ್ನೆ ಮಾಡುತ್ತಾನೆ. ಸತ್ಯ ಒಪ್ಪಿಕೊಳ್ಳೋಕೆ ಮೀಟರ್ ಬೇಕೆಂದು ಜೈದೇವ್ ಗುಡುಗಿದ್ದಾನೆ.

55
ಜೈದೇವ್ ಮೇಲೆ ಕರುಣೆ ತೋರಿಸದ ಮಲ್ಲಿ

ಜೈದೇವ್ ಉಪಟಳ ಹೆಚ್ಚಾಗುತ್ತಿದ್ದಂತೆ ಆತನ ಮೇಲೆ ಲಾಠಿ ಬೀಸಿದ ಮಲ್ಲಿ, ಜೈಲಿಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಇಡೀ ರಾತ್ರಿ ಜೈಲಿನಲ್ಲಿಯೇ ಕಳೆದ ಜೈದೇವ್‌ನನ್ನು ಬಿಟ್ಟು ಕಳುಹಿಸಬೇಕಾ ಎಂದು ಪೊಲೀಸರು ಮಲ್ಲಿಗೆ ಫೋನ್ ಮಾಡಿ ಕೇಳ್ತಾರೆ. ಆದ್ರೆ ಮಲ್ಲಿ ಮಾತ್ರ, ಕಾನೂನಿನ ಪ್ರಕಾರ ಏನು ಮಾಡಬೇಕು ಅದನ್ನೇ ಮಾಡಿ. ಜೈದೇವ್‌ನನ್ನು ನ್ಯಾಯಾಲಯ ಮುಂದೆ ಹಾಜರುಪಡಿಸುವಂತೆ ಹೇಳಿದ್ದಾಳೆ. ಈ ಘಟನೆ ಬಳಿಕ ಜೈದೇವ್ ಮತ್ತಷ್ಟು ಕೋಪಗೊಂಡಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories