Actress Vaishnavi Koundinya Reply: ವೈಷ್ಣವಿ ಅವರನ್ನು ಬೋಲ್ಡ್ ಲುಕ್‌ನಲ್ಲಿ ನೋಡಿದ್ದೇ ತಡ ಪಡ್ಡೆ ಹೈಕ್ಳು ಕ್ಲೀನ್ ಬೋಲ್ಡ್ ಆಗಿದ್ದರು. ಜೊತೆಗೆ ಕೆಲವರಿಂದ ಸಾಕಷ್ಟು ಕೆಟ್ಟದಾಗಿ ಕಾಮೆಂಟ್‌ಗಳು ಬಂದವು. ಇದೀಗ ಈ ಕುರಿತು ವೈಷ್ಣವಿ, ಜನಪ್ರಿಯ ಮಾಧ್ಯಮವೊಂದರ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ 'ಲವ್ ಯೂ ಮುದ್ದು' ಸಿನಿಮಾದ ಪ್ರೀಮಿಯರ್ ನಲ್ಲಿ ವೈಷ್ಣವಿ ಕೌಂಡಿನ್ಯ ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ, ಹಾಟ್ ಆಗಿ ಕಾಣಿಸಿಕೊಂಡಾಗ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
27
ಟ್ರೋಲಿಗರಿಗೆ ಖಡಕ್ ಎಚ್ಚರಿಕೆ
ವೈಷ್ಣವಿ ಅವರನ್ನು ಬೋಲ್ಡ್ ಲುಕ್‌ನಲ್ಲಿ ನೋಡಿದ್ದೇ ತಡ ಪಡ್ಡೆ ಹೈಕ್ಳು ಕ್ಲೀನ್ ಬೋಲ್ಡ್ ಆಗಿದ್ದರು. ಜೊತೆಗೆ ಕೆಲವರಿಂದ ಸಾಕಷ್ಟು ಕೆಟ್ಟದಾಗಿ ಕಾಮೆಂಟ್‌ಗಳು ಬಂದವು. ಇದೀಗ ಈ ಕುರಿತು ವೈಷ್ಣವಿ ಜನಪ್ರಿಯ ಮಾಧ್ಯಮವೊಂದರ ಸಂದರ್ಶನದಲ್ಲಿ ಉತ್ತರ ನೀಡಿದ್ದು, ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
37
ನನಗೂ ತಕ್ಷಣ ಶಾಕ್ ಆಯ್ತು
"ಪ್ರಿಮಿಯರ್ ಶೋ ಆದ ಮೇಲೆ ಅಮ್ಮನ ಬರ್ತ್‌ಡೇ ಇತ್ತು. ಸೆಲೆಬ್ರೇಟ್ ಮಾಡಿ ಮನೆಗೆ ಬಂದಾಗ ಇನ್‌ಸ್ಟಾಗ್ರಾಂನಲ್ಲಿ ಕೋ ಆರ್ಟಿಸ್ಟ್ ನನಗೆ ಈ ಬಗ್ಗೆ ಹೇಳಿದ್ರು. ನಮ್ಮ ಅಕ್ಕ ಯುಕೆನಲ್ಲಿ ಇದ್ದರು. ಕಾಲ್ ಮಾಡಿ ಮಾತನಾಡಿದಾಗ ನನಗೂ ತಕ್ಷಣ ಶಾಕ್ ಆಯ್ತು. ಎಷ್ಟೇ ಸ್ಟ್ರಾಂಗ್ ಆಗಿರಲಿ ಸಡನ್ ಆಗಿ ಹೀಗಾದಾಗ ನಮಗೆ ಹೀಗಾಗುತ್ತೆ" ಎಂದು ತಿಳಿಸಿದ್ದಾರೆ ವೈಷ್ಣವಿ.
ನನ್ನ ಅಕ್ಕ, "ತಲೆಕೆಡಿಸಿಕೊಳ್ಳಬೇಡ ವೈಶು, ನೀನು ಏನು ಅಂತ ನಮಗೆ ಗೊತ್ತು" ಎಂದಳು. ಫ್ಯಾಮಿಲಿ ನಮ್ಮ ಹಿಂದೆ ಇದ್ದಾಗ, ನಮ್ಮೋರು ನಮ್ಮನ್ನು ನಂಬಿದಾಗ, ಯಾರೇನೇ ಅಂದ್ರು ಮ್ಯಾಟರ್ ಆಗಲ್ಲ. ಒಂದು ದಿನ ಎಫೆಕ್ಟ್ ಆಯ್ತು. ಇಲ್ಲ ಅಂತಲ್ಲ. ನಮ್ಮೋರು ನಮಗೆ ಅಂತಾರೆ ಅನ್ನೋದಿಕ್ಕೆ ಸಾಕ್ಷಿ..ಸೆಟ್‌ಗೆ ಹೋದಾಗಲೇ ಇಬ್ರೂ ಮೂರು ಜನ ಓಹ್ ವಿಡಿಯೋ ವೈರಲ್ ಆಗಿದೆ ಅಂದ್ರು. ಅದೂ ಫಿಮೇಲ್ ಆರ್ಟಿಸ್ಟ್ಸ್. ಮತ್ತೆ ಕೆಲವರು ನೀನು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೆ. ಬೀ ಬೋಲ್ಡ್ ಅಂದ್ರು. ನನ್ನ ಬಗ್ಗೆ ಮಾತನಾಡಿದವರಿಗೆ ಸೆಟ್‌ನಲ್ಲೇ ಉತ್ತರ ಕೊಟ್ಟಿದ್ದೇನೆ ಎಂದಿದ್ದಾರೆ ವೈಷ್ಣವಿ ಕೌಂಡಿನ್ಯ.
