ಲಂಗ ದಾವಣಿಯಲ್ಲಿ ಅಮೃತಧಾರೆಯ ಸುಂದರಿ ಮೇಘಾ ಶೆಣೈ
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರದಲ್ಲಿ ಮಿಂಚಿತ್ತಿರುವ ನಟಿ ಮೇಘಾ ಶೆಣೈ, ಲಂಗ ದಾವಣಿಯುಟ್ಟು, ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರದಲ್ಲಿ ಮಿಂಚಿತ್ತಿರುವ ನಟಿ ಮೇಘಾ ಶೆಣೈ, ಲಂಗ ದಾವಣಿಯುಟ್ಟು, ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ (Amruthadhare serial)ಪ್ರತಿಯೊಂದು ಪಾತ್ರಗಳು, ಆ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ ಅಂದ್ರೆ ಸುಮ್ನೆ ಅಲ್ಲ. ಸುಧಾ ಪಾತ್ರಧಾರಿಯೂ ಅಷ್ಟೇ, ಕಾಟನ್ ಸೀರೆಯಂತಹ ಸಿಂಪಲ್ ಸೀರೆಯುಟ್ಟು ನಟಿ ತುಂಬಾನೆ ಸಿಂಪಲ್ ಆಗಿ ಕಾಣಿಸ್ತಾರೆ.
ಇದೀಗ ಯುಗಾದಿ ಹಬ್ಬದ ಸಂಭ್ರಮದಂದು ಮೇಘಾ ಶೆಣೈ (Megha Shenoy) ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದು, ಲಂಗ ದಾವಣಿ ಧರಿಸಿ, ಬೇವು ಬೆಲ್ಲ ಹಿಡಿದು, ಮೇಘಾ ವಿಭಿನ್ನವಾಗಿ ಜೊತೆಗೆ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ಕಪ್ಪು ಬಾರ್ಡರ್ ಹೊಂದಿರುವ ತಿಳಿ ಗಂಧದ ಬಣ್ಣದ ಲಂಗ ಮತ್ತು ಬ್ಲೌಸ್ ಧರಿಸಿರುವ ಮೇಘಾ, ಅದಕ್ಕೆ ಮ್ಯಾಚ್ ಆಗುವಂತಹ ಕಪ್ಪು ಬಣ್ಣದ ದಾವಣಿ ಧರಿಸಿದ್ದಾರೆ. ಸೊಂಟಕ್ಕೆ ಪಟ್ಟಿ, ಕುತ್ತಿಗೆಯಲ್ಲಿ ನೆಕ್ಲೆಸ್, ಮುಂದಾಲೆ, ಮುಡಿ ತುಂಬಾ ಮಲ್ಲಿಗೆ ಹೂವು ಮುಡಿದಿದ್ದಾರೆ.
ಈ ಲುಕ್ ನಲ್ಲಿ ಮೇಘಾ ಶೆಣೈ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ಈ ಫೋಟೊಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸೂಚಿಸಿ, ಹಾರ್ಟ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಟೈಮ್ ಲೆಸ್ ಸೊಬಗಿನೊಂದಿಗೆ ಹೊಸ ಆರಂಭಗಳನ್ನು ಆಚರಿಸಿ ಎನ್ನುತ್ತಾ ತಮ್ಮ ಫೋಟೊ ಜೊತೆಗೆ ಯುಗಾದಿ ಹಬ್ಬಕ್ಕೆ ಶುಭ ಕೋರಿದ್ದಾರೆ ಮೇಘಾ.
ಕರಿಯರ್ ಬಗ್ಗೆ ಹೇಳೋದಾದ್ರೆ, ಮೇಘಾ ಶೆಣೈ ಅವರದು ಇದು ಮೊದಲ ಸೀರಿಯಲ್ ಅಲ್ಲ. ಸಿರಿ ಕನ್ನಡ ಚಾನೆಲ್ ನ ಬ್ರಾಹ್ಮಿನ್ಸ್ ಕೆಫೆ (Brahmins Cafe) ಸೀರಿಯಲ್‌ಗೆ ಈಕೆ ನಾಯಕಿಯಾಗಿದ್ದರು. ಇದಕ್ಕೂ ಮೊದಲು ಉದಯ ಟಿವಿಯ 'ಸುಂದರಿ' ಸೀರಿಯಲ್‌ನ ವಿಲನ್ ಆಗಿದ್ದರು.'ಜನುಮದ ಜೋಡಿ' 'ಮಹಾದೇವಿ' ಸೀರಿಯಲ್‌ನಲ್ಲಿ ಕೂಡ ನಟಿಸಿದ್ದರು.
ಅಷ್ಟೇ ಅಲ್ಲ ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಸೀರಿಯಲ್‌ನಲ್ಲಿ ನಾಯಕ ಕಾರ್ತಿಕ್ ಪ್ರೇಯಸಿ ರಮ್ಯಾ ಆಗಿ ಹಾಗೂ ಸ್ಟಾರ್ ಸುವರ್ಣದ 'ಜೀವ ಹೂವಾಗಿದೆ' ಸೀರಿಯಲ್‌ನಲ್ಲೂ ಮೇಘಾ ಶೆಣೈ ನಟಿಸಿದ್ದರು. ಸದ್ಯ ಅಮೃತಧಾರೆಯ ಗೌತಮ್ ದಿವಾನ್ ತಂಗಿಯಾಗಿ, ಮನೆಯ ಮುದ್ದಿನ ಮಗಳಾಗಿ ನಟಿಸುತ್ತಿದ್ದಾರೆ.