ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಗಿಲ್ಲಿ ನಟ ಯಾವಾಗಲೂ ಟ್ರ್ಯಾಕ್ ಪ್ಯಾಂಟ್ ಹಾಗೂ ಬನಿಯನ್ ಹಾಕಿಕೊಂಡು ಇರುತ್ತಾರೆ. ಅಶ್ವಿನಿಯಿಂದ ಹಿಡಿದು, ಧ್ರುವಂತ್‌ವರೆಗೆ ಅನೇಕರು ಅವರಿಗೆ ಬಟ್ಟೆ ಕೊಟ್ಟಿದ್ದರು. ಎರಡು ವಾರಗಳಿಂದ ಅವರಿಗೆ ಬಕೆಟ್‌ಗಟ್ಟಲೇ ಬಟ್ಟೆ ಬರುತ್ತಿದೆ, ಆದರೆ ಅವರು ಅದನ್ನು ಹಾಕಿಕೊಳ್ತಿಲ್ಲ.
ಮ್ಯಾಕ್ಸ್ ಮಂಜು ಅವರು ಗಿಲ್ಲಿ ನಟನ ಬಟ್ಟೆಗಳನ್ನು ನೋಡಿದ್ದಾರೆ. ಇಷ್ಟೆಲ್ಲ ಚೆನ್ನಾಗಿ ಬಟ್ಟೆ ಇದ್ದರೂ ಕೂಡ ಹಾಕಿಕೊಳ್ತಿಲ್ಲ ಎಂದು ಮಂಜು ಅವರು ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಮಂಜು ಅವರ ಬಾಸ್ಕೆಟ್‌ನಲ್ಲಿರುವ ಬಟ್ಟೆ, ಶೂಗಳನ್ನು ಹೊರಗಡೆ ತೆಗೆದು ತೋರಿಸಿದ್ದಾರೆ.
25
50000 ರೂಪಾಯಿ ಬಟ್ಟೆ ಕಳಿಸಿದ್ದಾರೆ
ಅಮಾಯಕ, ಬಡವ ಎಂದು ಮ್ಯಾಕ್ಸ್ ಮಂಜು, ಧ್ರುವಂತ್ ಹೇಳಿದ್ದಾರೆ. ಇಲ್ಲಿ ನೋಡಿ ಎಂದು ಮಂಜು ಅವರು ಗಿಲ್ಲಿ ನಟನ ಬಟ್ಟೆಗಳನ್ನು ತೆಗೆದು ಎಲ್ಲರಿಗೆ ತೋರಿಸಿದ್ದಾರೆ. 30 ರೂಪಾಯಿ ಚಡ್ಡಿ ಹಾಕಿಕೊಂಡು ಓಡಾಡ್ತಿದ್ದೀಯಾ, ಬನಿಯನ್ ಹಾಕಿಕೊಂಡು ತಿರುಗಾಡುತ್ತಿದ್ದೀಯಾ ಎಂದು ಮಂಜು ಕೂಗಾಡಿದ್ದಾರೆ. ರಘು ಅವರು 50000 ರೂಪಾಯಿ ಬಟ್ಟೆ ಕಳಿಸಿದ್ದಾರೆ ಎಂದಿದ್ದಾರೆ. ಬಟ್ಟೆ ಹಾಕಿದರೆ ದೃಷ್ಟಿ ಆಗುತ್ತದೆ ಎಂದು ಮಂಜು ಹೇಳಿದ್ದಾರೆ.
35
ಡ್ರಾಯರ್ ಒಳಗಡೆ ಹಾಕಿದ ರಘು
ಪ್ರೀತಿಯಿಂದ ಕಳಿಸಿದ್ದಾರೆ, ಆದರೆ ನೀನು ಹಾಕಿಕೊಳ್ತಿಲ್ಲ. ಚಿಕ್ಕಪೇಟೆಯಲ್ಲಿ ಸೆಕೆಂಡ್ಸ್‌ಗೆ ಮಾರುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ರಘು, ಮಂಜು ಅವರು ಬಟ್ಟೆಯನ್ನು ತಗೊಂಡು ಡ್ರಾಯರ್ ಒಳಗಡೆ ಹಾಕಿದ್ದಾರೆ.
ನನ್ನ ಹತ್ರ ಬಟ್ಟೆ ಇಲ್ಲ, ಅದನ್ನೇ ರಿಪೀಟ್ ಹಾಕುತ್ತಿದ್ದೇನೆ, ನನಗೆ ಬಟ್ಟೆ ಕೊಟ್ಟರೆ ದಿನಕ್ಕೊಂದು ಹಾಕುವೆ ಎಂದು ಮಾಳು ನಿಪನಾಳ ಅವರು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೆ ರಿಪೀಟ್ ಹಾಕೋದಿಲ್ಲ. ಡಿಸೈನರ್ಸ್‌ಗಳು ಅವರಿಗೆ ಪ್ರತಿ ವಾರ ಬಟ್ಟೆ ಕಳಿಸುತ್ತಾರೆ.
55
ರಘುಗೆ ಬೇಸರ ಆಗಿದ್ಯಾಕೆ?
ಎರಡು ವಾರಗಳಿಂದ ಬಟ್ಟೆಗಳನ್ನು ಕಳಿಸುತ್ತಿದ್ದಾರೆ. ಬಟ್ಟೆ ಕಳಿಸಲಿಲ್ಲ ಎಂದಾಗ ನಾವೆಲ್ಲ ಕೊಟ್ಟೆವು, ಈಗ ಬಟ್ಟೆ ಕೊಟ್ಟಿದೀವಿ, ಕ್ಯಾಮರಾ ಮುಂದೆ ಚೆನ್ನಾಗಿ ಕಾಣಿಸಿಕೋ ಎಂದು ಹೇಳಿದೆವು, ಆದರೆ ಕೇಳುತ್ತಿಲ್ಲ. ಇವತ್ತು ಹೇಳಿದೆ, ಇನ್ಮುಂದೆ ಬಟ್ಟೆ ಆದರೂ ಹಾಕಿಕೊಳ್ಳಲಿ, ಅಥವಾ ಬಿಡಲಿ ಎಂದು ರಘು ಅವರು ಹೇಳಿದ್ದಾರೆ.