57
ಇಂಡಸ್ಟ್ರಿಗೆ ಬಂದು ಎಂಟು ವರ್ಷ ಅಯ್ತು
ಆಫರ್ಸ್ ಇಲ್ಲದಿದ್ದಕ್ಕೆ ಈ ರೀತಿ ಔಟ್ ಫಿಟ್ ಹಾಕ್ತರಾ ಎಂಬ ಪ್ರಶ್ನೆಗೂ ಉತ್ತರಿಸಿರುವ ವೈಷ್ಣವಿ, "ಹಾಗಿದ್ದರೆ ನನಗ್ಯಾಕೆ ಬೇರೆ ಭಾಷೆಗಳಲ್ಲಿ ಆಫರ್ ಸಿಗುತ್ತಿದ್ದವು. ಇಂಡಸ್ಟ್ರಿಗೆ ಬಂದು ಎಂಟು ವರ್ಷ ಅಯ್ತು" ಎಂದು ತಿಳಿಸಿದ್ದಾರೆ.
67
ಕ್ಲಾಸ್ ತೆಗೆದುಕೊಂಡ ವೈಷ್ಣವಿ
ಇನ್ನು ಕಾಮೆಂಟ್ ಮಾಡಿದವರ ಬಗ್ಗೆ ಮಾತನಾಡಿದ ವೈಷ್ಣವಿ ಕೌಂಡಿನ್ಯ, ಏನಾದ್ರೂ ಕಾಮೆಂಟ್ ಮಾಡ್ಕೊಳ್ಳಿ. ಮಾಡಿದುಣ್ಣೋ ಮಾರಾಯ ಅಷ್ಟೇ. ನಾನೇನು ಅಂತ ನನಗೆ ಗೊತ್ತು. ಎಲ್ಲರ ಮೇಲೂ ಲೀಗಲಿ ಹೋಗೋಕೆ ಆಗಲ್ಲ. ಕೆಲವೊಬ್ಬರಿಗೆ ಉತ್ತರ ಕೊಡಬೇಕು ಅಂದುಕೊಂಡಿದ್ದೇನೆ. ಈ ತರಹ ಮಾತನಾಡಿದಾಗ ಇಡೀ ಸೊಸೈಟಿಗೆ ಸೀರಿಯಸ್ ಆಗಿ ಇನ್‌ಫ್ಲುಯೆನ್ಸ್ ಆಗುತ್ತೆ. ಇಂಪಾಕ್ಟ್ ಆಗುತ್ತೆ. ಈ ತರಹ ಬಟ್ಟೆ ಹಾಕಿಕೊಳ್ಳುವುದಕ್ಕೆ ಅ*ತ್ಯಾ*ಚಾರ ಜಾಸ್ತಿಯಾಗ್ತಿರೋದು ಅಂದ್ರೆ ನೀನು ಅದಕ್ಕೆ ರೆಡಿ ಇದಿ ಅಂತ ಆಯ್ತು. ನೀನು ಕ್ರೂರ ಮೃಗ ಆಗಿದ್ದಿ ಅಂತಾಯ್ತು" ಅಂದು ವೈಷ್ಣವಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
77
ನೀವು ಸ್ಟ್ರಾಂಗ್ ಆಗಿರಿ
ಮುಂದಿನ ದಿನಗಳಲ್ಲಿ ನನ್ನ ಪ್ಲಾನ್ ಏನು ಎಂಬುದನ್ನ ತಿಳಿಸುತ್ತೇನೆ. ತುಂಬಾ ಜನ ನನಗೆ ಮೆಸೇಜ್ ಮಾಡಿದ್ದಾರೆ. ಸ್ಟ್ಯಾಂಡ್ ತಗೊಳಿ. ಈ ರೀತಿ ಮುಂದೆ ಯಾರೂ ಮಾತನಾಡಬಾರದು ಎಂದು ಡೇ ಒನ್‌ನಿಂದ ಸಪೋರ್ಟ್ ಮಾಡ್ತಿದ್ದಾರೆ. ಅವರಿಗೆಲ್ಲಾ ತುಂಬಾ ಥ್ಯಾಂಕ್ಸ್ ಹೇಳಬೇಕು. ನನ್ನ ಸ್ಟ್ರಾಂಗ್ ಮಾಡುವ ಹಾಗೆ ನೀವು ಸ್ಟ್ರಾಂಗ್ ಆಗಿರಿ ಎಂದು ಹಾಗೆಯೇ ಕಿವಿ ಮಾತೂ ಹೇಳಿದ್ದಾರೆ ವೈಷ್ಣವಿ ಕೌಂಡಿನ್ಯ.