ಮದುವೆ ಬಳಿಕ ಮೊದಲ ಯುಗಾದಿ ಖುಷಿಯಲ್ಲಿ ʼಸೀತಾರಾಮʼ ಧಾರಾವಾಹಿ ನಟಿ Meghana Shankarappa! ಫೋಟೋಗಳಿವು!
'ಸೀತಾರಾಮ', ʼನಮ್ಮನೆ ಯುವರಾಣಿʼ ಧಾರಾವಾಹಿಯಲ್ಲಿ ನಟಿಸಿದ್ದ ಮೇಘನಾ ಶಂಕರಪ್ಪ ಅವರು ಮೊದಲ ಯುಗಾದಿ ಸಂಭ್ರಮದಲ್ಲಿದ್ದಾರೆ.
'ಸೀತಾರಾಮ', ʼನಮ್ಮನೆ ಯುವರಾಣಿʼ ಧಾರಾವಾಹಿಯಲ್ಲಿ ನಟಿಸಿದ್ದ ಮೇಘನಾ ಶಂಕರಪ್ಪ ಅವರು ಮೊದಲ ಯುಗಾದಿ ಸಂಭ್ರಮದಲ್ಲಿದ್ದಾರೆ.
‘ಸೀತಾರಾಮ’ ಧಾರಾವಾಹಿ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪಗೆ ಈ ಬಾರಿ ವಿಶೇಷ ಎನ್ನಬಹುದು. ಮದುವೆಯಾದ ಬಳಿಕ ಅವರು ಮೊದಲ ಯುಗಾದಿ ಸಂಭ್ರಮದಲ್ಲಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.
ಕನ್ನಡ ನಟಿ ಮೇಘನಾ ಶಂಕರಪ್ಪ ಅವರು ಫೆಬ್ರವರಿ 8, 9ರಂದು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಅದ್ದೂರಿಯಾಗಿ ಈ ಮದುವೆ ನಡೆದಿತ್ತು.
ಕನ್ನಡ ನಟಿ ಮೇಘನಾ ಶಂಕರಪ್ಪ ಅವರು ಜಯಂತ್ ಜೊತೆಗೆ ವಿಧ ವಿಧವಾದ ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.
ಹಳದಿ, ಸಂಗೀತ ಶಾಸ್ತ್ರ ಕೂಡ ಗ್ರ್ಯಾಂಡ್ ಆಗಿ ನೆರವೇರಿತ್ತು. ಸಂಗೀತದಲ್ಲಿ ಪೂಜಾ ಲೋಕೇಶ್, ವೈಷ್ಣವಿ ಗೌಡ, ಸಿಂಧು ರಾವ್, ಜ್ಯೋತಿ ಕಿರಣ್ ಮುಂತಾದವರು ಭಾಗಿಯಾಗಿದ್ದರು.
ಮೇಘನಾ ಶಂಕರಪ್ಪ ಅವರ ಪತಿ ಜಯಂತ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮಧ್ಯೆ ಒಂದು ವರ್ಷದ ವಯಸ್ಸಿನ ಗ್ಯಾಪ್ ಇದೆ. ಮೇಘನಾಗಿಂತ ಜಯಂತ್ ಒಂದು ವರ್ಷ ದೊಡ್ಡವರಂತೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ.
ʼಸೀತಾರಾಮʼ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರು ಮದುವೆಗೆ ಮುನ್ನ ಸಖತ್ ಟ್ರಿಪ್ ಮಾಡಿದ್ದರು. ಆ ನಂತರ ನಟಿ ಸಿಂಧು ರಾವ್, ವೈಷ್ಣವಿ ಗೌಡ, ಪೂಜಾ ಲೋಕೇಶ್ ಅವರು ಮೇಘನಾ ಶಂಕರಪ್ಪಗೆ ಬ್ಯಾಚುಲರ್ ಪಾರ್ಟಿ ಕೂಡ ಕೊಟ್ಟಿದ್ದರು.