ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ.. ತಾಯಿ ಜೊತೆ ಫೋಟೋ ಹಂಚಿಕೊಂಡ ಕನ್ನಡ ತಾರೆಗಳು

First Published | May 12, 2024, 2:47 PM IST

ಕನ್ನಡ ಕಿರುತೆರೆ, ಹಿರಿತೆರೆಯ ತಾರೆಗಳು ತಮ್ಮ ತಾಯಿಯ ಜೊತೆ ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ತಾಯಂದಿರ ದಿನದ ಸಂದೇಶವನ್ನೂ ಹರಿಬಿಟ್ಟು ದಿನವನ್ನು ವಿಶೇಷವಾಗಿಸಿದ್ದಾರೆ. 
 

ಅಮ್ಮ ಅಂದ್ರೆ ಎಲ್ಲರಿಗೂ ಸ್ಪೆಶಲ್, ಎಲ್ಲಕ್ಕಿಂತ ಸ್ಪೆಶಲ್. ಈ ತಾಯಂದಿರ ದಿನ ಹಲವಾರು ನಟನಟಿಯರು ತಮ್ಮ ತಾಯಿಯ ಜೊತೆಗಿನ ಫೋಟೋ ಹಂಚಿಕೊಂಡು ದಿನವನ್ನು ವಿಶೇಷವಾಗಿಸುತ್ತಿದ್ದಾರೆ. 

'ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ, ಮಮಕಾರದಲ್ಲಿ ಕಡಲು ಎಂದರೆ ತಾಯಿ...' ಎಂದು ಪ್ರಗತಿ ರಿಶಭ್ ಶೆಟ್ಟಿ ಅಮ್ಮನೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. 

Tap to resize

'ಅಮ್ಮಾ ಅಮ್ಮಾ  ಐ ಲವ್ ಯೂ, ಜನ್ಮ ಪೂರ್ತಿ ಇದೇ ಹೇಳ್ತಾ ಇರ್ತೀನಿ. ನನ್ನ ಜೊತೆ ಯಾವಾಗಲೂ ಇರೋದಕ್ಕೆ ಥ್ಯಾಂಕ್ಯೂ. ಹ್ಯಾಪಿ ಮದರ್ಸ್ ಡೇ ಲೀಲೂ' ಎಂದು ತನಿಷಾ ಕುಪ್ಪಂಡ ಬರೆದುಕೊಂಡಿದ್ದಾರೆ.

ಇನ್ನು ಕಿರುತೆರೆಯ ಖ್ಯಾತ ಸಹೋದರಿಯರಾದ ನೇಹಾ ಗೌಡ ಮತ್ತು ಸೋನು ಗೌಡ ತಮ್ಮ ತಾಯಿಯೊಂದಿಗಿನ ಫೋಟೋ ಹಂಚಿಕೊಂಡು ಜೊತೆಗೆ ಸಿಹಿಮುತ್ತಿನ ಎಮೋಜಿ ಹಾಕಿದ್ದಾರೆ. 

'ನಾನೊಬ್ಬಳು ಸ್ಟ್ರಾಂಗ್ ಮಹಿಳೆ, ಏಕೆಂದರೆ ಸ್ಟ್ರಾಂಗ್ ಮಹಿಳೆ ನನ್ನನ್ನು ಬೆಳೆಸಿದ್ದಾಳೆ' ಎಂದು ನಟಿ ಶ್ವೇತಾ ಆರ್ ಪ್ರಸಾದ್ ಅಮ್ಮನೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. 

'ನಿಮ್ಮ ಬಿಟ್ಟು ನಾನು ಇರುವ ಮಾತಿಲ್ಲ
ಓ ನನ್ನ ಜೀವಗಳೇ' ಎಂದು ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ಅಮ್ಮ ಹಾಗೂ ಅಜ್ಜಿಯೊಂದಿಗಿನ ಫೋಟೋ ಹಾಕಿದ್ದಾರೆ. 

ಸ್ಯಾಂಡಲ್ವುಡ್ ನಟಿ ನಿಧಿ ಸುಬ್ಬಯ್ಯಾ, ತಾಯಿಯೊಂದಿಗಿನ ಬಾಲ್ಯದ ಫೋಟೋಗೆ 'ಮಮ್ಮಾ ಮಿಯಾ, ಮದರ್ ಶಿಪ್, ಮಮ್ಮಾ ಬೇರ್, ಮಮ್ಮಾ ಮೈ ಮಾ' ಎಂದು ಬರೆದು ಪ್ರೀತಿ ಹಂಚಿಕೊಂಡಿದ್ದಾರೆ.

Latest Videos

click me!