ಬಿಗ್ಬಾಸ್ 10ರ ನಂತರ ಸಖತ್ ಬೇಡಿಕೆಯಲ್ಲಿರುವ ನಟ ವಿನಯ್ ಗೌಡ, ಶೋನ ಸಂಭಾವನೆ ಕುರಿತ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಬಿಗ್ಬಾಸ್ನಿಂದ ತಮಗೆ ಪೇಮೆಂಟ್ ಬಂದಿಲ್ಲ ಎಂದು ಹೇಳುತ್ತಿರುವವರಿಗೆ ಚಾಟಿ ಬೀಸಿರೋ ನಟ ವಿನಯ್ ಹೇಳಿದ್ದೇನು ಕೇಳಿ…
ಬಿಗ್ಬಾಸ್ 10ರ ಖ್ಯಾತಿಯ ವಿನಯ್ ಗೌಡ ಬಿಗ್ಬಾಸ್ನಿಂದ ಬಂದ ಮೇಲೆಯೂ ಸಕತ್ ಡಿಮಾಂಡ್ ಕುದುರಿಸಿಕೊಂಡಿದ್ದಾರೆ. ಬಿಗ್ಬಾಸ್ನಲ್ಲಿ ಸದಾ ಜಗಳದಿಂದಲೇ ಫೇಮಸ್ ಆಗಿರೋ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಮೂರನೇ ರನ್ನರ್ ಅಪ್ ಆಗಿ ಮಿಂಚಿದರು.
27
ಗರಂ ಆದ ವಿನಯ್ ಗೌಡ
ಬಿಗ್ಬಾಸ್ಗೆ ಹೋದವರಿಗೆ ಸರಿಯಾದ ದುಡ್ಡು ಕೊಡುವುದಿಲ್ಲ ಎಂದು ಕೆಲವರು ಮಾತನಾಡುವುದು ಇದೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿನಯ್ ಗೌಡ ಅವರು ಈ ರೀತಿ ಹೇಳುವವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.ಹೀಗೆ ಮಾತನಾಡುವವರಿಗೆ ಕಾಮನ್ ಸೆನ್ಸ್ ಎನ್ನೋದೇ ಇಲ್ಲ. ಅದರಿಂದಲೇ ಫೇಮಸ್ ಆಗಿದ್ದಾರೆ ಎನ್ನುವ ತಲೆ ಕೂಡ ಇರುವುದಿಲ್ಲ. ಇಂಥವರಿಗೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ ಎಂದು ಗರಂ ಆಗಿದ್ದಾರೆ.
37
ಕಾಂಟ್ರಾಕ್ಟ್ ಪ್ರಕಾರವೇ ಎಲ್ಲವೂ...
ನಾವು ಬಿಗ್ಬಾಸ್ ಮನೆಯೊಳಕ್ಕೆ ಹೋಗುವಾಗ ಯಾವ ರೀತಿ ಕಾಂಟ್ರಾಕ್ಟ್ಗೆ ಸಹಿ ಹಾಕಿರುತ್ತೇವೋ ಅವೆಲ್ಲವೂ ಸಿಗುತ್ತದೆ. ಪೇಮೆಂಟ್ ಕೂಡ ಸರಿಯಾಗಿಯೇ ಸಿಗುತ್ತದೆ. ಪೇಮೆಂಟ್ ಸಿಗುವುದು ಸ್ವಲ್ಪ ವಿಳಂಬ ಆಗಬಹುದು ಅಷ್ಟೇ ಬಿಟ್ಟರೆ, ಹಣದ ವಿಷಯದಲ್ಲಿ ಯಾವುದೇ ರೀತಿಯ ಮೋಸ ಮಾಡುವುದಿಲ್ಲ. ಅಲ್ಲಿಂದಲೇ ಬಂದು ಬಾಯಿಗೆ ಬಂದಂತೆ ಮಾತನಾಡುವುದನ್ನು ಸಹಿಸಲು ಆಗುವುದಿಲ್ಲ ಎಂದಿದ್ದಾರೆ ವಿನಯ್ ಅವರು.
ನನಗಂತೂ ಅವರು ಹೇಳಿದ್ದಕ್ಕಿಂತ 10 ಲಕ್ಷ ರೂಪಾಯಿ ಹೆಚ್ಚಿಗೇ ಹಣ ಸಿಕ್ಕಿದೆ ಎಂದು ವಿನಯ್ ಗೌಡ ರಿವೀಲ್ ಮಾಡಿದ್ದಾರೆ. ಪ್ರತಿ ವಾರವೂ ಹಣದ ಸಂದಾಯ ಆಗುತ್ತದೆ. ಅಷ್ಟೇ ಅಲ್ಲದೇ ಕ್ಯಾಶ್ ಪ್ರೈಸ್ ಗೆಲ್ಲುವ ಅವಕಾಶ ಇರುತ್ತದೆ, ಇದರ ಜೊತೆಗೆ ಪ್ರಾಯೋಜಿತ (Sponsored) ಕಾರ್ಯಕ್ರಮದಿಂದಲೂ ಸಾಕಷ್ಟು ದುಡ್ಡು ಬರುತ್ತದೆ ಎಂದಿರುವ ನಟ, ನಿಯಮದ ಪ್ರಕಾರ, TDS ಕಟ್ ಆಗಿ ಬರುತ್ತದೆ ಅಷ್ಟೇ. ಅದನ್ನು ಬಿಟ್ಟರೆ ಪೂರ್ಣ ಹಣ ನಮ್ಮ ಕೈ ಸೇರುತ್ತದೆ ಎಂದಿದ್ದಾರೆ.
57
ವಿನಯ್ ಗೌಡ ಕುರಿತು...
ಇನ್ನು, ವಿನಯ್ ಗೌಡ (Bigg Boss Vinay Gowda) ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ.
67
ತೆಲುಗಿನ ಚಿತ್ರದಲ್ಲೂ ಮಾತುಕತೆ
ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದರು ಅವರು.
77
ವೆಬ್ ಸೀರಿಸ್ನಲ್ಲಿಯೂ ನಟನೆ
ಕೆಲ ದಿನಗಳ ಹಿಂದೆ ಇವರು ಇದೇ ಬಿಗ್ಬಾಸ್ನ ಮೋಕ್ಷಿತಾ ಪೈ (Mokshita Pai) ಜೊತೆ ಮಾಡುತ್ತಿರುವ ವೆಬ್ಸೀರಿಸ್ ಕುರಿತು ಮಾತನಾಡಿದ್ದರು. ಧೃತಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸೀರಿಸ್ ಇದಾಗಿದೆ. ಈಗಾಗಲೇ ಇವರ ಚಿಕ್ಕ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.