Amruthadhaare Serial : ದಿಯಾಗಾಗಿ ಹೆಂಡ್ತೀನೇ ಬಿಟ್ಟ…ಈಗ ಅದೇ ಬೇಬಿಯಿಂದ ನಡೆಯುತ್ತಾ ಜೈದೇವ್ ಅಂತ್ಯ!

Published : Sep 25, 2025, 04:19 PM IST

ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಒಂದೆಡೆ ಭೂಮಿ ಮತ್ತು ಗೌತಮ್ ಕಥೆ ನಡೆಯುತ್ತಿದ್ದರೆ, ಇನ್ನೊಂದೆಡೆ ಜೈದೇವ್ ಪ್ರೀತಿಸಿ ಮದುವೆಯಾಗಿರುವ ದಿಯಾ ಬೇಬಿನೇ ಜೆಡಿಗೆ ಒಂದು ಗತಿ ಕಾಣಿಸೋ ಪ್ಲ್ಯಾನ್ ಮಾಡ್ತಿದ್ದಾರೆ. ಜೈ ದೇವ್ ಗೆ ಹೀಗೆ ಆಗಬೇಕು ಎನ್ನುತ್ತಿದ್ದಾರೆ ಜನ. 

PREV
17
ಅಮೃತಧಾರೆ ಧಾರಾವಾಹಿ

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಎರಡೆರಡು ಟ್ವಿಸ್ಟ್ ಸಿಕ್ಕಿದೆ. ಒಂದು ಕಡೆ ಗೌತಮ್ ದಿವಾನ್ ಗೆ ಅಪ್ಪು ತನ್ನ ಮಗನೇ ಅನ್ನೋದು ಗೊತ್ತಾಗಿದೆ. ಸದ್ಯ ಮಗನೊಂದಿಗೆ ಸಮಯ ಕಳೆಯೋದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನೊಂದೆಡೆ ದಿಯಾ ಅಸಲಿ ಮುಖ ಅನಾವರಣ ಆಗಿದೆ.

27
ಮೂರು ಕೋಟಿ ಪಂಗನಾಮ ಹಾಕಿದ ಶಕುಂತಲಾ

ಗೌತಮ್ ಮನೆಬಿಟ್ಟು ಹೋದ ಬಳಿಕ ಶಕುಂತಲಾ ಲೈಫ ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ. ಸ್ಟೇಟಸ್‌ ಹೆಸರಿನಲ್ಲಿ ಕ್ಲಬ್ ಹೋಗಿ ಜೂಜಾಡಿ, ದಿನಕ್ಕೆ ಮೂರು ಕೋಟಿ ರೂಪಾಯಿ ಹಣವನ್ನು ಖಾಲಿ ಮಾಡಿದ್ದಾಳೆ ಶಕುಂತಲಾ.

37
ದಿಯಾ ಕೆಂಡಾಮಂಡಲ

ಅತ್ತೆ ಸುಮ್ ಸುಮ್ನೆ ಈ ರೀತಿ ಹಣ ಖರ್ಚು ಮಾಡಿದರೆ ನನ್ನ ಕಥೆ ಏನು? ಸಾಲ ಇದೆ, ಹಣ ಖಾಲಿ ಮಾಡುತ್ತ ಹೋದರೆ ಹೇಗೆ? ಕ್ಲಬ್‌ಗೆ ಹೋಗಿ ಕೋಟಿ ಕೋಟಿ ವೇಸ್ಟ್ ಮಾಡಿದ್ರೆ, ಬೀದಿಗೆ ಬರುವ ಪರಿಸ್ಥಿತಿ ಬರುತ್ತೆ ಎನ್ನುತ್ತಾ, ಅತ್ತೆ ಮೇಲೆ ಕೋಪ ಮಾಡಿಕೊಂಡಿದ್ದಾಳೆ ದಿಯಾ.

