Bigg Boss Re Start Date: ಬಿಗ್‌ಬಾಸ್ ಕನ್ನಡದ ಸೆಟ್‌ಗೆ ಬೀಗ ಜಡಿಯಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮಂಗಳವಾರದ ಸಂಚಿಕೆ ಪ್ರಸಾರವಾಗಿದ್ದರೂ, ನ್ಯಾಯಾಲಯದ ಮುಂದಿನ ತೀರ್ಮಾನದವರೆಗೆ ಶೋನ ಭವಿಷ್ಯ ಅನಿಶ್ಚಿತವಾಗಿದೆ.
ಮಂಗಳವಾರ ಸಂಜೆ 7 ಗಂಟೆಗೆ ಬಿಗ್‌ಬಾಸ್ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಹೊರ ಬಂದಿದ್ದಾರೆ. ಬಿಗ್‌ಬಾಸ್ ಸೆಟ್ ಸೇರಿದಂತೆ ಇಡೀ ಜಾಲಿವುಡ್ ಸ್ಟುಡಿಯೋ ಸೀಜ್ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮಂಗಳವಾರ ಬಿಗ್‌ಬಾಸ್ ಸಂಚಿಕೆ ಪ್ರಸಾರವಾಗಿದೆ.
25
ಬುಧವಾರದ ಸಂಚಿಕೆ ಪ್ರಸಾರ ಆಗುತ್ತಾ?
ಕೆಲ ಮಾಹಿತಿಗಳ ಪ್ರಕಾರ, ಬುಧವಾರದ ಸಂಚಿಕೆಯೂ ನಿಗಧಿತ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ನಾಳೆಯೇ ನ್ಯಾಯಾಲಯದಿಂದ ರಿಲೀಫ್ ಸಿಕ್ಕರೆ ಮುಂದಿನ ಸಂಚಿಕೆಗಳು ಪ್ರಸಾರವಾಗಲಿವೆ. ನ್ಯಾಯಾಲಯದಿಂದ ಯಾವುದೇ ರಿಲೀಫ್ ಸಿಗದಿದ್ದರೆ ಬುಧವಾರದ ಸಂಚಿಕೆ ಪ್ರಸಾರವಾಗೋದು ಬಹುತೇಕ ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
35
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರಗೊಂಡು ರಾತ್ರಿ 11 ಗಂಟೆಗೆ ಮುಕ್ತಾಯವಾಗುತ್ತದೆ. ಶನಿವಾರ ಮತ್ತು ಭಾನುವಾರ ಸುದೀಪ್ ನಿರೂಪಣೆಯಲ್ಲಿ ಎರಡು ಗಂಟೆ ಪ್ರಸಾರವಾಗುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಆರಂಭವಾಗಿ ರಾತ್ರಿ 11 ಗಂಟೆಗೆ ಕೊನೆಯಾಗುತ್ತದೆ.
ಈಗಾಗಲೇ ಎಲ್ಲಾ 17 ಸ್ಪರ್ಧಿಗಳನ್ನು ಬಿಗ್‌ಬಾಸ್ ಸೆಟ್‌ನಿಂದ ಬಿಡದಿಯ ಈಗಲ್ ಟನ್ ರೆಸಾರ್ಟ್‌ಗೆ ಕರೆದುಕೊಂಡು ಹೋಗಲಾಗಿದೆ. ಮುಂದಿನ ತೀರ್ಮಾನದವರೆಗೂ ಎಲ್ಲಾ ಸ್ಪರ್ಧಿಗಳು ಇಲ್ಲಿಯೇ ಉಳಿಯಲಿದ್ದಾರೆ. ಬಿಗ್‌ಬಾಸ್ ಶೋಗೆ ಅಡ್ಡಿಯುಂಟಾಗಿದ್ದಕ್ಕೆ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡದ ಎರಡು ಬಿಗ್‌ಬಾಸ್ ಶೋಗಳನ್ನು ಮಹಾರಾಷ್ಟ್ರದ ಲೋನಾವಾಲದಲ್ಲಿ ನಡೆಸಲಾಗಿತ್ತು. ಬೆಂಗಳೂರಿನಿಂದ ಲೋನಾವಾಲ ಪ್ರಯಾಣ ದೀರ್ಘವಾಗಿದ್ದರಿಂದ 3ನೇ ಸೀಸನ್ ಬಿಡದಿಯ ಇನ್ನೋವೇಟಿವ್ ಪಿಲಂ ಸಿಟಿಯಲ್ಲಿ ನಡೆದಿತ್ತು. ಬಿಗ್‌ಬಾಸ್ ಕನ್ನಡದ ಮೊದಲ ಒಟಿಟಿ ಶೋಗೆ ಇಲ್ಲಿಯೇ ಸೆಟ್ ಹಾಕಲಾಗಿತ್ತು. ನಂತರ ತಾವರೆಕೆರೆ ಮತ್ತು ದೊಡ್ಡ ಆಲದ ಮರದ ಬಳಿ ಸೆಟ್ ಹಾಕಿ ಎರಡು ಸೀಸನ್ ನಡೆಸಲಾಗಿತ್ತು. ಈ ಬಾರಿ ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಸೆಪ್ಟೆಂಬರ್ 28ರಿಂದ 11ನೇ ಸೀಸನ್ ಆರಂಭಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.