ತಾಯಂದಿರ ದಿನ; ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ; ಹೊಸ ಹೆಸರೇನು?

Published : May 12, 2024, 03:29 PM IST

ತಾಯಂದಿರ ದಿನ ಬಹುತೇಕ ಎಲ್ಲರೂ ತಮ್ಮ ತಾಯಿ ಜೊತೆಗಿನ ಫೋಟೋ ಹಂಚಿಕೊಂಡು ಪ್ರೀತಿ ವ್ಯಕ್ತಪಡಿಸಿದ್ದರೆ, ನಟ ವಿಜಯ್ ಸೂರ್ಯ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ.

PREV
18
ತಾಯಂದಿರ ದಿನ; ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ; ಹೊಸ ಹೆಸರೇನು?

ಅಮ್ಮ ಎಂದರೆ ಆಪ್ಯಾಯಮಾನ ಭಾವ ತೇಲಿ ಹೋಗುತ್ತದೆ. ಅಮ್ಮ ಎಂದರೆ ಎಲ್ಲರಿಗೂ ಸಮಾಧಾನ, ಸಂತೋಷ, ನೆಮ್ಮದಿ.. ಅಮ್ಮಂದಿರ ದಿನ ಈ ತಾಯಿಗೊಂದು ಧನ್ಯವಾದ ಹೇಳಲು ಸಣ್ಣ ಅವಕಾಶ. 

28

ಈ ದಿನ ಹಲವಾರು ತಾರೆಯರು ತಮ್ಮ ಅಮ್ಮಂದಿರೊಡನೆ ಫೋಟೋ ಹಂಚಿಕೊಂಡು ಅವರಿಗೆ ಶುಭಾಶಯ ಹೇಳಿದ್ದಾರೆ. ತಮ್ಮ ತಾಯಿ ತಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ.

38

ಆದರೆ, 'ನಮ್ಮ ಲಚ್ಚಿ' ಖ್ಯಾತಿಯ ನಟ ವಿಜಯ್ ಸೂರ್ಯ ಒಂದು ಹೆಜ್ಜೆ ಮುಂದೆ ಹೋಗಿ, ತಾಯಂದಿರ ದಿನ ಅಮ್ಮನಿಗಾಗಿ ವಿಶೇಷ ಕೆಲಸವನ್ನು ಮಾಡಿದ್ದಾರೆ. 
 

48

ಅಮ್ಮ ತಮ್ಮ ಮುದ್ದು ಮಗಳನ್ನು ಎತ್ತಿಕೊಂಡು ಹಣೆಗೆ ಕುಂಕುಮವಿಡುತ್ತಿರುವ ಫೋಟೋ ಹಂಚಿಕೊಂಡಿರುವ ನಟ ತಾಯಿಯ ಬಗ್ಗೆ ಒಂದಿಷ್ಟು ಚಿಂತನೆ ಹರಿಬಿಟ್ಟಿದ್ದಾರೆ.
 

58

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ..

ಎಂ ಆರ್ ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ. Happy Mother’s Day Amma ಎಂದಿದ್ದಾರೆ ವಿಜಯ್‌ಸೂರ್ಯ.
 

68

ಇಷ್ಟು ಹೇಳಿದರೆ ಸಾಕಾ ? ಅಮ್ಮ ಪ್ರತಿ ಕ್ಷಣದ ಮಿಡಿತ ಅಲ್ವಾ ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ. ಇದಕ್ಕೆ ಉತ್ತರ ಹುಡುಕಲು ಹೊರಟಾಗ ಅನ್ನಿಸಿದ್ದು ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ ಎಂಬ ಭಾವ. ಅದನ್ನು ಅಳವಡಿಸಿಕೊಳ್ಳಲು ಅಮ್ಮಂದಿರ ದಿನಕ್ಕಿಂತ ವಿಶೇಷ ಸಂದರ್ಭ ಯಾವುದಿದೆ ಅಲ್ವಾ ಎಂದು ಕೇಳಿರುವ ನಟ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ. 
 

78

ಇಂದಿನಿಂದ ನಾನು ನನ್ನ ಹೆಸರನ್ನು *ವಿಜಯ್ ಲಲಿತಾ ಸೂರ್ಯ* ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು ಎಂದು ವಿಜಯ್ ಸೂರ್ಯ ಹೇಳಿದ್ದಾರೆ. 
 

88

ತಾಯಿಗಾಗಿ ತನಗೆ ಹೆಸರು ಕೊಟ್ಟ ಹೆಸರನ್ನೇ ಬದಲಿಸಿಕೊಂಡ ನಟನ ಈ ಗೆಸ್ಚರ್‌ಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Read more Photos on
click me!

Recommended Stories