47
ಮನೆಯ ಕಂಟ್ರೋಲ್ ತೆಗೆದುಕೊಳ್ಳಲು ಪ್ಲ್ಯಾನ್

ಇದೀಗ ದಿಯಾ ಮನೆಯ ಎಲ್ಲಾ ಕಂಟ್ರೋಲ್ ತನ್ನ ಕೈಗೆ ತೆಗೆದುಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದಾರೆ. ಆವಾಗ ಮಾತ್ರ ಮನೆಯನ್ನು ಉಳಿಸಿಕೊಳ್ಳಬಹುದು, ಆಸ್ತಿಯನ್ನು ಉಳಿಸಿಕೊಳ್ಳಬಹುದು ಎಂದು ಯೋಚನೆ ಮಾಡಿದ್ದಾಳೆ ದಿಯಾ.

57
ಜೈ ದೇವ್ ಡ್ರಿಂಕ್ಸಲ್ಲಿ ಏನು ವೆರೆಸಿದ್ಲು ದಿಯಾ

ಇದೀಗ ದಿಯಾ ಬೆಳ್ಳಂಬೆಳಗ್ಗೆ ಜೈ ದೇವ್ ಗೆ ಅಂತ ಕುಡಿಯೋದಕ್ಕೆ ಡ್ರಿಂಕ್ಸ್ ರೆಡಿ ಮಾಡುತ್ತಿದ್ದಾರೆ. ಆ ಡ್ರಿಂಕ್ಸ್ ಏನೋ ಬೆರೆಸಿದ್ದಾಳೆ ಕೂಡ, ಅಷ್ಟರಲ್ಲಿ ಅಲ್ಲಿಗೆ ಬರುವ ಅಪ್ಪಿ ಈ ರೀತಿ ಮಾಡೋದು ತಪ್ಪು ಎಂದರೆ, ಅದಕ್ಕೇ ಉಲ್ಟಾ ಉತ್ತರಿಸಿ, ತಾನು ಏನೋ ಬೆರೆಸಿದ್ದು ಅಪ್ಪಿ ನೋಡಿಲ್ಲ ಎನ್ನುವ ಖುಷಿಯಲ್ಲಿದ್ದಾಳೆ ದಿಯಾ.

67
ಸ್ಲೋ ಪಾಯ್ಸನ್ ಕೊಡ್ತಿದ್ದಾಳ?

ಅಷ್ಟಕ್ಕೂ ದಿಯಾ ಜೈ ದೇವ್ ಡ್ರಿಂಕ್ಸಲ್ಲಿ ಬೆರೆಸಿರೋದು ಏನು? ಮತ್ತಿನ ಪುಡಿ ಬೆರೆಸಿ, ಆತನನ್ನು ಎಲ್ಲಿಗೂ ಹೋಗದಂತೆ ತಡೆಯುತ್ತಿದ್ದಾಳ ಅಥವಾ ಸ್ಲೋ ಪಾಯ್ಸನ್ ಕೊಟ್ಟು ಜೈದೇವ್ ಕಥೆ ಮುಗಿಸಿ, ಆಸ್ತಿನ ಕೊಳ್ಳೆ ಹೊಡೆಯೋ ಪ್ಲ್ಯಾನ್ ಮಾಡ್ತಿದ್ದಾಳ ಗೊತ್ತಿಲ್ಲ.

77
ವೀಕ್ಷಕರು ಏನು ಹೇಳ್ತಿದ್ದಾರೆ

ಈ ಪ್ರೊಮೋ ನೋಡಿ ವೀಕ್ಷಕರು ಜೈಗೆ ಸರಿಯಾದ ಹೆಂಡ್ತಿ ಸಿಕ್ಕಿದ್ದಾಳೆ. ಹೇಗೆ ಜೈ ಮಲ್ಲಿಗೆ ಮೋಸ ಮಾಡಿ ಈ ಬೇಬಿನ ಕಟ್ಟಿಕೊಂಡನೋ ಹಾಗೇ ದಿಯಾ ಜೈದೇವ್ ಮೋಸ ಮಾಡಿ, ಕೊನೆಗೆ ಅಮ್ಮ-ಮಗ ಬೀದಿಯಲ್ಲಿ ನಿಲ್ಲುವಂತೆ ಮಾಡುತ್ತಾಳೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories