Bigg Boss Kannada ಕಿರುತೆರೆ ನಟಿ ಮಂಜು ಭಾಷಿಣಿ ಅವರು ಬಿಗ್‌ಬಾಷಿಣಿ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ತಮ್ಮ ಹೊಸ ಪಯಣದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಂಗಾರಮ್ಮ ಪಾತ್ರದ ಮೂಲಕ ಜನಪ್ರಿಯರಾಗಿದ್ದಾರೆ.
ಕಿರುತೆರೆಯ ಕಲಾವಿದೆ ಮಂಜು ಭಾಷಿಣಿ ಈ ಬಾರಿಯ ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಖಾತೆ ಮೂಲಕ ಬಿಗ್‌ಬಾಸ್ ಶೋಗೆ ಹೋಗುತ್ತಿರೋದನ್ನು ನಟಿ ಖಚಿತಪಡಿಸಿದ್ದಾರೆ. ಬಿಗ್‌ಬಾಸ್‌ಗೆ ಹೋಗುತ್ತಿರೋದ್ಯಾಕೆ ಎಂಬುದನ್ನು ಮಂಜು ಭಾಷಿಣಿ ಹೇಳಿದ್ದಾರೆ.
25
ನನ್ನ ಹೊಸ ಪಯಣ
ಇಷ್ಟು ವರ್ಷ ಹಲವು ಪಾತ್ರಗಳಲ್ಲಿ ನಟಿಸಿದ್ದು, ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಇದೀಗ ಮಂಜು ಭಾಷಿಣಿಯಾಗಿ ನಿಮ್ಮೆಲ್ಲರ ಮುಂದೆ ಬರುತ್ತಿದ್ದೇನೆ. ಇದು ನನ್ನ ಹೊಸ ಪಯಣ ಎಂದು ಮಂಜು ಭಾಷಿಣಿ ಹೇಳಿದ್ದಾರೆ. ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಸಮಾಜ ಸೇವಕಿ ಲಲಿತಾಂಬ ಅವರಿಗೆ ಶುಭವಾಗಲಿ, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.
35
ಬಿಗ್‌ಬಾಸ್ ಮನೆ
ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ನಿಮ್ಮ ಮಂಜು ಭಾಷಿಣಿಯೂ ಇರುತ್ತಾಳೆ. ಎಷ್ಟು ಚೆನ್ನಾಗಿ ಆಟ ಆಡೋಕೆ ಸಾಧ್ಯವೋ? ಎಷ್ಟು ಪ್ರಾಮಾಣಿಕವಾಗಿರೋಕೆ ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತೇನೆ. ನನ್ನ ಆಟ ಇಷ್ಟವಾದ್ರೆ ಮಾತ್ರ ವೋಟ್ ಮಾಡಿ. ಬಿಗ್‌ಬಾಸ್‌ನಿಂದ ಹೊರ ಬಂದ ನಂತರ ಎಲ್ಲರಿಗೂ ಸಿಗೋದಾಗಿ ಮಂಜು ಭಾಷಿಣಿ ಹೇಳಿದ್ದಾರೆ.
ಸದ್ಯ ಮಂಜು ಭಾಷಿಣಿ ಅವರು ಜೀ ಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಬಂಗಾರಮ್ಮ ಆಗಿ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಬಂಗಾರಮ್ಮ ಪಾತ್ರ ಪ್ರಮುಖವಾಗಿದ್ದು, ಮುಂದೆ ಏನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮಂಜು ಭಾಷಿಣಿ ಅವರು, ಮಾಯಾಮೃಗ, ಸಿಲ್ಲಿ ಲಲ್ಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಈ ಹಿಂದಿನ ಸೀಸನ್‌ನಲ್ಲಿ ಇದೇ ಧಾರಾವಾಹಿಯ ಕಲಾವಿದೆ ಹಂಸಾ, ಬಿಗ್‌ಬಾಸ್ ಪ್ರವೇಶಿಸಿದ್ದರು. ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಹಿಂದಿರುಗಲಿಲ್ಲ. ಇದೀಗ ಮತ್ತೊಮ್ಮೆ ಇದೇ ಸೀರಿಯಲ್‌ನ ಜನಪ್ರಿಯೆ ಕಲಾವಿದೆ ಬಿಗ್‌ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.