ಬ್ರಹ್ಮಗಂಟು ಧಾರಾವಾಹಿಯು ರೋಚಕ ತಿರುವು ಪಡೆದಿದ್ದು, ದೀಪಾ ಈಗ ದಿಶಾ ಆಗಿ ರೂಪಾಂತರಗೊಂಡಿದ್ದಾಳೆ. ಮಾಡೆಲಿಂಗ್ ಈವೆಂಟ್‌ಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಈ ಬದಲಾವಣೆಯ ಹಿಂದಿನ ಮೇಕಪ್ ತಯಾರಿಯ ಬಗ್ಗೆ ನಟಿ ದಿಯಾ ಪಾಲಕ್ಕಲ್ ವಿಡಿಯೋ ಹಂಚಿಕೊಂಡಿದ್ದಾರೆ.
ಬ್ರಹ್ಮಗಂಟು (Brahmagantu) ಸೀರಿಯಲ್‌ನಲ್ಲಿ ಸದ್ಯ ದೀಪಾ, ದಿಶಾ ಆಗಿ ಬದಲಾಗಿದ್ದಾಳೆ. ಈ ಸೀರಿಯಲ್‌ನಲ್ಲಿ ಸದ್ಯ ಯಾರೂ ಊಹಿಸದ ರೋಚಕ ತಿರುವಿನಲ್ಲಿ ಸಾಗಿದೆ. 'ಪ್ಲೀಸ್ ದೀಪಾ, ನಿನ್ನ ರಿಯಲ್ ಮುದ್ದು ಮುಖ ತೋರಿಸು ಕಣೆ... ಹೀಗೆ ನೋಡಲು ಆಗಲ್ಲ'... 'ಡೈರೆಕ್ಟರ್ ಸಾಹೇಬ್ರೇ ಈ ವೇಷ ಯಾವಾಗ ಬದಲಿಸ್ತೀರಾ?', 'ಇವಳ ಒರಿಜಿನಲ್ ಮುಖ ತೋರಿಸಿಲ್ಲಾ ಅಂದ್ರೆ ಸೀರಿಯಲ್ ನೋಡೋದನ್ನೇ ಬಿಟ್ಬಿಡ್ತೀವಿ ಅಷ್ಟೇ ಎಂಬ ಧಮ್ಕಿ!...' ಹೀಗೆ ಪ್ರತಿನಿತ್ಯವೂ ನಟಿಯ ನಿಜವಾದ ಮುಖವನ್ನು ನೋಡಲು ಕಾತರದಿಂದ ವೀಕ್ಷಕರು ಕಾಯುತ್ತಿದ್ದ ಸೀರಿಯಲ್ ವೀಕ್ಷಕರಿಗೆ ದೀಪಾ ದಿಶಾ ಆಗಿ ಹೆಲಿಕಾಪ್ಟರ್ ಮೂಲಕ ಧರೆಯಿಂದ ಇಳಿದು ಬಂದೇ ಬಿಟ್ಟಿದ್ದಾಳೆ.
210
ಆಕಾಶದಿಂದ ಧರೆಗಿಳಿದ ದೀಪಾ
ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿರೋ ದಿಶಾ, ಇನ್ನೇನು ಅವಳು ಟಿವಿಯಲ್ಲಿ ವೀಕ್ಷಕರಿಗೆ ಕಾಣಿಸಿಕೊಳ್ಳಬೇಕಿದೆಯಷ್ಟೇ. ಅವಳ ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ ದೀಪಾಳೇ ದಿಶಾ ಎನ್ನುವುದು ಸೌಂದರ್ಯಗೂ ಇನ್ನೂ ಗೊತ್ತಿಲ್ಲ. ಆದರೆ ದೀಪಾ ಈವೆಂಟ್ ನಡೆಯುವಲ್ಲಿ ಬರಬಾರದು ಎನ್ನೋ ಕಾರಣಕ್ಕೆ ಕಿಡ್ನ್ಯಾಪ್ ಮಾಡಿಸಿದ್ದಾಳೆ.
310
ದೀಪಾಳನ್ನು ಕಾಪಾಡಿದ ಶರತ್
ಅತ್ತ ನಾ ನಿನ್ನ ಬಿಡಲಾರೆ (Naa Ninna Bidalaare) ಶರತ್ ಬಂದು ದೀಪಾಳನ್ನು ಕಾಪಾಡಿದ್ದಾನೆ. ಇನ್ನೇನಿದ್ದರೂ ದೀಪಾ, ದಿಶಾ ಆಗಿ ಮಾಡೆಲಿಂಗ್ ನಡೆಯುತ್ತಿರುವ ಜಾಗಕ್ಕೆ ಹೆಲಿಕಾಪ್ಟರ್ ಮೂಲಕ ಬರುವುದಷ್ಟೇ ಬಾಕಿ ಇದೆ.
