ಬಿಗ್ ಬಾಸ್ ಕರಿಬಸಪ್ಪ ಸಾಮಾನ್ಯ ವ್ಯಕ್ತಿಯಲ್ಲ ಸರ್ಕಾರಿ ನೌಕರ; 33ನೇ ವರ್ಷದ ಸೇವೆಗೆ ಕಾಲಿಟ್ಟ ಬಾಡಿ ಬಿಲ್ಡರ್!

Published : Aug 23, 2026, 02:59 PM IST

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ, ಬಾಡಿ ಬಿಲ್ಡರ್ ಕರಿಬಸಪ್ಪ ಅವರು ಕೇವಲ ನಟರಲ್ಲ, ಬದಲಿಗೆ 32 ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರ. ತಮ್ಮ ವೃತ್ತಿಯ ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಸಾಧನೆ ವಿವರ ಇಲ್ಲಿದೆ.

PREV
16

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಬಾಡಿ ಬಿಲ್ಡರ್ ಕರಿಬಸಪ್ಪ ಅವರು ನಮ್ಮ, ನಿಮ್ಮಂತೆ ಜನಸಾಮಾನ್ಯ ವ್ಯಕ್ತಿಯಲ್ಲ. ಅವರು ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ನೌಕರನಾಗಿದ್ದಾರೆ. ಅವರು ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಾ 32 ವರ್ಷಗಳನ್ನು ಪೂರೈಸಿದ್ದು, ಇದೀಗ 33ನೇ ವರ್ಷದ ಸೇವೆಗೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಅವರಿಗೆ ಯಾವ ಸರ್ಕಾರಿ ನೌಕರಿಯಿದೆ, ನೌಕರಿಯಿದ್ದರೂ ಬಿಗ್ ಬಾಸ್ ಶೋನಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬ ಹಲವು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ..

26

ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಮಾಹಿತಿ ಹಂಚಿಕೊಂಡಿರುವ ಕರಿಬಸಪ್ಪ ಅವರು ಆಗಸ್ಟ್ 22 1994 ರಲ್ಲಿ ಕ್ರೀಡಾ ಕೋಟಾದಡಿಯಲ್ಲಿ 4ನೇ KSRP ಇಲಾಖೆ ಗೆ ನೇಮಕಗೊಂಡು 32 ವರ್ಷಗಳು ಸುಧೀರ್ಘ ಸೇವೆ ಸಲ್ಲಿಸಿ ಇಂದಿಗೆ 33ನೇ ವರ್ಷಕ್ಕೆ ಪಾದಾರ್ಪಣೆ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಪೊಲೀಸ್ ಸಮವಸ್ತ್ರದಲ್ಲಿರುವ ಫೋಟೋವನ್ನು ಹಾಗೂ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ತಮ್ಮ ಜೀವನದ ಹಲವು ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯ ಮಜಲುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

36

ಕರಿಬಸಪ್ಪ ಅವರು ಸರ್ಕಾರಿ ನೌಕರಿಯ ಜೊತೆಗೆ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅವರ ಸಾಧನೆ ಕೇವಲ ಒಂದು ಕ್ಷೇತ್ರಕಕೆ ಸೀಮಿತವಾಗಿಲ್ಲ ಎಂದು ಹೇಳಬಹುದು.

ಇನ್ನು ಪೊಲೀಸ್ ಇಲಾಖಾ ನೌಕರರ ಜಿಮ್‌ಗೂ ಕೂಡ ಜಿಮ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ವಿಡಿಯೋವನ್ನು ಕೂಡ ಕರಿಒಬಸಪ್ಪ ಹಂಚಿಕೊಂಡಿದ್ದಾರೆ.

46

ದಾವಣಗೆರೆ ಮೂಲದವರಾದ ಕರಿಬಸಪ್ಪ ಅವರು ಬಾಡಿ ಬಿಲ್ಡಿಂಗ್ ಮಾಡುತ್ತಾ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಹೀಗಾಗಿ, ಬಿಗ್ ಬಾಸ್ ಸ್ಪರ್ಧೆಗೆ ಬಂದಿದ್ದ ಕರಿಬಸಪ್ಪ ಅವರನ್ನು ಜನರು ಸಿನಿಮಾ ಹಿನ್ನೆಲೆಯುಳ್ಳವರೇ ಎಂದುಕೊಂಡಿದ್ದರು. ಆದರೆ, ಅವರು ಸರ್ಕಾರಿ ನೌಕರಿ ಮಾಡುತ್ತಲೇ ಇತರೆ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

56

ಬಿಗ್ ಬಾಸ್ ಸ್ಪರ್ಧೆ ವಿಚಾರಕ್ಕೆ ಬಂದರೆ, 12ನೇ ಸೀಸನ್‌ನಲ್ಲಿ ಬಿಗ್ ಬಾಸ್ ಮನೆಯೊಳಗೆ ಹೋದ ಕರಿಬಸಪ್ಪ ಆರಂಭದಲ್ಲಿ ತುಂಬಾ ದಿನಗಳ ಕಾಲ ಉಳಿಯುತ್ತಾರೆ ಎಂಬ ಭರವಸೆ ಮೂಡಿಸಿದ್ದರು. ಆದರೆ, ಅವರ ಅನಗತ್ಯ ಮಾತುಗಳು ಹಾಗೂ ತಮ್ಮದಲ್ಲದ ವಿಚಾರದಲ್ಲಿ ಮೂಗು ತೂರಿಸಿಕೊಂಡು ಹೋಗುವುದು ಹೆಚ್ಚಾಯಿತು. ಜೊತೆಗೆ, ಅಗತ್ಯವಿದ್ದಲ್ಲಿ ಧ್ವನಿಯೂ ಎತ್ತದಿರುವುದು ಕೂಡ ಅವರಿಗೆ ಮುಳ್ಳಾಯಿತು. ಹೀಗಾಗಿ, ಒಂದೆರಡು ವಾರಗಳಲ್ಲಿಯೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದರು.

66

ಕ್ವಾಟ್ಲೆ ಕಿಚನ್‌ನಲ್ಲಿ ರಂಜಿಸಿದ ಕರಿಬಸಪ್ಪ

ಇತ್ತೀಚೆಗೆ ಮುಕ್ತಾಯವಾದ ಕಲರ್ಸ್ ಕನ್ನಡ ವಾಹಿನಿಯ ಕ್ವಾಟ್ಲೆ ಕಿಚನ್ ಸೀಸನ್ 2ರಲ್ಲಿ ಕ್ವಾಟ್ಲೆಯಾಗಿ ಕರಿಬಸಪ್ಪ ಕಾಣಿಸಿಕೊಂಡಿದ್ದರು. ಈ ವೇಳೆ ಪ್ರತಿವಾರ ಅಡುಗೆ ಮಾಡುವ ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡಲು ಬರುತ್ತಿದ್ದ ಇವರು ಮಾತುಗಳಿಂದಲೇ ತಲೆಗೆ ಹುಳ ಬಿಡುತ್ತಿದ್ದರು. ಆದರೆ, ಇಡೀ ಅಡುಗೆಯನ್ನು ಕೆಡಿಸುವಷ್ಟು ಕ್ವಾಟ್ಲೆಯನ್ನೇನೂ ಕೊಟ್ಟಿಲ್ಲ. ಜೊತೆಗೆ, ಅಡುಗೆ ಮಾಡುವವರಿಗೆ ಸಹಾಯವನ್ನೂ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಕ್ಕಿಂತ ಹೆಚ್ಚಾಗಿ ಕ್ವಾಟ್ಲೆ ಕಿಚನ್‌ನಲ್ಲಿ ಕರಿಬಸಪ್ಪ ಹೆಚ್ಚಾಗಿ ಸರ್ವೈವ್ ಆಗಿದ್ದರು.

ಈ ವಿಡಿಯೋ ಲಿಂಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories