ಖ್ಯಾತ ಮಾಡೆಲ್ ಲಿಚಾ ಬೋರಾ ಅವರು, ರಾಜ್ಯದ ಸಚಿವರೊಬ್ಬರ ಪಾರ್ಟಿಯಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಲು ತಮಗೆ ಅಪರಿಚಿತರಿಂದ ಕರೆ ಬಂದಿತ್ತು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರ ಹಾಗೂ ಹಣದ ಆಮಿಷದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಗ್ಲಾಮರ್ ಜಗತ್ತು ಹಾಗೂ ಮಾಡೆಲಿಂಗ್ ಕ್ಷೇತ್ರದ (Modelling Industry) ಕರಾಳ ಮುಖವನ್ನು ಬಿಚ್ಚಿಡುವಂತಹ ಆಘಾತಕಾರಿ ಘಟನೆಯೊಂದನ್ನು ಖ್ಯಾತ ಮಾಡೆಲ್ ಲಿಚಾ ಬೋರಾ (Licha Bora) ಬಹಿರಂಗಪಡಿಸಿದ್ದಾರೆ. ರಾಜ್ಯದ ಹಾಲಿ ಸಚಿವರೊಬ್ಬರ ಪಾರ್ಟಿಯಲ್ಲಿ (Minister's Party) 'ಕುಡಿದು ಡ್ಯಾನ್ಸ್ ಮಾಡಲು' ಹುಡುಗಿಯರನ್ನು ಸರಬರಾಜು ಮಾಡಿದರೆ ಭಾರಿ ಪ್ರಮಾಣದ ಹಣ ನೀಡುವುದಾಗಿ ತಮಗೆ ಕರೆ ಬಂದಿತ್ತು ಎಂದು ಲಿಚಾ ಶಾಕಿಂಗ್ ಆರೋಪ ಮಾಡಿದ್ದಾರೆ.
26
ಸೋನಾಪುರ್ ರೆಸಾರ್ಟ್‌ನಿಂದ ಬಂದಿತ್ತು ಕರೆ!
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ (Interview) ಈ ವಿಚಾರವನ್ನು ಬಿಚ್ಚಿಟ್ಟ ಲಿಚಾ ಬೋರಾ, 'ಕೆಲ ದಿನಗಳ ಹಿಂದೆ ನನಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಕರೆ ಬಂದಿತ್ತು. ಅಸ್ಸಾಂನ ಸೋನಾಪುರ್‌ನಲ್ಲಿರುವ (Sonapur) ಅತ್ಯಂತ ಪ್ರಸಿದ್ಧ ರೆಸಾರ್ಟ್ ಒಂದರಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಅಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಿಕೊಡಲು ಸಾಧ್ಯವಿದೆಯೇ? ಎಂದು ಕೇಳಿದನು. ನಾನು ಯಾಕೆ ಎಂದು ಪ್ರಶ್ನಿಸಿದಾಗ, ರಾಜ್ಯದ ಪ್ರಭಾವಿ ಶಾಸಕ ಹಾಗೂ ಸಚಿವರೊಬ್ಬರ ಪಾರ್ಟಿಗೆ ಈ ವ್ಯವಸ್ಥೆ ಬೇಕಾಗಿದೆ ಎಂದು ಆತ ಹೇಳಿದನು' ಎಂದು ವಿವರಿಸಿದ್ದಾರೆ.
