Published : Aug 05, 2026, 01:22 PM ISTUpdated : Aug 05, 2026, 01:24 PM IST
ಬಿಗ್ಬಾಸ್ 13ನೇ ಸೀಸನ್ನಲ್ಲಿ ಇದೇ ಮೊದಲ ಬಾರಿಗೆ ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದೆ. ವಿಡಿಯೋ ಮೂಲಕ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದು, ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಸ್ಪರ್ಧಿಗಳು ಯಾರೆಂಬುದನ್ನು ಆಗಸ್ಟ್ 16 ರಂದು ಬಹಿರಂಗಪಡಿಸಲಾಗುವುದು ಎಂದು ಕಲರ್ಸ್ ವಾಹಿನಿ ಪ್ರೊಮೋ ಮೂಲಕ ತಿಳಿಸಿದೆ.
ಬಿಗ್ಬಾಸ್ 13 (Bigg Boss 13) ಈ ಬಾರಿ ರೋಚಕತೆಯನ್ನು ಹೊಂದಿರುವುದಕ್ಕೆ ಇನ್ನೊಂದು ಕಾರಣ, ಜನ ಸಾಮಾನ್ಯರಿಗೆ ಭಾಗವಹಿಸಲು ಇದರಲ್ಲಿ ಅವಕಾಶ ಕಲ್ಪಿಸಿರೋದು. ಹೆಚ್ಚಾಗಿ ಯಾವುದೇ ಭಾಷೆಯ ಬಿಗ್ಬಾಸ್ ಇರಲಿ, ಅದರಲ್ಲಿ ಬರೋರು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು, ಅವರಲ್ಲಿ ಹೆಚ್ಚಿನವರು ಕಾಂಟ್ರವರ್ಸಿ ಮಾಡಿಕೊಂಡವರು. ಇದನ್ನು ಹೊರತುಪಡಿಸಿದರೆ ಜನಸಾಮಾನ್ಯರಿಗೆ ಅವಕಾಶ ಇಲ್ಲ.
26
ಜನಸಾಮಾನ್ಯರಿಗೆ ಅವಕಾಶ
ಆದರೆ ಈ ಬಾರಿ ಕನ್ನಡ ಸೇರಿದಂತೆ ಕೆಲವು ಭಾಷೆಗಳ ಬಿಗ್ಬಾಸ್ನಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿದೆ. ಇದಾಗಲೇ ಸಾಮಾನ್ಯ ಜನರು ಹೇಗೆ ಇದರಲ್ಲಿ ಭಾಗವಹಿಸಬೇಕು ಎನ್ನುವ ಬಗ್ಗೆ ಸೂಚನೆ ನೀಡಲಾಗಿತ್ತು. ಮೂರು ನಿಮಿಷಗಳ ವಿಡಿಯೋಮಾಡಿ, ತಮ್ಮನ್ನು ಏಕೆ ಆಯ್ಕೆ ಮಾಡಬೇಕು ಎನ್ನುವುದೂ ಸೇರಿದಂತೆ ಆ ವಿಡಿಯೋದಲ್ಲಿ ಏನೇನು ಇರಬೇಕು ಎನ್ನೋದನ್ನು ಕೇಳಲಾಗಿತ್ತು.
36
ವಿಡಿಯೋ ಮಾಡಿ ಕಳುಹಿಸಿರುವ ಜನರು
ಅದರಂತೆಯೇ ಸಹಸ್ರಾರು ಮಂದಿ ತಮ್ಮ ಕನಸನ್ನು ಸಾಕಾರಗೊಳಿಸುವ ಸಲುವಾಗಿ ವಿಡಿಯೋ ಮಾಡಿ ಆಸೆಯಿಂದ ಕಾಯುತ್ತಿದ್ದಾರೆ. ಇವರ ಪೈಕಿ ಯಾರು ಸೆಲೆಕ್ಟ್ ಆಗಿದ್ದಾರೆ, ಯಾರು ಅಗ್ನಿ ಪರೀಕ್ಷೆಯಲ್ಲಿ ಗೆದ್ದಿದ್ದಾರೆ ಎನ್ನುವ ಬಗ್ಗೆ ಹೊಸ ಪ್ರೊಮೋ ಒಂದನ್ನು ಕಲರ್ಸ್ ವಾಹಿನಿ ಶೇರ್ ಮಾಡಿದೆ.
ಅಸಂಖ್ಯ ಜನರು ತಮ್ಮ ವಿಡಿಯೋ ಕಳುಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದವರು ಒಂದಿಷ್ಟು ಮಂದಿ. ಅವರು ಯಾರು, ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ಯಾರು ಎನ್ನೋದನ್ನು ಆಗಸ್ಟ್ 16ರ ರಾತ್ರಿ 9 ಗಂಟೆಗೆ ಹೇಳುವುದಾಗಿ ಈ ಪ್ರೊಮೋದಲ್ಲಿ ತಿಳಿಸಲಾಗಿದೆ.
56
ನಿಮ್ಮ ಕನಸುಗಳು ನಮಗೆ ತಲುಪಿವೆ
ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನು ತಲುಪಿದೆ. ಕನಸುಗಳಿಗೆ ವೇದಿಕೆ ಸಜ್ಜಾಗುತ್ತಿದೆ. ಅಗ್ನಿ ಪರೀಕ್ಷೆಯನ್ನು ಎದುರಿಸಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು ಎನ್ನುವ ಕುತೂಹಲಕ್ಕೆ ಆಗಸ್ಟ್ 16ರ ರಾತ್ರಿ 9 ಗಂಟೆಯವರೆಗೆ ಕಾಯಿರಿ ಎಂದು ತಿಳಿಸಲಾಗಿದೆ.
66
ಗೋಪ್ಯತೆ ಕಾಪಾಡಲಾಗಿದೆ
ಪ್ರತಿ ಸಲದಂತೆ ಈ ಬಾರಿಯೂ ಬಿಗ್ಬಾಸ್ಗೆ ಹೋಗುವ ಸ್ಪರ್ಧಿಗಳ ಬಗ್ಗೆ ಗೋಪ್ಯತೆ ಕಾಪಾಡಲಾಗಿದೆ. ಇದಾಗಲೇ ಬಹುತೇಕ ಸ್ಪರ್ಧಿಗಳಿಗೆ ಆಹ್ವಾನ ಹೋಗಿದ್ದು, ತಯಾರಿ ಕೂಡ ನಡೆಸುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಎಲ್ಲಿಯೂ ಹೇಳದಂತೆ ಷರತ್ತು ವಿಧಿಸಿರಲಾಗುತ್ತದೆ. ಆದ್ದರಿಂದ ಜನರು ಇವರು, ಅವರು ಎಂದು ಊಹೆ ಮಾಡಬಹುದೇ ವಿನಾ ಬಿಗ್ಬಾಸ್ ಆರಂಭವಾದಾಗಲೇ ರಿಯಾಲಿಟಿ ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.