ಬಿಗ್ ಬಾಸ್ 12ರ ವಿನ್ನರ್ ಯಾರು ಎಂಬ ಚರ್ಚೆ ಜೋರಾಗಿದ್ದು, ಬಹುತೇಕ ಮಂದಿ 'ಗಿಲ್ಲಿ ನಟ'ನ ಹೆಸರನ್ನೇ ಸೂಚಿಸುತ್ತಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿಗಳಿಂದ ಹಿಡಿದು 'ಯಜಮಾನ' ಧಾರಾವಾಹಿ ಕಲಾವಿದರಾದ ಝಾನ್ಸಿ ಮತ್ತು ರಾಘು ಕೂಡ ಗಿಲ್ಲಿ ನಟನ ಮನರಂಜನೆಯನ್ನು ಮೆಚ್ಚಿದ್ದಾರೆ.
ಸದ್ಯ Bigg Boss ನಲ್ಲಿ ವಿನ್ನರ್ ಯಾರು ಆಗಬಹುದು ಎನ್ನುವ ಚರ್ಚೆ ಬಹಳ ಜೋರಾಗಿಯೇ ನಡೆದಿದೆ. ಆದರೆ ಮೊದಲಿನಿಂದಲೂ ಕೇಳಿ ಬರ್ತಿರೋ ಹೆಸರು ಒಂದೇ ಅದು ಗಿಲ್ಲಿ ನಟ (Bigg Boss 12 Winner). ಕೆಲವೇ ಜನರು ಬೇರೆ ಬೇರೆ ಸ್ಪರ್ಧಿಗಳ ಹೆಸರು ಹೇಳಿದರೂ ಬಹುತೇಕ ಮಂದಿ ಗಿಲ್ಲಿನಟನ ಹೆಸರೇ ಹೇಳುತ್ತಿದ್ದಾರೆ.
26
ಗಿಲ್ಲಿ ನಟನ ಹೆಸರು
ಇದಾಗಲೇ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಹೊರಕ್ಕೆ ಬಂದಿರುವ ಸ್ಪರ್ಧಿಗಳು ಕೂಡ ಗಿಲ್ಲಿ ನಟನ ಹೆಸರೇ ಹೇಳಿದ್ದಾರೆ. ನಿನ್ನೆಯಷ್ಟೇ ಸತ್ಯ ಸೀರಿಯಲ್ ಖ್ಯಾತಿಯ ಸತ್ಯ ಉರ್ಫ್ ಗೌತಮಿ ಜಾಧವ್ ಕೂಡ ಬಿಗ್ಬಾಸ್ ಒನ್ ಮ್ಯಾನ್ ಷೋ ಆಗಿದೆ, ಅದು ಗಿಲ್ಲಿ ನಟ ಎಂದಿದ್ದರು.
36
ಝಾನ್ಸಿ ಮತ್ತು ರಾಘು
ಇದೀಗ ಯಜಮಾನ ಸೀರಿಯಲ್ನ ಝಾನ್ಸಿ ಮತ್ತು ರಾಘು ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ಮಾನ್ಸಿ ಡಿಜಿಟಲ್ ಜಗತ್ತು ಇನ್ಸ್ಟಾದಲ್ಲಿ ಇದನ್ನು ಶೇರ್ ಮಾಡಲಾಗಿದೆ. ಬಿಗ್ಬಾಸ್ 12ರ ವಿನ್ನರ್ ಯಾರಾಗಬಹುದು ಎನ್ನುವ ಪ್ರಶ್ನೆ ಕೇಳಲಾಗಿದೆ.
ಅದಕ್ಕೆ ಇಬ್ಬರೂ ಕೊಟ್ಟಿರುವ ಉತ್ತರ ಅಗೇನ್ ಗಿಲ್ಲಿ ನಟ. ರಾಘು ಪಾತ್ರಧಾರಿ ಹರ್ಷ ಬಿ.ಎಸ್ ಅವರು ನನಗೆ ಬಿಗ್ಬಾಸ್ನಲ್ಲಿ ಗಿಲ್ಲಿ-ಕಾವ್ಯಾ ಕಾಂಬಿಷೇನ್ ಇಷ್ಟ, ಅಶ್ವಿನಿ ಮೇಡಂ ಅವರ ಜಗಳನೂ ಇಷ್ಟ. ಈ ಸೀಸನ್ ತುಂಬಾ ಚೆನ್ನಾಗಿದೆ, ಎಂಟರ್ಟೈನ್ಮೆಂಟ್ ಇದೆ ಎಂದಿದ್ದಾರೆ.
56
ಹೋಗ್ತಿರೋ ಫ್ಲೋ ನೋಡಿದ್ರೆ...
ವಿನ್ನರ್ ಬಗ್ಗೆ ಪ್ರಶ್ನಿಸಿದಾಗ ಹರ್ಷ ಅವರು, ಈಗ ಹೋಗ್ತಿರೋ ಫ್ಲೋ ನೋಡಿದ್ರೆ ಗಿಲ್ಲಿನೇ ವಿನ್ ಆಗೋದು ಎಂದು ನನಗೆ ಅನ್ನಿಸುತ್ತಿದೆ ಎಂದಿದ್ದಾರೆ. ಕಾಮಿಡಿ, ಎಂಟರ್ಟೇನ್ಮೆಂಟ್ ದೃಷ್ಟಿಯಿಂದ ಅವರೇ ವಿನ್ ಆಗೋದು ಎಂದಿದ್ದಾರೆ.
66
ಅಲ್ಲಿ, ಇಲ್ಲಿ ಎಲ್ಲೆಲ್ಲೂ ಗಿಲ್ಲಿ
ಝಾನ್ಸಿ ಪಾತ್ರಧಾರಿ ಮಧುಶ್ರೀ ಭೈರಪ್ಪ ಕೂಡ ಗಿಲ್ಲಿ ನಟ ನನಗೆ ಇಷ್ಟ. ಅವರ ಎಲ್ಲರನ್ನೂ ರೇಗಿಸೋದು ಇಷ್ಟ. ಬಿಗ್ಬಾಸ್ಗೆ ಪರ್ಫೆಕ್ಟ್ ಸ್ಪರ್ಧಿ. ಕಾಮಿಡಿಯನ್ನು ಪರ್ಫೆಕ್ಟ್ ಆಗಿ ಯೂಸ್ ಮಾಡಿಕೊಳ್ತಿದ್ದಾರೆ. ಅವರೇ ಈ ಬಾರಿಯ ವಿನ್ನರ್ ಎಂದು ನನಗೆ ಎನ್ನಿಸುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಅಲ್ಲಿ, ಇಲ್ಲಿ ಎಲ್ಲೆಲ್ಲೂ ಗಿಲ್ಲಿ ಅನ್ನುವಂತಾಗಿದೆ.