36
‘ಕೇವಲ ಡ್ಯಾನ್ಸ್‌ಗೆ 80 ಸಾವಿರ ಹಣ!’ ಅನುಮಾನ ಗೊಂಡಿದ್ದ ಮಾಡೆಲ್:
ಕರೆ ಮಾಡಿದ ವ್ಯಕ್ತಿಗಳು ಕೇವಲ ಅಲ್ಪಾವಧಿಯ ಪಾರ್ಟಿಗೆ ಬರಲು ಬರೋಬ್ಬರಿ ₹80,000 ನೀಡುವುದಾಗಿ ಆಫರ್ (Offer) ನೀಡಿದ್ದರು. 'ಕೇವಲ ಡ್ಯಾನ್ಸ್ ಮಾಡಲು ಇಷ್ಟೊಂದು ದೊಡ್ಡ ಮೊತ್ತವನ್ನು ಯಾರು ಕೊಡ್ತಾರೆ? ಎಂಬ ಅನುಮಾನ ನನಗೆ ಬಂದಿತ್ತು. ಹೀಗಾಗಿ ನಾನು ನೇರವಾಗಿಯೇ ಆತನನ್ನು ಪ್ರಶ್ನಿಸಿದೆ. ನಿಮಗೆ ಲೈಂಗಿಕ ವೃತ್ತಿಗೆ (Se*x Work) ಹುಡುಗಿಯರು ಬೇಕಿದ್ದರೆ, ಸೆ*ಕ್ಸ್ ವರ್ಕರ್ಸ್ ಬಳಿ ಹೋಗಿ ಎಂದು ಕಡಾಖಂಡಿತವಾಗಿ ಹೇಳಿದೆ. ಆದರೆ ಆತ, ಇಲ್ಲ ನಮಗೆ ಕೇವಲ ನಮ್ಮ ಜೊತೆ ಕುಡಿದು ಡ್ಯಾನ್ಸ್ ಮಾಡಲು ಮಾಡೆಲ್‌ಗಳೇ ಬೇಕು ಎಂದು ಪಟ್ಟು ಹಿಡಿದಿದ್ದನು' ಎಂದು ಲಿಚಾ ಹೇಳಿದ್ದಾರೆ.
ಆರೋಪದ ಬೆನ್ನಲ್ಲೇ ಆ ಪ್ರಭಾವಿ ಸಚಿವ ಯಾರು ಎಂಬುದನ್ನು ಹೆಳಲು ಲಿಚಾ ಬೋರಾ ನಿರಾಕರಿಸಿದ್ದಾರೆ. 'ಅವರು ಅತ್ಯಂತ ಪ್ರಭಾವಿ ನಾಯಕರು, ಸುದೀರ್ಘ ಕಾಲದಿಂದ ಶಾಸಕರಾಗಿದ್ದು (MLA), ಪ್ರಸ್ತುತ ಸಚಿವರಾಗಿದ್ದಾರೆ (Minister). ಅವರ ಹೆಸರು ಹೇಳಿದರೆ ನನಗೆ ಅಪಾಯ ಕಾಯ್ದಿರುತ್ತದೆ. ಆದರೆ ನಾನು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ' ಎಂದಿದ್ದಾರೆ.
56
ದೂರವಿರುವಂತೆ ಸಲಹೆ ನೀಡಿದ ಪೊಲೀಸ್
ಈ ಕರೆ ಬಂದ ನಂತರ ಲಿಚಾ ತಮ್ಮ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಸಲಹೆ ಕೇಳಿದ್ದರು. 'ಸೋನಾಪುರದಲ್ಲಿ ಇಂತಹ ಘಟನೆಗಳು ನಡೆಯುವ ಬಗ್ಗೆ ಕೇಳಲ್ಪಟ್ಟಿದ್ದೇನೆ. ಆದರೆ, ಇದರಲ್ಲಿ ಸಚಿವರು ನೇರವಾಗಿ ಭಾಗಿಯಾಗಿದ್ದಾರೋ ಅಥವಾ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳು (Middlemen) ಈ ರೀತಿ ದಂದೆ ನಡೆಸುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಈ ವಿಚಾರದಿಂದ ದೂರವಿರು' ಎಂದು ಪೊಲೀಸರು ಸಲಹೆ ನೀಡಿದ್ದಾಗಿ ಲಿಚಾ ತಿಳಿಸಿದ್ದಾರೆ.
66
ಹೊಸ ಮಾಡೆಲ್‌ಗಳಿಗೆ ಎಚ್ಚರಿಕೆ:
ಮಾಡೆಲಿಂಗ್ ಕ್ಷೇತ್ರಕ್ಕೆ ಹೊಸದಾಗಿ ಬರುವ ಯುವತಿಯರನ್ನು (Newcomers) ಗುರಿಯಾಗಿಸಿಕೊಂಡು ಇಂತಹ ಜಾಲಗಳು ಕೆಲಸ ಮಾಡುತ್ತವೆ. ಹಣ ಮತ್ತು ಕೆಲಸದ ಅಗತ್ಯವಿರುವ ಯುವತಿಯರು "ಕೇವಲ ಡ್ಯಾನ್ಸ್ ತಾನೇ" ಎಂದು ಭಾವಿಸಿ ಇಂತಹ ಅಪಾಯಕಾರಿ ಬಲೆಗೆ ಬೀಳುವ ಸಾಧ್ಯತೆಯಿದೆ ಎಂದು ಲಿಚಾ ಬೋರಾ ಎಚ್ಚರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.