Bigg Bossನಲ್ಲಿ ಎಲ್ಲರಿಗೂ ಸಿಗೋ ಹಣ ಎಷ್ಟು? ಯಾರೂ ಹೇಳದ ಗುಟ್ಟು ರಿವೀಲ್​ ಮಾಡಿದ ನಟ ಧನ್​ರಾಜ್

Published : Jul 28, 2026, 08:22 PM IST

'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್, ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಕೆಲ ಸ್ಪರ್ಧಿಗಳು ವಿನ್ನರ್ ಪ್ರಶಸ್ತಿ ಮೊತ್ತದ ಅರ್ಧದಷ್ಟು ಹಣವನ್ನು ವಾರದ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

PREV
16
'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್

'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್ (Dhanraj Achar) ಬಿಗ್ ಬಾಸ್ 11ರಲ್ಲಿ ಸ್ಪರ್ಧಿಯಾಗಿ ಹೋಗಿದ್ದರು. ಸಾಧಾರಣವಾಗಿ ಬಿಗ್​ಬಾಸ್​ ಮನೆಗೆ ಹೋಗುವುದು ಪ್ರತಿಷ್ಠೆಯ ಸಂಕೇತ ಒಂದಾದರೆ, ಅಲ್ಲಿ ಸಿಗುವ ಪೇಮೆಂಟ್​ಗಳ ಬಗ್ಗೆ ಜನ ಸಾಮಾನ್ಯರಲ್ಲಿ ಯಾವಾಗಲೂ ಕುತೂಹಲ ಇದದ್ದೇ.

26
ಕಂಡೀಷನ್​ ಏನು?

ಆದರೆ, ಬಿಗ್​ಬಾಸ್​​ನ ಸ್ಪರ್ಧಿಗಳಿಗೆ ಇರುವ ಹಲವು ಕಂಡೀಷನ್​ಗಳಲ್ಲಿ ಒಂದು ಅವರ ಪೇಮೆಂಟ್​ ಅನ್ನು ಎಲ್ಲಿಯೂ ರಿವೀಲ್​ ಮಾಡಬಾರದು ಎನ್ನುವುದು. ಇದೇ ಕಾರಣಕ್ಕೆ, ಎಲ್ಲಿಯೂ, ಯಾವ ಸ್ಪರ್ಧಿಯೂ ತಮಗೆ ಅಥವಾ ಬೇರೆ ಸ್ಪರ್ಧಿಗಳಿಗೆ ಸಿಗುವ ಮೊತ್ತವನ್ನು ರಿವೀಲ್​ ಮಾಡುವುದಿಲ್ಲ.

36
ಧನರಾಜ್​ ರಿವೀಲ್​

ಆದರೆ, ಇದೀಗ ಧನ್​ರಾಜ್​ ಅವರು ಒಂದು ಹಿಂಟ್​ ಕೊಡುವ ಮೂಲಕ ಎಷ್ಟು ಸಂಭಾವನೆ ಬರುತ್ತದೆ ಎನ್ನುವುದನ್ನು ರಿವೀಲ್​ ಮಾಡಿದ್ದಾರೆ. shravanbro.insightsಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ರಿವೀಲ್​ ಮಾಡಿದ್ದಾರೆ. ಬಿಗ್‌ ಬಾಸ್‌ ಮನೆಗೆ ಬರುವ ಸ್ಪರ್ಧಿಗಳಿಗೆ ನೀಡಲಾಗುವ ಅತ್ಯಂತ ಹೆಚ್ಚು ಮತ್ತು ಕಮ್ಮಿ ಪೇಮೆಂಟ್​ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಯಿತು.

46
ಅರ್ಧದಲ್ಲೇ ದುಡ್ಡು ಪಡೀತಾರೆ

ಅದಕ್ಕೆ ಧನ್​ರಾಜ್​ ಅವರು, “ಬಿಗ್‌ ಬಾಸ್‌ ವಿನ್ನರ್‌ಗೆ ಸಿಗುವ ಒಟ್ಟು ವಿನ್ನಿಂಗ್‌ ಅಮೌಂಟ್‌ ಇದೆಯಲ್ಲಾ? ಅದರ ಅರ್ಧದಷ್ಟು ಹಣವನ್ನ ಕೇವಲ ವಾರದ ಸಂಭಾವನೆಯ ರೂಪದಲ್ಲೇ ಪಡೆಯುವಂತಹ ಬಲವಾದ ಕಂಟೆಸ್ಟೆಂಟ್‌ಗಳು ಸಹ ಇಲ್ಲಿದ್ದಾರೆ” ಎಂದು ಹೇಳಿದ್ದಾರೆ. ಅಂದರೆ ಕನಿಷ್ಠ 25 ಲಕ್ಷ ರೂಪಾಯಿ ಬರುತ್ತಾ ಎಂದು ಪ್ರಶ್ನಿಸಿದಾಗ, ಜೋರಾಗಿ ನಗುತ್ತಾ, ಗುಟ್ಟು ಬಿಟ್ಟು ಕೊಟ್ಟರೂ ನಾನು ಅದನ್ನು ಹೇಳಲ್ಲ ಎಂದಿದ್ದಾರೆ!

56
ಸೆಲೆಬ್ರಿಟಿಯಾಗಿ ಹೊರಹೊಮ್ಮುವ ಸ್ಪರ್ಧಿಗಳು

ಕೊನೆಗೆ, ಈ ಶೋನಲ್ಲಿ ಅತಿ ಕಡಿಮೆ ಸಂಭಾವನೆ ಪಡೆದವ ನಾನೇ ಇರಬೇಕೇನೋ ಎಂದು ತಮಾಷೆ ಮಾಡಿದ್ದಾರೆ. ಅಷ್ಟಕ್ಕೂ ವಿನ್ನರ್​ಗೆ 50 ಲಕ್ಷ ಕ್ಯಾಷ್​ಪ್ರೈಸ್​ ಸಿಗೋದು ಗೊತ್ತೇ ಇದೆ. ಆದಾಯ ತೆರಿಗೆ ಎಲ್ಲಾ ಕಳೆದ 35 ಲಕ್ಷ ಬಂದರೂ, ಇದರ ನಡುವೆಯೇ ಇನ್ನಷ್ಟು ಹಣ ಮಾಡಿಕೊಳ್ಳುತ್ತಾರೆ.

66
ಕೋಟಿ ಕೋಟಿ ಸಂಪಾದನೆ

ಹಣಕ್ಕಿಂತಲೂ ಹೆಚ್ಚಾಗಿ ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಅವರು ಸೆಲೆಬ್ರಿಟಿಯಾಗಿ, ಕೋಟಿ ಕೋಟಿಯಲ್ಲಿ ಸಂಪಾದನೆಯನ್ನೂ ಮಾಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories