Annayya Serial ನಟಿ ತ್ರಿವೇಣಿ ಮನೆಯಲ್ಲಿ ಹಬ್ಬದ ಸಡಗರ: ಸೆಲೆಬ್ರಿಟಿಗಳ ದಂಡು- ಕ್ಯೂಟ್​ ಫೋಟೋಸ್​ ಇಲ್ಲಿವೆ

Published : Aug 22, 2026, 01:53 PM IST

'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವು ತಾಯಿಯ ಪಾತ್ರಧಾರಿ ತ್ರಿವೇಣಿ ಅವರು ತಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ 'ಅಣ್ಣಯ್ಯ' ಧಾರಾವಾಹಿ ತಂಡದ ನಟ-ನಟಿಯರು ಹಾಗೂ ಹಿರಿಯ ಕಲಾವಿದರಾದ ತಾರಾ, ಅಂಜಲಿ ಭಾಗವಹಿಸಿದ್ದರು.

PREV
16
ಅಣ್ಣಯ್ಯನ ಅಮ್ಮ ತ್ರಿವೇಣಿ

ಅಣ್ಣಯ್ಯ (Annayya Serial) ನಲ್ಲಿ, ಶಿವು ಅಮ್ಮನ ಪಾತ್ರದಲ್ಲಿ ನಟಿಸ್ತಿರೋ ನಟಿ ತ್ರಿವೇಣಿ. ಅಮ್ಮ ಮತ್ತು ಮಕ್ಕಳ ಬಾಂಧವ್ಯವನ್ನು ಹೊಂದಿರೋ ಈ ಸೀರಿಯಲ್​ನಲ್ಲಿ ಶಿವು ಅಮ್ಮನ ರೋಲ್​ ಕುತೂಹಲ ಕೆರಳಿಸಿತ್ತು.

26
ಸೊಸೆಯಿಂದ ಮನೆ ಸೇರಿದ ಅಮ್ಮ

ಜೈಲಿನಲ್ಲಿ ಇದ್ದ ಅಮ್ಮ, ಗುಟ್ಟಾಗಿ ಮನೆ ಸೇರಿದ್ದಳು. ಸೊಸೆ ಪಾರುವಿನ ನೆರವಿನಿಂದ ಅಮ್ಮ-ಮಕ್ಕಳು ಒಂದಾಗಿದ್ದಾರೆ.ಅಮ್ಮನನ್ನು ಕಂಡರೆ ದ್ವೇಷಿಸುತ್ತಿದ್ದ ಶಿವು ಕೂಡ ಅಮ್ಮನ ಸತ್ಯ ಅರಿಯುವ ಟೈಮ್ ಬಂದಿದೆ.

36
ವರಮಹಾಲಕ್ಷ್ಮೀ ಹಬ್ಬ

ಹೀಗೆ ಅಮ್ಮನ ರೋಲ್​ ಅನ್ನು ಅತ್ಯಂತ ಸೊಗಸಾಗಿ ನಟಿಸ್ತಿರೋ ನಟಿ ತ್ರಿವೇಣಿ ಅವರು ನಿನ್ನೆ ಅರ್ಥಾತ್​ ಆಗಸ್ಟ್​ 21ರಂದು ಅದ್ಧೂರಿಯಾಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ್ದಾರೆ. ಅವರ ಮನೆಗೆ ಅಣ್ಣಯ್ಯ ಸೀರಿಯಲ್​ ತಂಡದ ನಟ,ನಟಿಯರು ಸೇರಿದಂತೆ ವಿವಿಧ ಸೆಲೆಬ್ರಿಟಿಗಳು ಹಾಜರಿದ್ದಾರೆ.

46
ಅಣ್ಣಯ್ಯ ಜೋಡಿಯಿಂದಲೂ ಪೂಜೆ

ಅಣ್ಣಯ್ಯ ಸೀರಿಯಲ್​ನ ಪಾರು ಮತ್ತು ಶಿವು ತ್ರಿವೇಣಿ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವು ಆಗಿ ವಿಕಾಶ್​ ಉತ್ತಯ್ಯ ಹಾಗೂ ಗಟ್ಟಿಮೇಳ ಸೀರಿಯಲ್‌ನಲ್ಲಿ ರೌಡಿ ಬೇಬಿ (ಅಮೂಲ್ಯ) ಅಂತಲೇ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದ ನಿಶಾ ರವಿಕೃಷ್ಣನ್ ಪಾರು ಆಗಿದ್ದಾರೆ. ಇವರೆಲ್ಲರೂ ನಟಿ ತ್ರಿವೇಣಿ ಮನೆಗೆ ಬಂದಿದ್ದಾರೆ.

56
ಹಿರಿಯ ನಟಿಯರ ಹಾಜರಿ

ಜೊತೆಗೆ ಹಿರಿಯ ನಟಿಯರಾದ ತಾರಾ, ಅಂಜಲಿ ಸೇರಿದಂತೆ ವಿವಿಧ ಸೆಲೆಬ್ರಿಟಿಗಳೂ ಬಂದಿರುವುದನ್ನು ವೈರಲ್​ ವಿಡಿಯೋಗಳಲ್ಲಿ ನೋಡಬಹುದಾಗಿದೆ.

66
ಶಿವು ತಂಗಿಯರ ಭೇಟಿ

ಜೊತೆಗೆ, ಅಣ್ಣಯ್ಯ ಸೀರಿಯಲ್​ ಇತರ ನಟ-ನಟಿಯರಾದ ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶ್ರೀನಾಥ್ ರಾಘವಿ ಅವರು ಕೂಡ ಹಾಜರಿದ್ದರು. ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿದ್ದಾರೆ. ಇದೇ ವೇಳೆ ನಟಿ ತ್ರಿವೇಣಿ ಅವರು ಎಲ್ಲರಿಗೂ ಉಡುಗೊರೆ ಕೊಟ್ಟು ಗೌರವಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories