ಜಾಹ್ನವಿ ಜಾಲದಲ್ಲಿ ಜಯಂತ್ ಬಂಧಿ.., ಗಂಡನ ಮೇಲಿನ ಕೋಪಕ್ಕೆ ಒಂದು ಪ್ರಾಣನೇ ಹೋಗುತ್ತಾ?
ಲಕ್ಷ್ಮೀ ನಿವಾಸ ಧಾರಾವಾಹಿಯ ಸದ್ಯ ಎಪಿಸೋಡ್ ಗಳು ಶ್ರೀಲಂಕಾದಲ್ಲಿ ನಡೆಯುತ್ತಿದ್ದು, ಸದ್ಯ ಕೌತುಕ ಎಪಿಸೋಡ್ ಗಳು ನಡೆಯುತ್ತಿವೆ. ಗಂಡನ ಮೇಲಿನ ಸಿಟ್ಟಿನಿಂದ ಪ್ರಾಣನೇ ತೆಗೆದು ಬಿಳುತ್ತಾಳ ಜಾಹ್ನವಿ.
ಲಕ್ಷ್ಮೀ ನಿವಾಸ ಧಾರಾವಾಹಿಯ ಸದ್ಯ ಎಪಿಸೋಡ್ ಗಳು ಶ್ರೀಲಂಕಾದಲ್ಲಿ ನಡೆಯುತ್ತಿದ್ದು, ಸದ್ಯ ಕೌತುಕ ಎಪಿಸೋಡ್ ಗಳು ನಡೆಯುತ್ತಿವೆ. ಗಂಡನ ಮೇಲಿನ ಸಿಟ್ಟಿನಿಂದ ಪ್ರಾಣನೇ ತೆಗೆದು ಬಿಳುತ್ತಾಳ ಜಾಹ್ನವಿ.
ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಸದ್ಯ ತುಂಬಾನೆ ಇಂಟ್ರೆಸ್ಟಿಂಗ್ ಎಪಿಸೋಡುಗಳು ನಡೆಯುತ್ತಿವೆ. ಒಂದೊಂದಲ್ಲ ಎರಡೆರಡು ಟ್ವಿಸ್ಟ್ ಗಳು ಇವೆ. ಶ್ರೀಲಂಕಾದಲ್ಲಿ ಲಕ್ಷ್ಮೀ ನಿವಾಸದ ಎರಡೆರಡು ಜೋಡಿಗಳು ಹಾರಾಡುತ್ತಿದ್ದು, ಇಬ್ಬರ ಜೀವನದಲ್ಲಿ ಒಂದೊಂದು ದೊಡ್ಡ ಟ್ವಿಸ್ಟ್ ಸಿಗಲಿದೆ.
ಅಂದ ಹಾಗೇ ಸೀರಿಯಲ್ ನಲ್ಲಿ ಆಗ್ತಿರೋದು ಏನು? ಗಂಡ ಜಯಂತ್ ನ ಸೈಕೋ ಬುದ್ದಿಯಿಂದಾಗಿ ಮಗುವನ್ನು ಕಳೆದುಕೊಂಡ ಜಾಹ್ನವಿ, ಗಂಡನ ಮೇಲೆ ಇನ್ನೂ ಕೋಪದಲ್ಲೆ ಇದ್ದಾಳೆ. ಆದರೆ ಜಯಂತ್ ಹೇಗಾದರು ಮಾಡಿ, ಚಿನ್ನುಮರಿಯ ಮನಸ್ಸನ್ನು ಗೆಲ್ಲಬೇಕು ಎಂದು ಆಕೆಗೆ ಇಷ್ಟವಿರದೇ ಇದ್ದರೂ ಸಹ ಜಾಹ್ನವಿಯನ್ನು ಶ್ರೀಲಂಕಾಕ್ಕೆ (Srilanka) ಕರೆದುಕೊಂಡು ಬಂದಿದ್ದಾನೆ.
ಶ್ರೀಲಂಕಾದಲ್ಲಿ ಒಂದೆರಡು ದಿನ ಮುನಿಸಿಕೊಂಡೆ ಇದ್ದ ಜಾಹ್ನವಿ. ಇವರಿಗೆ ಹೀಗೆ ಮಾಡಿದ್ರೆ ಬುದ್ದಿ ಕಲಿಸೋಕೆ ಆಗಲ್ಲ, ನಾನು ಏನಾದರು ಮಾಡಿ ಇವರಿಗೆ ಬುದ್ದಿ ಕಲಿಸಬೇಕು ಎಂದು, ಮತ್ತೆ ಗಂಡನ ಬಳಿ ತಾನು ಇಷ್ಟು ದಿನ ಮಾಡಿದ್ದಕ್ಕಾಗಿ ಸಾರಿ ಕೇಳಿ, ಮತ್ತೆ ಒಂದಾಗಿರುವಂತೆ ನಟಿಸುತ್ತಾಳೆ ಜಾನು.
