ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಜಾಗದಲ್ಲಿರುವ ದೀಪಿಕಾಳನ್ನು ಮಂದಾಕಿನಿ ಗುರುತಿಸದೆ ಅಪ್ಪಿಕೊಂಡಿದ್ದಾಳೆ. ಇತ್ತ ಕರ್ಣ ಸೀರಿಯಲ್‌ನಲ್ಲಿ ಸೀತಾ ತನ್ನ ಅಮ್ಮನನ್ನು ಮಾರುಕಟ್ಟೆಯಲ್ಲಿ ಕಂಡರೂ ಹಳೆಯ ನೆನಪುಗಳಿಂದ ಹತ್ತಿರ ಹೋಗಲಾಗದೆ ಕಣ್ಣೀರು ಹಾಕಿದ್ದಾಳೆ. ಎರಡೂ ಕಡೆ ಅಮ್ಮ-ಮಗಳ ಭೇಟಿ ಅಪೂರ್ಣವಾಗಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಭೂಮಿಕಾ ಜಾಗದಲ್ಲಿ ದೀಪಿಕಾ ಹೋಗಿದ್ದಾಳೆ. ಆದರೆ ಇದುವರೆಗೂ ಅವಳು ಇವಳಲ್ಲ ಎನ್ನೋದು ಯಾರಿಗೂ ತಿಳಿದಿಲ್ಲ. ಹಾಗೂ ಹೀಗೂ ಹೇಗೋ ನಿಭಾಯಿಸುತ್ತಿದ್ದಾಳೆ ದೀಪಿಕಾ.
26
ಅಮ್ಮನ ಮನೆಗೆ ಮಂದಾಕಿನಿ
ಇದೀಗ ದೀಪಿಕಾ ಅಮ್ಮ ಮಂದಾಕಿನಿ ಮನೆಗೆ ಬಂದಿದ್ದಾಳೆ. ಭೂಮಿಕಾ ಎಂದು ತಿಳಿದು ಮಂದಾಕಿನಿ ಮಗಳನ್ನು ಅಪ್ಪಿಕೊಂಡಿದ್ದಾಳೆ. ಆದರೆ ನಿಜಕ್ಕೂ ಅವಳು ತನ್ನದೇ ಮಗಳು ಎನ್ನುವ ಸತ್ಯ ಗೊತ್ತಿಲ್ಲ.ಅಮ್ಮನ ಅಪ್ಪುಗೆಯಿಂದ ದೀಪಿಕಾ ಪುಳಕಿತಳಾಗಿದ್ದು, ನನಗೆ ಏನೋ ರೋಮಾಂಚನ ಆಗ್ತಿದೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾಳೆ.
36
ಕರ್ಣ ಸೀರಿಯಲ್ ಸ್ಟೋರಿ
ಇನ್ನು ಕರ್ಣ ಸೀರಿಯಲ್‌ನಲ್ಲಿ ಭುವನೇಶ್ವರಿ ಉರ್ಫ್ ಸೀತಾಗೆ ಕರ್ಣ ತನ್ನ ಸ್ವಂತ ಮಗ ಎನ್ನೋದು ತಿಳಿದಿಲ್ಲ. ಆಕೆ ತನ್ನ ತಾಯಿಯ ಹುಡುಕಾಟದಲ್ಲಿ ಇದ್ದಾಳೆ.
ತಾಯಿ ಮಾರುಕಟ್ಟೆಗೆ ಹೋದಾಗ, ಸೀತಾಳ ಕಾರಿನ ಎದುರು ಬಂದಿದ್ದಾಳೆ. ಸೀತಾ ಕೆಳಕ್ಕಿಳಿದು ಅಮ್ಮನನ್ನು ನೋಡಿದ್ದಾಳೆ. ಅಮ್ಮಾ ಎಂದು ಕರೆದು ಅಪ್ಪಿಕೊಳ್ಳುವ ಮನಸ್ಸಾಗಿ ಮುಂದೆ ಹೋಗಿದ್ದಾಳೆ.
56
ಹಿಂದಿನದ್ದೆಲ್ಲಾ ನೆನಪು
ಆದರೆ ಹಿಂದಿನದ್ದೆಲ್ಲಾ ಆಕೆಗೆ ನೆನಪಾಗಿದೆ. ಅದೇನೆಂದರೆ, ರಮೇಶ್ ಸೀತಾಳನ್ನು ಮದುವೆಯಾಗದೇ ಗರ್ಭಿಣಿ ಮಾಡಿದ್ದ. ಇದಕ್ಕೆ ಕಾರಣರಾದವರನ್ನು ನನ್ನ ಎದುರಿಗೆ ತಂದು ನಿಲ್ಲಿಸಿದ ಮೇಲೆ ನೀನು ನನಗೆ ಮುಖ ತೋರಿಸುವ ಎಂದು ಅಮ್ಮ ಬೈದು ಕಳಿಸಿದ್ದು ನೆನಪಾಗಿದೆ. ಕಣ್ಣೆದುರೇ ಅಮ್ಮ ಇದ್ದರೂ ಮುಂದೆ ಹೋಗುವ ಧೈರ್ಯ ಮಾಡಲಿಲ್ಲ ಸೀತಾ. ಅಲ್ಲಿಯೇ ನಿಂತು ಅಮ್ಮಾ ಎಂದು ಕಣ್ಣೀರು ಹಾಕುತ್ತಿದ್ದಾಳೆ.
66
ವಿಧಿಯಾಟವೇ ಬೇರೆ
ಸದ್ಯ ಎರಡೂ ಸೀರಿಯಲ್ಗಳಲ್ಲಿ ಕಳೆದು ಹೋಗ ಅಮ್ಮ-ಮಗಳ ಭೇಟಿಯಾಗಿದೆ. ಆದರೆ ಬೇರೆ ಬೇರೆ ರೀತಿಯಲ್ಲಿ ವಿಧಿಯಾಟದ ಮುಂದೆ ಏನೂ ನಡೆಯಲ್ಲ ಎನ್ನುವಂತೆ ಎದುರಿಗೇ ಇದ್ದರೂ ಒಂದು ಸೀರಿಯಲ್‌ನಲ್ಲಿ, ಮಗಳನ್ನು ಗುರುತಿಸದೇ ಹೋದರೆ, ಇನ್ನೊಂದರಲ್ಲಿ ಅಮ್ಮನ ಬಳಿ ಹೋಗಲು ಮಗಳಿಗೆ ಆಗ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.