ಮೂರನೇ ಬಾರಿ ಬದಲಾದ ‘Amruthadhare’ ಮಹಿಮಾ ಪಾತ್ರಧಾರಿ… ಹೊಸ ನಟಿ ಯಾರು?

Published : Feb 25, 2026, 11:53 PM IST

ಜೀ ಕನ್ನಡದ ಜನಪ್ರಿಯ ಧಾರಾವಾಹಿ Amruthadhare ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರಧಾರಿ ಇದೀಗ ಮೂರನೇ ಬಾರಿ ಬದಲಾಗಿದ್ದಾರೆ. ಈಗ ಹೊಸದಾಗಿ ಸೀರಿಯಲ್ ಗೆ ಎಂಟ್ರಿ ಕೊಟ್ಟಿರುವ ಆ ನಟಿ ಯಾರು? ಇವರು ಈ ಮೊದಲು ಯಾವ ಧಾರಾವಾಹಿಯಲ್ಲಿದ್ರು ಇಲ್ಲಿದೆ ಮಾಹಿತಿ. 

PREV
16
ಅಮೃತಧಾರೆ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’. ಭೂಮಿಕಾ ಮತ್ತು ಗೌತಮ್ ರ ಮಧುರ ಪ್ರೇಮದ ಕಥೆ ಇದು. ಈ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮುದ್ದಿನ ತಂಗಿ ಮಹಿಮಾ. ಇದೀಗ ಮೂರನೇ ಮಹಿಮಾ ಎಂಟ್ರಿಯಾಗಿದೆ, ಅಂದ್ರೆ ಮೂರನೇ ಬಾರಿ ಪಾತ್ರ ಬದಲಾವಣೆ ಆಗಿದೆ.

26
ಮಹಿಮಾ ಪಾತ್ರಧಾರಿ ಬದಲಾವಣೆ

ಸೀರಿಯಲ್ ಆರಂಭದಲ್ಲಿ ಮಹಿಮಾ ಪಾತ್ರದಲ್ಲಿ ಸಾರಾ ಅಣ್ಣಯ್ಯ ನಟಿಸುತ್ತಿದ್ದರು, ಆದರೆ ಅವರು ಇದ್ದಕ್ಕಿದ್ದಂತೆ ಸೀರಿಯಲ್ ನಿಂದ ದೂರ ಆದರು, ಬಳಿಕ ಇಶಿತಾ ವರ್ಷ ಆ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇಶಿತಾ ಸ್ಟಾರ್ ಸುವರ್ಣ ವಾಹಿನಿಯ ‘ರೇಣುಕಾ ಎಲ್ಲಮ್ಮ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದು, ಅವರು ಸೀರಿಯಲ್ ಬಿಟ್ಟರು

36
ರೋಹಿಣಿ ಕೃಷ್ಣ

ಇದೀಗ ರೋಹಿಣಿ ಪಾತ್ರಕ್ಕೆ ಮೂರನೇಯವರಾಗಿ ರೋಹಿಣಿ ಕೃಷ್ಣ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಇವರು ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸದಾಗಿ ಎಂಟ್ರಿ ಕೊಟ್ಟ ಈ ಹೊಸ ನಟಿ ಯಾರು? ಅವರು ಈ ಹಿಂದೆ ಯಾವ ಧಾರಾವಾಹಿಗಳಲ್ಲಿ ನಟಿಸಿದ್ದರು ನಿಮಗೆ ಗೊತ್ತೇ?

46
ಮಾಡೆಲ್ ರೋಹಿಣಿ

ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ರೋಹಿಣಿ ಕೃಷ್ಣ ಅವರು ಮಾಡೆಲ್ ಆಗಿದ್ದು, ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ ಜೊತೆಗೆ ರ್ಯಾಂಪ್ ವಾಕ್ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇವರು ಹಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

56
ರೋಹಿಣಿ ನಟಿಸಿದ ಧಾರಾವಾಹಿಗಳು

ರೋಹಿಣಿ ಗೌರಿಪುರದ ಗಯ್ಯಾಳಿಗಳು, ಪಾರು, ಸತ್ಯ, ನಿನಗಾಗಿ, ಅಮೃತಧಾರೆ ಧಾರಾವಾಹಿಯಲ್ಲಿ ನಟಿಸಿದ್ದಾರೆ. ನಿನಗಾಗಿ ಧಾರಾವಾಹಿಯಲ್ಲಿ ರಚನಾ ದೊಡ್ಡಮ್ಮನ ಮಗಳು ನಿಹಾರಿಕಾ ಆಗಿ ನಟಿಸಿದ್ದರು. ಈಕೆಗೆ ರಚನಾಳನ್ನು ನೋಡಿದ್ರೇನೆ ಆಗದಂತಹ ಪಾತ್ರ, ಒಂಥರಾ ನೆಗೆಟಿವ್ ಶೇಡ್ ಇರುವಂತಹ ಪಾತ್ರ ಇದಾಗಿತ್ತು. ಅಷ್ಟೇ ಅಲ್ಲ ಕನ್ನಡ ದೇಶದೊಳ್ ಎನ್ನುವ ಸಿನಿಮಾ ಕೂಡ ಮಾಡಿದ್ದಾರೆ.

66
ಸಿನಿಮಾ ತಾರೆಯರ ಜೊತೆ ನಂಟು

ಅಂದ ಹಾಗೆ ರೋಹಿಣಿ ಸಿನಿಮಾ ನಟರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿದ್ರೆ, ಶಿವಣ್ಣ, ಸುದೀಪ್, ಶ್ರೀಮುರಳಿ, ಧ್ಯಾನ್, ಧನಂಜಯ್ ಜೊತೆಗಿನ ಫೋಟೋ ಕಾಣಬಹುದು. ಅಷ್ಟೇ ಅಲ್ಲ ಇವರು ಚಂದನ್ ಶೆಟ್ಟಿ ಜೊತೆ ಟಖೀಲಾ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories