ಬಿಗ್ಬಾಸ್ 13ರ ಅಗ್ನಿ ಪರೀಕ್ಷೆಯಲ್ಲಿ ತೀರ್ಪುಗಾರ ವಿನಯ್ ಗೌಡ ಅವರು, ಇನ್ನೊಬ್ಬರಿಗಾಗಿ ಟಾಸ್ಕ್ ಬಿಟ್ಟುಕೊಡಲು ಮುಂದಾದ ಸ್ಪರ್ಧಿ ಶ್ರೇಯಸ್ಗೆ 'ಗೆಟ್ಔಟ್' ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಘಟನೆಯು ವಿನಯ್ ಗೌಡರ ವರ್ತನೆಯ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬಿಗ್ಬಾಸ್ 13 ರಲ್ಲಿ ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದ್ದು, ಇದಾಗಲೇ ಕೆಲವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ನಡೆದ ಅಗ್ನಿ ಪರೀಕ್ಷೆ ಸ್ಪರ್ಧೆಯಲ್ಲಿ ತೀರ್ಪುಗಾರರ ಪೈಕಿ, ವಿನಯ್ ಗೌಡ ಅವರು ನಡೆದುಕೊಂಡ ರೀತಿಗೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
26
ವಿನಯ್ ಗೌಡ ವರ್ತನೆಗೆ ಆಕ್ರೋಶ
ಖುದ್ದು ಕಿಚ್ಚ ಸುದೀಪ್ ಅವರೇ ಈ ರೀತಿಯ ವರ್ತಿಸುವುದಿಲ್ಲ. ವಿನಯ್ ಗೌಡ ಅವರದ್ದು ಅತಿಯಾಯಿತು ಎನ್ನುತ್ತಿದ್ದರೆ, ಮತ್ತೆ ಕೆಲವರು ಅದು ಅವರ ಮಾತಲ್ಲ, ಬದಲಿಗೆ ಅವರಿಗೆ ಬರುವ ಇನ್ಸ್ಟ್ರಕ್ಷನ್ ಪ್ರಕಾರ, ಅವರು ಮಾತನಾಡುತ್ತಾರಷ್ಟೇ. ಇಂಥ ಷೋಗಳಲ್ಲಿ ನಡೆಯುವುದು ಎಲ್ಲವೂ, ಅವರ ಹಾವ ಭಾವ, ರಿಯಾಕ್ಷನ್, ಮಾತು ಎಲ್ಲವೂ ಕಂಟ್ರೋಲ್ ಆಗಿರುತ್ತದೆ. ಅವರಿಗೆ ಹೇಳಿದಂತೆ ಆ್ಯಕ್ಟ್ ಮಾಡಬೇಕಷ್ಟೇ. ವಿನಾ ಕಾರಣ, ಅವರನ್ನು ದೂರಿ ಪ್ರಯೋಜನ ಇಲ್ಲ. ಇದಕ್ಕಾಗಿಯೇ ಅವರಿಗೆ ಹಣ ನೀಡೋದು, ಎಲ್ಲರೂ ಟಿಆರ್ಪಿಗಾಗಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
36
ಟ್ರೋಲ್ ಎಂಜಾಯ್
ಈ ಬಗ್ಗೆ ಖುದ್ದು ವಿನಯ್ ಗೌಡ ಅವರೇ ಹೇಳಿದ್ದು, ನಾನು ಟ್ರೋಲ್ಗಳನ್ನು ತುಂಬಾ ಎಂಜಾಯ್ ಮಾಡುತ್ತೇನೆ. ಹೆಚ್ಚು ಟ್ರೋಲ್ ಆದಷ್ಟೂ ನನಗೆ ಖುಷಿ, ಡಿಮಾಂಡ್ ಜಾಸ್ತಿಯಾಗುತ್ತದೆ ಎಂದಿದ್ದಾರೆ.
ಆದರೆ, ಇದೀಗ ವಿನಯ್ ಗೌಡ ಅವರು ಸ್ಪರ್ಧಿಯೊಬ್ಬರಿಗೆ ಗೆಟ್ಔಟ್ ಎನ್ನುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಶ್ರೇಯಸ್ ಎಂಬ ಸ್ಪರ್ಧಿಯೊಬ್ಬರು, ತಮಗಿಂತಲೂ ಅಭಿಷೇಕ್ ಎಂಬ ಸ್ಪರ್ಧಿಗೆ ಈ ಶೋನಲ್ಲಿ ಮುಂದುವರಿಯುವ ಅಗತ್ಯತೆ ಹೆಚ್ಚಿದೆ ಎಂಬ ಕಾರಣ ನೀಡಿ ತಮ್ಮ ಟಾಸ್ಕ್ ಬಿಟ್ಟುಕೊಡಲು ಮುಂದಾದರು.
56
ಅಲ್ಲಿ ಆಗಿದ್ದೇನು?
ಇದನ್ನು ಕಂಡು ಕೋಪದಿಂದ ವಿನಯ್ ಗೌಡ, ʻಈ ವೇದಿಕೆಯನ್ನು ಇನ್ಸಲ್ಟ್ ಮಾಡಬೇಡಿ, ಪ್ಲೀಸ್ ಗೆಟ್ ಔಟ್ʼ ಎಂದರು. ಅದಕ್ಕೆ ಶ್ರೇಯಸ್, ಇನ್ನೊಬ್ಬ ಸ್ಪರ್ಧಿಗೋಸ್ಕರ ನಾನು ಟಾಸ್ಕ್ ಗೀವ್ ಅಪ್ ಮಾಡಬಹುದಾ ಎಂದು ಪ್ರಶ್ನಿಸಿದರು. ಜೊತೆಗೆ ಗೆಟ್ಔಟ್ ಎಂದದ್ದಕ್ಕೆ, ನಾನಿಲ್ಲಿ ಗೆಟ್ ಔಟ್ ಅನಿಸಿಕೊಳ್ಳೋದಕ್ಕೆ ಬಂದಿಲ್ಲ. ನನಗೂ ನಿಮಗೂ ಏನಾದರೂ ವಾದ-ವಿವಾದ ಇದ್ರೆ ಗೆಟ್ ಔಟ್ ಅನ್ಬಹುದು ಎಂದರು.
66
ಟೀಕೆಗೆ ವಿನಯ್ ಗೌಡ ವರ್ತನೆ
ಅದಕ್ಕೆ ವಿನಯ್ ಗೌಡ ಅವರು, ಈ ವೇದಿಕೆ ಕೊಟ್ಟಿರೋದು, ನಿಮಗೆ ಬೇಕಾದವರಿಗೆಲ್ಲಾ ಕೊಟ್ಟು ಕೊಟ್ಟು ಹೋಗ್ತಾ ಇರೋದಕ್ಕೆ ಅಲ್ಲ ಡೋಂಟ್ ಇನ್ಸಲ್ಟ್ ದಿಸ್ ಸ್ಟೇಜ್ ಎಂದಾಗ ಶ್ರೇಯಸ್, ನಾನು ಇನ್ಸಲ್ಟ್ ಮಾಡ್ತಿಲ್ಲ ಎಂದು ಹೇಳಿ ಶೋನಿಂದ ಹೊರಕ್ಕೆ ಬಂದರು. ವಿನಯ್ ಗೌಡ ವರ್ತನೆ ಸಿಕ್ಕಾಪಟ್ಟೆ ಟೀಕೆಗೆ ಒಳಗಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.