ಶ್ರೀಲಂಕಾದಲ್ಲಿ ಜಾನು ತನ್ನ ಗಂಡನ ಗೆಳೆಯ ಸಚಿನ್ ನನ್ನು ಭೇಟಿಯಾಗಿದ್ದು, ಆತ ಅಣ್ಣ ವೆಂಕಿ ಹುಡುಕುತ್ತಿರುವ ಗೆಳೆಯ ಜಯಂತ್ ಅನ್ನೋದನ್ನು ಹೇಳುತ್ತಾನೆ. ಇದರಿಂದ ಜಾಹ್ನವಿಗೆ ಜಯಂತ್ (Jahnavi and Jayanth) ಮೇಲೆ ಕೋಪ ಇನ್ನೂ ಜಾಸ್ತಿಯಾಗುತ್ತೆ. ಇದಕ್ಕೇಲ್ಲಾ ಕೊನೆ ಹಾಡಲೇಬೇಕು ಎಂದು ನಿರ್ಧರಿಸುತ್ತಾಳೆ ಜಾಹ್ನವಿ.
ಸಚಿನ್ ನ ಹೇಳಿಕೆಯಂತೆ ಪ್ಲ್ಯಾನ್ ಮಾಡಿ ಗಂಡನನ್ನು ಬೇರೆ ಕಡೆಗೆ ಕರೆದುಕೊಂಡು ಹೋಗುವ ಜಾಹ್ನವಿ, ಸಚಿನ್ ಹೇಳಿದಂತೆ, ತನಗೆ ಹಿಂಸೆಕೊಟ್ಟವರನ್ನು ಭೂಮಿ ಮೇಲೆ ಇಲ್ಲದಂತೆ ಮಾಡಲು ನಿರ್ಧರಿಸಿ, ಕೈಯಲ್ಲಿ ಚಾಕು ಹಿಡಿದು ಹೊರಟು ಬಿಟ್ಟಿದ್ದಾಳೆ ಜಾಹ್ನವಿ.
ಸಮುದ್ರದ ಮಧ್ಯೆ ಬೋಟ್ ನಲ್ಲಿ ಕರೆದುಕೊಂಡು ಹೋಗಿ, ಚೇರ್ ಒಂದಕ್ಕೆ ಜಯಂತ್ ಅವರನ್ನು ಕಟ್ಟು ಹಾಕಿ, ಹೀಗೆ ತಾನೆ ನೀವು ನನ್ನನ್ನು ನಿಮ್ಮ ಪ್ರೀತಿಯಲ್ಲಿ ಕಟ್ಟಿ ಹಾಕಿದ್ದು, ಪ್ರೀತಿ ಅಂದ್ರೆ ಹೂವು ಅಂದ್ಕೊಂಡಿದ್ದೆ, ಆದರೆ ಅದರಲ್ಲಿ ಅಷ್ಟು ಮುಳ್ಳು ಇರುತ್ತೆ ಅಂತ ಗೊತ್ತೇ ಇರಲಿಲ್ಲ ಎನ್ನುತ್ತಾ ಜಯಂತ್ ಬಳಿ ಚಾಕು ಹಿಡಿದು ಬರುತ್ತಾಳೆ. ಇದನ್ನು ನೋಡಿ ಜಯಂತ್ ಕೂಡ ಹೆದರುತ್ತಾನೆ.
ಆದರೆ ಜಾಹ್ನವಿಗೆ ಜಯಂತ್ ನನ್ನು ಕೊಲ್ಲೋದಕ್ಕೆ ಸಾಧ್ಯ ಆಗೋದಿಲ್ಲ, ಆಕೆ ತಾನಾಗಿ ಶಿಪ್ ನ ತುದಿಗೆ ಹೋಗಿ ಅಲ್ಲಿಂದ ನೀರಿಗೆ ಹಾರುತ್ತಾ, ಅಮ್ಮ, ಅಪ್ಪ ದಯವಿಟ್ಟು ನನ್ನನ್ನು ಕ್ಷಮಿಸಿ, ಇವರ ಪ್ರೀತೀನಾ ನನಗೆ ಸಾಹಿಸಿಕೊಳ್ಳೋದಕ್ಕೆ ಸಾಧ್ಯ ಆಗುತ್ತಿಲ್ಲ ಎಂದಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.