ಹಾಗಿದ್ದರೆ, ದೀಪಾ ದಿಶಾ ಆಗಿ ಬದಲಾಗಿದ್ದು ಹೇಗೆ?ಮೇಕಪ್ ತಯಾರಿ ಹೇಗೆ ನಡೆದಿತ್ತು ಎನ್ನುವ ಬಗ್ಗೆ ದೀಪಾ ಅರ್ಥಾತ್ ದಿಯಾ ಪಾಲಕ್ಕಲ್ (Diya Palakkal) ಅವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ದೀಪಾ ಪಾತ್ರಧಾರಿಯಾಗಿರುವ ದಿಯಾ ಅವರು ರಿಯಲ್ ಆಗಿ ಹೇಗಿದ್ದಾರೋ ಹಾಗೆಯೇ ಈಗ ಇನ್ನಷ್ಟು ಸ್ವಲ್ಪ ಮೇಕಪ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
510
ದಿನವೂ ಕಪ್ಪು ಬಣ್ಣದ ಮೇಕಪ್
ದೀಪಾ ಆಗಿ ಕಾಣಿಸಲು ದಿನವೂ ಅವರಿಗೆ ಸಾಕಷ್ಟು ಮೇಕಪ್ ಮಾಡಲಾಗುತ್ತಿದೆ. ನಟಿಯರನ್ನು ಚೆನ್ನಾಗಿ ಕಾಣುವಂತೆ ಮಾಡಲು ಮೇಕಪ್ ಮಾಡಿದರೆ, ಬ್ರಹ್ಮಗಂಟು ಸೀರಿಯಲ್‌ನಲ್ಲಿ, ಸೌಂದರ್ಯಕ್ಕಿಂತಲೂ ಗುಣವೇ ಮೇಲು ಎನ್ನುವುದನ್ನು ಸಾಬೀತು ಮಾಡಲು ದೀಪಾಳ ಮೈ-ಮುಖಕ್ಕೆಲ್ಲವೂ ಕಪ್ಪು ಬಣ್ಣ ಬಳಿಯಲಾಗುತ್ತಿದೆ.
610
ದೀಪಾಳ ಗೆಟಪ್ ಚೇಂಜ್ ಮಾಡಿಸಿದ ಅರ್ಚನಾ
ಇದೇ ಬಣ್ಣದಿಂದಲೇ ಆಕೆ ಗಂಡನ ಮನಸ್ಸನ್ನೂ ಕದ್ದು ಗೆದ್ದಿದ್ದಾಳೆ. ಆದರೆ ಮಾಡೆಲ್ ಎಂದರೆ ಹೀಗೆಯೇ ಇರಬೇಕು ಎನ್ನುವುದೊಂದು ಇರತ್ತಲ್ಲ, ಆದ್ದರಿಂದ ಮೇಕಪ್ ಮಾಡಿದ್ರೆ ಯಾರು ಹೇಗೆ ಬೇಕಾದ್ರೂ ಕಾಣಿಸ್ತಾರೆ, ನೀನು ಅದರ ಚಿಂತೆ ಬಿಡು ಎಂದು ಅರ್ಚನಾ ದೀಪಾಳ ಗೆಟಪ್ ಅನ್ನೇ ಚೇಂಜ್ ಮಾಡಿಸಿದ್ದಾಳೆ.
710
ಬ್ರಹ್ಮಗಂಟು ಕಥೆ
ಈ ಸೀರಿಯಲ್‌ನಲ್ಲಿ ದೀಪಾಳಿಗೆ ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್.... ಹಾಕಲಾಗಿದೆ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ.
810
ಕೊನೆಯಾಗುವ ಸೌಂದರ್ಯ
ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್.
910
ದಿಯಾ ಪಾಲಕ್ಕಲ್ ಹೇಳುವುದೇನು?
ತಮ್ಮ ಬಣ್ಣ ಬದಲಾವಣೆ ಮಾಡಿದ್ದ ಕುರಿತು ನಟಿ ದಿಯಾ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ದೀಪಾಳ ಬದಲಾಗಿರುವ ಗುಣದ ಬಗ್ಗೆ ಮಾತನಾಡಿದ್ದ ನಟಿ ದಿಯಾ, ಹೆಣ್ಣು ಸಹನಾಮೂರ್ತಿ ಎನ್ನುವ ಪಟ್ಟ ಕಟ್ಟಿಕೊಂಡು ಅದೆಷ್ಟೋ ಬಾರಿ ಸಹನೆಯಿಂದ ವರ್ತಿಸುವುದು ಇದೆ. ಆದರೆ ತಾಳ್ಮೆ ಮಿತಿಮೀರಿದರೆ ಅವಳೂ ಸಿಡಿದೇಳಲೇಬೇಕು. ರಿಯಲ್ ದೀಪಾಗಳಿಗೂ ಇದನ್ನೇ ಹೇಳುತ್ತಿದ್ದೇನೆ. ದೌರ್ಜನ್ಯ ಸಹಿಸಿಕೊಳ್ಳಬೇಡಿ. ನಿಮ್ಮ ಕಾಲ ಮೇಲೆ ನೀವು ನಿಲ್ಲುವುದನ್ನು ಕಲಿಯಿರಿ. ಜೊತೆಗೆ ದೌರ್ಜನ್ಯ ಮಿತಿ ಮೀರಿದರೆ ಸಿಡಿದೇಳಿ ಎಂದಿದ್ದರು.