Karna Serial: ಕರ್ಣನಿಗೆ 'ಬಯ್ಯಾ' ಎಂದ ನಿತ್ಯಾ; ಸಹೋದರನ ಜೊತೆ ಮದುವೆ ಆಗತ್ತಾ? ಸತ್ಯ ಏನು?

Published : Oct 07, 2025, 11:32 PM IST

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ಕರ್ಣನ ಮದುವೆಯ ಪ್ರೋಮೋ ರಿಲೀಸ್‌ ಆಗಿದೆ. ಈಗ ಕರ್ಣನಿಗೆ ನಿತ್ಯಾ ಬಯ್ಯಾ ಎಂದು ಕರೆದಿದ್ದಾಳೆ. ಹಾಗಾದರೆ ಕರ್ಣ ಹಾಗೂ ನಿತ್ಯಾ ಮದುವೆ ಆಗಿದ್ದು ಸುಳ್ಳಾ? ಕನಸಾ? ಸತ್ಯ ಏನು? 

PREV
15
ಪ್ರೀತಿಯಲ್ಲಿ ತೇಲಾಡ್ತಿರೋ ಜೋಡಿ

ಕರ್ಣ ಧಾರಾವಾಹಿಯಲ್ಲಿ ನಿತ್ಯಾಳ ಅರಿಷಿಣ, ಮೆಹೆಂದಿ ಶಾಸ್ತ್ರ ನಡೆದಿದೆ. ತೇಜಸ್‌ ಹಾಗೂ ನಿತ್ಯಾ ಮದುವೆ ಆಗಲು ರೆಡಿಯಾಗಿದ್ದಾರೆ. ಐ ಲವ್‌ ಯು ಎಂದು ಹೇಳಿಕೊಳ್ಳದ ನಿಧಿ, ಕರ್ಣ ಇಬ್ಬರೂ ಪ್ರೀತಿಯಲ್ಲಿ ತೇಲಾಡುತ್ತಿದ್ದಾರೆ. ಹೀಗಿರುವಾಗ ಕರ್ಣನಿಗೆ ನಿತ್ಯಾ ಬಯ್ಯಾ ಎಂದು ಹೇಳೋದಾ?

25
ಮೆಹೆಂದಿ ಹಾಕಿಸಿಕೊಳ್ಳಲು ಒತ್ತಾಯ

ಎಲ್ಲರ ಮುಂದೆ ನನ್ನ ಹುಡುಗ ನನ್ನ ಕೈಗೆ ಮೆಹೆಂದಿ ಹಚ್ಚಬೇಕು, ಅವನ ಹತ್ರ ಆಗತ್ತಾ? ಅಂತ ನಿಧಿ ಪ್ರಶ್ನೆ ಮಾಡಿದ್ದಳು. ಆಗ ಕರ್ಣ ಆಯ್ತು ಎಂದು ಹೇಳಿದ್ದನು. ಅದರಂತೆ ನಿತ್ಯಾಗೆ ಮೆಹೆಂದಿ ಹಾಕಲಾಗುತ್ತಿತ್ತು. ನಿಧಿ ಮಾತ್ರ ನಾನು ಮೆಹೆಂದಿ ಹಾಕಿಸಿಕೊಳ್ಳೋದಿಲ್ಲ ಎಂದು ಹೇಳಿದ್ದರು. ನಿತ್ಯಾ ಒತ್ತಾಯ ಮಾಡಿ ನಿಧಿಗೆ ಮೆಹೆಂದಿ ಹಾಕಿಸಿಕೋ ಅಂತ ಒತ್ತಾಯ ಮಾಡುತ್ತಿದ್ದಳು.

35
ಬಯ್ಯಾ ಎಂದ ನಿತ್ಯಾ

ಆಗ ಕರ್ಣ ಮಾರುವೇಷದಲ್ಲಿದ್ದನು. ಕರ್ಣನ ಕೈಯಲ್ಲಿ ಮೆಹೆಂದಿ ಇತ್ತು. ಅದನ್ನು ನಿತ್ಯಾ ನೋಡಿ, “ಬಯ್ಯಾ, ನೀವು ಮೆಹೆಂದಿ ಹಾಕ್ತೀರಾ? ನನ್ನ ತಂಗಿಗೆ ಮೆಹೆಂದಿ ಹಾಕಿ” ಎಂದು ಹೇಳಿದ್ದಳು. ಆಗ ಕರ್ಣ ಬಂದು, ನಿಧಿಗೆ ಮೆಹೆಂದಿ ಹಾಕಿದನು. ನಿಧಿಗೆ ಕರ್ಣನೇ ತನಗೆ ಮೆಹೆಂದಿ ಹಾಕ್ತಿರೋದು ಅಂತ ಗೊತ್ತಾಗಲೇ ಇಲ್ಲ.

45
ಅವಾಜ್‌ ಹಾಕಿದ ನಿಧಿ

“ನನ್ನ ಹುಡುಗ ನನ್ನ ಕೈಗೆ ಮೆಹೆಂದಿ ಹಾಕಬೇಕು, ನೀವು ಯಾಕೆ ಮೆಹೆಂದಿ ಹಾಕ್ತಿದೀರಾ? ನನಗೆ ಮೆಹೆಂದಿ ಹಾಕೋಕೆ ಬಂದ್ರೆ ಪಾಯಸದಲ್ಲಿ ವಿಷ ಹಾಕಿ ಕೊಡ್ತೀನಿ, ಚಚ್ಚುಬಿಡ್ತೀನಿ, ನನ್ನ ಹುಡುಗನೂ ಕೂಡ ಚಚ್ಚುತ್ತಾನೆ” ಎಂದು ಕರ್ಣನಿಗೆ, ನಿಧಿ ಅವಾಜ್‌ ಹಾಕಿದ್ದಳು. ಆಮೇಲೆ ಅವಳ ಕೈಮೇಲೆ K ಎಂದು ಬರೆದು, ನಾನೇ ಕರ್ಣ ಎಂದು ಹೇಳಿದ್ದಳು.

55
ಮದುವೆ ಆಗಿರೋದು ನಿಜವೇ?

ಈಗಾಗಲೇ ವಾಹಿನಿಯು ನಿತ್ಯಾ ಹಾಗೂ ಕರ್ಣನ ಮದುವೆ ವಿಡಿಯೋ ಪ್ರೋಮೋವನ್ನು ರಿಲೀಸ್‌ ಮಾಡಿದೆ. ರಮೇಶ್‌ ಕೂಡ ನಿತ್ಯಾ, ಕರ್ಣನ ಮದುವೆ ಮಾಡಿಸೋಕೆ ಮಸಲತ್ತು ಮಾಡುತ್ತಿದ್ದಾನೆ. ಇನ್ನೊಂದು ಕಡೆ ನಿತ್ಯಾ, ಕರ್ಣನಿಗೆ ಬಯ್ಯಾ ಎಂದು ಹೇಳಿದ್ದಾಳೆ. ಹೀಗಾಗಿ ಆ ಮದುವೆ ವಿಡಿಯೋ ಕನಸಾ ಎಂಬ ಪ್ರಶ್ನೆ ಮೂಡಿದೆ.

Read more Photos on
click me!

Recommended Stories