Bigg Boss Kannada 13: ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಡ್ತಿದ್ದ ಹಾಗೆ ರೂಲ್ಸ್ ಬ್ರೇಕ್ ಮಾಡಿದ ಪ್ರಶಾಂತ್!

Published : Sep 29, 2026, 12:20 PM IST

Bigg Boss wildcard entry: ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಕೆಲವೇ ಗಂಟೆಗಳಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಪ್ರಶಾಂತ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಮೊನ್ನೆಯಷ್ಟೇ ಸುದೀಪ್ ನೀಡಿದ್ದ ಖಡಕ್ ವಾರ್ನಿಂಗ್ ಅನ್ನೂ ಲೆಕ್ಕಿಸದೆ ಪ್ರಶಾಂತ್ ಬ್ರೇಕ್ ಮಾಡಿದ ಆ ನಿಯಮ ಯಾವುದು? ಇಲ್ಲಿದೆ ಮಾಹಿತಿ.

PREV
15
ಮೊದಲ ದಿನವೇ ಅದೇ ತಪ್ಪನ್ನು ಪುನರಾವರ್ತಿಸಿದ ಪ್ರಶಾಂತ್

ಮೊದಲ ದಿನವೇ ಅದೇ ತಪ್ಪನ್ನು ಪುನರಾವರ್ತಿಸಿದ ಪ್ರಶಾಂತ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್, ಗಲಾಟೆಗಳು ನಡೆಯುತ್ತಲೇ ಇವೆ. ಇದುವರೆಗಿನ ಎಲ್ಲಾ ಸೀಸನ್‌ಗಳಿಗೆ ಹೋಲಿಸಿದರೆ, ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಅತಿ ಹೆಚ್ಚು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಕೇಳಿಸದಂತೆ ‘ಪಿಸುಗುಟ್ಟಬಾರದು’ (Whisper ಮಾಡಬಾರದು) ಎಂಬ ನಿಯಮವಿದ್ದರೂ, ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಪ್ರಶಾಂತ್ ಮನೆ ಪ್ರವೇಶಿಸಿದ ಮೊದಲ ದಿನವೇ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ.

25
ಮೊನ್ನೆಯಷ್ಟೇ ತಾಂಡವ್-ಗಗನ್‌ಗೆ ಕಿವಿಹಿಂಡಿದ್ದ ಸುದೀಪ್

ಮೊನ್ನೆಯಷ್ಟೇ ತಾಂಡವ್-ಗಗನ್‌ಗೆ ಕಿವಿಹಿಂಡಿದ್ದ ಸುದೀಪ್
ಇತ್ತೀಚೆಗಷ್ಟೇ ಸ್ಪರ್ಧಿಗಳಾದ ತಾಂಡವ್ ರಾಮ್ ಹಾಗೂ ಗಗನ್ ಪಿಸುಗುಟ್ಟಿದ್ದಲ್ಲದೆ, ಎಲಿಮಿನೇಷನ್ ಪ್ರಕ್ರಿಯೆ ಕುರಿತು ರಹಸ್ಯವಾಗಿ ಚರ್ಚಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನಿರೂಪಕ ಕಿಚ್ಚ ಸುದೀಪ್, ‘ವಾರದ ಕಥೆ ಕಿಚ್ಚನ ಜೊತೆ’ ಪಂಚಾಯಿತಿಯಲ್ಲಿ ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡಿದ್ದರು.

35
ಈಗ ವೈಲ್ಡ್ ಕಾರ್ಡ್ ಸ್ಪರ್ಧಿ ಪ್ರಶಾಂತ್ ಸರದಿ

ಈಗ ವೈಲ್ಡ್ ಕಾರ್ಡ್ ಸ್ಪರ್ಧಿ ಪ್ರಶಾಂತ್ ಸರದಿ
ಆದರೆ ಸುದೀಪ್ ವಾರ್ನಿಂಗ್‌ ಕೊಟ್ಟ ಮೇಲೆಯೂ ಪ್ರಶಾಂತ್ ಸಹ ಪಾಠ ಕಲಿತಂತಿಲ್ಲ. ನಿನ್ನೆ ರಾತ್ರಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪ್ರಶಾಂತ್ ಅವರಿಗೆ, ಆರಂಭದಲ್ಲೇ ಮನೆಮಂದಿಯನ್ನು ರೋಸ್ಟ್ ಮಾಡುವ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್ ಅನ್ನು ಯಶಸ್ವಿಯಾಗಿ ಮುಗಿಸಿದ ನಂತರ ಮನೆಯೊಳಗೆ ತೆರಳಿದ ಪ್ರಶಾಂತ್, ಕೆಲ ಸ್ಪರ್ಧಿಗಳ ಜೊತೆ ಆಪ್ತವಾಗಿ ಮಾತನಾಡತೊಡಗಿದರು.

45
ವೀಕ್ಷಕರಿಗೂ ಅರ್ಥವಾಗಲಿಲ್ಲ

ವೀಕ್ಷಕರಿಗೂ ಅರ್ಥವಾಗಲಿಲ್ಲ
ಮುಖ್ಯವಾಗಿ ಧನುಷ್ ಹಾಗೂ ‘ಜಗ್ಗ ಮಮ್ಮಿ’ ಖ್ಯಾತಿಯ ಜಗದೀಶ್ ಅವರ ಬಳಿ ಕೂತು ತೀರಾ ಕ್ಲೋಸ್ ಆಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಶಾಂತ್ ಮೈಕ್‌ನಲ್ಲಿ ಸ್ಪಷ್ಟವಾಗಿ ಧ್ವನಿ ಕೇಳಿಸದಂತೆ, ಕಿವಿಯ ಬಳಿ ಅತ್ಯಂತ ರಹಸ್ಯವಾಗಿ ಗುಟ್ಟುಗುಟ್ಟಾಗಿ ಪಿಸುಮಾತಿನಲ್ಲಿ ಮಾತನಾಡಿದ್ದಾರೆ. ಅವರು ಏನು ಮಾತನಾಡಿದರು ಎಂಬುದು ವೀಕ್ಷಕರಿಗೂ ಅರ್ಥವಾಗಲಿಲ್ಲ.

55
ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್ ಪಕ್ಕಾ?

ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್ ಪಕ್ಕಾ?
ಹೊರಗಿನಿಂದ ಆಟವನ್ನು ನೋಡಿಯೇ ಮನೆಯೊಳಗೆ ಕಾಲಿಟ್ಟಿದ್ದರೂ, ಬಂದ ಮೊದಲ ದಿನವೇ ಪ್ರಶಾಂತ್ ಬಿಗ್ ಬಾಸ್‌ನ ಪ್ರಮುಖ ನಿಯಮವನ್ನು ಮುರಿದಿರುವುದು ಸ್ಪಷ್ಟವಾಗಿದೆ. ಈಗಾಗಲೇ ನಿಯಮ ಉಲ್ಲಂಘಿಸುವವರ ವಿರುದ್ಧ ಕಿಚ್ಚ ಸುದೀಪ್ ಕಠಿಣ ನಿಲುವು ತಳೆದಿರುವುದರಿಂದ, ಮುಂಬರುವ ವಾರಾಂತ್ಯದ ಪಂಚಾಯಿತಿಯಲ್ಲಿ ಪ್ರಶಾಂತ್ ಅವರಿಗೂ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories